ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನಿಂದ ಜಾಗೃತರಾಗಿ – ರಾಜೇಂದ್ರ ಕಲ್ಬಾವಿ ರಾವ್
ಕೆಲವೇ ದಿನದಲ್ಲಿ 100 ಗುರಿ ಸಾಧನೆ-ಪ್ರಮೋದ್ ಕುಮಾರ್ ಕೆ.ಕೆ
ಎಸಿಸಿಇ(ಐ)ಯಲ್ಲಿ 7 ಸಾವಿರ ಸದಸ್ಯರಿದ್ದಾರೆ- ಶ್ರೀನಿವಾಸನ್ ಸಿವಿಲ್
ಇಂಜಿನಿಯರ್ ನಲ್ಲಿ ಉತ್ತಮ ಸ್ಕೋಪ್ ಇದೆ- ಎಸ್.ಕೆ.ಆನಂದ್
ಎಸಿಸಿಇ(ಐ)ಗೆ ಪ್ರಮೋದ್ ಕುಮಾರ್ ಸೂಕ್ತ ಆಯ್ಕೆ- ಗೋಕುಲ್ದಾಸ್
ಇಂಜಿನಿಯರ್ಸ್ ಪರಿಹಾರ ಕಂಡುಕೊಳ್ಳುವ ಮನೋಭಾವ ಬೆಳೆಸಬೇಕು – ವಿಜಯವಿಷ್ಣು ಮಯ್ಯ
ಪುತ್ತೂರು: ವೃತ್ತಿಪರ ಇಂಜಿನಿಯರ್ಗಳಿಗೆ ಸಹಕಾರ ನೀಡುವುದು, ಕಾಮಗಾರಿಯಲ್ಲಿ ಗುಣಮಟ್ಟ ವೃದ್ಧಿಸುವ ನಿಟ್ಟಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಹುಟ್ಟಿಕೊಂಡ ರಾಷ್ಟ್ರೀಯ ಸಂಸ್ಥೆಯಾಗಿರುವ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ನ ಪುತ್ತೂರು ಕೇಂದ್ರದ ಉದ್ಘಾಟನೆ ಹಾಗೂ ಪದಪ್ರದಾನ ಸಮಾರಂಭವು ಸೆ.17ರಂದು ಸಂಜೆ ಪಡೀಲು ಟ್ರಿನಿಟಿ ಹಾಲ್ನಲ್ಲಿ ನಡೆಯಿತು. ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ನ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಕಲ್ಬಾವಿ ರಾವ್ ಅವರು ಕಾರ್ಯಕ್ರಮ ಉದ್ಘಾಟಿಸಿ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿದರು.
ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಸೆಂಟರ್ನ ಅಧ್ಯಕ್ಷ ಪ್ರಮೋದ್ ಕುಮಾರ್ ಕೆ.ಕೆ, ಕಾರ್ಯದರ್ಶಿ ವಿನೋದ್ ಕುಮಾರ್ ಕೆ, ಖಜಾಂಚಿ ಅಕ್ಷರ ಅಸೋಯೇಟ್ಸ್ನ ಚೇತನ್, ಆಡಳಿತ ಮಂಡಳಿ ಸದಸ್ಯರಾದ ರಾಜ್ ಕನ್ಸ್ಟಲೆನ್ಸ್ನ ವೆಂಕಟರಾಜ್ ಪಿ.ಜಿ, ವಿವೇಕಾನಂದ ಇಂಜಿನಿಯರ್ ಕಾಲೇಜಿನ ಹೆಚ್ ಒ ಡಿ ಪ್ರಶಾಂತ್, ಆಳ್ವ ಕನ್ಸ್ಟ್ರಕ್ಷನ್ನ ಚಂದ್ರಶೇಖರ್ ಆಳ್ವ ಅವರಿಗೆ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ನ ಕಾರ್ಯದರ್ಶಿ ರಾಜೇಂದ್ರ ಕಲ್ಬಾವಿ ರಾವ್ ಅವರು ಎಸೋಸಿಯೇಶನ್ನ ಬ್ಯಾಡ್ಜ್ ನೀಡುವ ಮೂಲಕ ಪದಪ್ರದಾನ ಮಾಡಿದರು.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನಿಂದ ಜಾಗೃತರಾಗಿ:
ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಕೇಂದ್ರದ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿದ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್
