ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿವಿಧೆಡೆ ನಡೆದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪುತ್ತೂರಿನ ನಾಲ್ಕು ವರ್ಷದ ಪುಟಾಣಿ ಪ್ರಾಧ್ಯ ಎನ್ ಎಂ ಇವರು ಪ್ರಥಮ ಸ್ಥಾನಗಳನ್ನು ಪಡೆದಿದ್ದಾರೆ.
ಶ್ರೀ ಉಳ್ಳಾಲ್ತಿ ಭಜನಾ ಮಂಡಳಿ ಅಮೈ ಇವರು ನಡೆಸಿದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪ್ರಥಮ,ಶ್ರೀ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರ ಶ್ರೀಧಾಮ,ಇಲ್ಲಿ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ , ಪ್ರಶಸ್ತಿ ಯುವಕ ಮಂಡಲ , ವಿಟ್ಲ ಇವರು ನಡೆಸಿದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪ್ರಥಮ, ಆದರ್ಶ ಯುವಕ ಮಂಡಲ ಮತ್ತು ದುರ್ಗಾ ಮಹಿಳಾ ಮಂಡಳಿ ನೀರ್ಕಜೆ ಇವರು ನಡೆಸಿದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ , ವಿಶ್ವ ಹಿಂದೂ ಪರಿಷತ್ ಮತ್ತು ಮೊಸರು ಕುಡಿಕೆ ಸಮಿತಿ ಪುತ್ತೂರು ಇವರು ನಡೆಸಿದ ಜಿಲ್ಲಾ ಮಟ್ಟದ ಬಾಲಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಡಿದ್ದಾಳೆ.
ಪ್ರಾಧ್ಯ ಎನ್ ಎಂ ಇವರು ಪುತ್ತೂರಿನ ಬೆದ್ರಾಳ ನಿವಾಸಿ ಕ್ಯಾಂಪ್ಕೋ ಉದ್ಯೋಗಿ ನಾಗೇಶ್ ಮತ್ತು ಶಿಕ್ಷಕಿ ಮಾಲತಿ ದಂಪತಿ ಪುತ್ರಿ.