ಇಂಜಿನಿಯರ್ಸ್ನ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಕಲ್ಬಾವಿ ರಾವ್ ಅವರು ಪುತ್ತೂರು ಘಟಕದ ಅಸೋಸಿಯೇಶನ್ನ ಬೈಲಾ ನೀಡಿ ಮಾತನಾಡಿ, ಪುತ್ತೂರು ಸೆಂಟರ್ ನಮ್ಮ ಅಸೋಸಿಯೇಶನ್ಗೆ ಇನ್ನೊಂದು ಕೈ, ಈಗಾಗಲೇ ಸಂಸ್ಥೆಯಲ್ಲಿ ಸದಸ್ಯರ ಸಂಖ್ಯೆ ಏರುತ್ತಿದೆ. ನೂರು ದಾಟಿದ ತಕ್ಷಣ ಅಧ್ಯಕ್ಷರಿಗೆ ಜನರಲ್ ಕೌನ್ಸಿಲ್ ಸದಸ್ಯರಾಗುವ ಅವಕಾಶವಿದೆ. ಮುಂದೆ ಅವರು ರಾಷ್ಟ್ರೀಯ ಕೌನ್ಸಿಲ್ ನಿರ್ವಹಿಸಬಹುದು ಎಂದ ಅವರು ಇದಕ್ಕೆಲ್ಲಾ ನಮ್ಮಲ್ಲಿ ಸಿಸ್ಟಮ್ ಆಗಿರುವ ಬೈಲಾವಿದೆ ಎಂದರು. ಇವತ್ತು ಕಂಪೆನಿಯವರು ಡಿಪ್ರೋಮಾ ಆದರೇನು ಸಿವಿಲ್ ಇಂಜಿನಿಯರ್ ಆದರೇನು ನಮಗೆ ಕೆಲಸ ಚೆನ್ನಾಗಿ ಆಗಬೇಕು ಎಂದು ಹೇಳುತ್ತಾರೆ. ಆದರೆ ಇಂಜಿನಿಯರ್ಸ್ನ ಅಲೋಚನೆಯಿಂದ ಹೊಸ ಕಟ್ಟಡವು ಮಾಡುವ ಜೊತೆಗೆ ಹಳೆ ಕಟ್ಟಡವನ್ಬು ಕಡೆವದೆ ಮರು ಜೀವ ಕೊಡಿಸುವ ತಂತ್ರಜ್ಞಾನವು ಇದೆ. ಈ ನಿಟ್ಟಿನಲ್ಲಿ ಇಂಜಿನಿಯರಿಂಗ್ ಕಾಲೇಜಿನ ಕೋರ್ಸ್ ರೀ ಮ್ಯಾಪ್ ಮಾಡಬೇಕಾಗಿದೆ. ಈ ಕುರಿತು ಬಗ್ಗೆ ಚರ್ಚೆ ನಡೆಯುತ್ತಿದೆ. ಸಿವಿಲ್ ಇಂಜಿನಿಯರ್ಸ್ನಲ್ಲಿ ಬಿ.ಇ ಓದುವವರಿಗೆ ಹೆಚ್ಚು ಪ್ರಾಕ್ಟಿಕಲ್ ಕೊಡಬೇಕು. ಅವರಿಗೆ ಅದರಲ್ಲಿ ಹೆಚ್ಚು ಜ್ಞಾನ ಒದಗಿಸುವ ಹಾಗೆ ಮಾಡಬೇಕು. ಒಂದು ವೇಳೆ ಅವರು ಬಿಇ ಸಿವಿಲ್ ಇಂಜಿನಿಯರ್ ಆಗುವ ಬದಲು ಬಿಇ ಬಿಲ್ಡಿಂಗ್ ಇಂಜಿನಿಯರ್ ಆಗಬಹುದು ಅಥವಾ ಸರ್ವೆಯಲಿಂಗ್ ಇಂಜಿನಿಯರ್ ಕೂಡಾ ಆಗಬಹುದು. ಇವತ್ತು ಆಧುನಿಕ ತಂತ್ರಜ್ಞಾನ, ೩ಡಿ ಪ್ರಿಂಟಿಂಗ್ ವ್ಯವಸ್ಥೆಯೂ ಬೇಕು. ಇದನ್ನು ಜಾಗೃತವಾಗಿಸದಿದ್ದಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮುಂದೆ ಬಂದರೆ ಸಿವಿಲ್ ಇಂಜಿನಿಯರ್ ಬೇಡವೋ ಎಂಬ ಭಾವನೆ ತನಕ ನಾವು ತಲುಪಿದ್ದೇವೆ. ಆದ್ದರಿಂದ ನಾವು ಜಾಗೃತವಾಗಬೇಕು. ನಮ್ಮ ಕುಟುಂಬದ ಮನೆಯಲ್ಲೂ ಸಿವಿಲ್ ಇಂಜಿನಿಯರ್ಸ್ ಆಗಬೇಕು. ಈ ರೀತಿಯ ಜಾಗೃತಿಯಾದರೆ ಸಿವಿಲ್ ಇಂಜಿನಿಯರ್ ಸಾಯಲು ಸಾಧ್ಯವಿಲ್ಲ ಎಂದರು. ಪುತ್ತೂರು ಸೆಂಟರ್ನಲ್ಲಿ ಹೊಸ ಆಶಾ ಕಿರಣ ತುಂಬಲಿ ಎಂದರು. ಇದೇ ಸಂದರ್ಭದಲ್ಲಿ ಅವರು ಪುತ್ತೂರು ಘಟಕದ ಲೋಗೋ ಅನಾವರಣ ಮಾಡಿದರು.
ಕೆಲವೇ ದಿನದಲ್ಲಿ 100 ಗುರಿ ಸಾಧನೆ:
ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ನ ಪುತ್ತೂರು ಸೆಂಟರ್ ಅಧ್ಯಕ್ಷ ಪ್ರಮೋದ್ ಕುಮಾರ್ ಕೆ.ಕೆ ಅವರು ಮಾತನಾಡಿ, ಇದು ಒಂದು ದೊಡ್ಡ ಜವಾಬ್ದಾರಿ ಇರುವ ಕೇಂದ್ರವಾಗಿದೆ. ಆರಂಭದಲ್ಲಿ ಸರಕಾರಿ ಇಲಾಖೆಯಲ್ಲಿದ್ದು ಇಲ್ಲಿ ಜವಾಬ್ದಾರಿ ನಿರ್ವಹಿಸುವುದು ಸಾಧ್ಯವೇ ಎಂಬ ಪ್ರಶ್ನೆ ಇತ್ತು. ಆದರೆ ಕೇಂದ್ರದ ಬೈಲಾ ಪ್ರಕಾರ ಇಲಾಖೆಯವರು ಕೂಡಾ ಇದರಲ್ಲಿ ಎಲಿಜಿಬಲ್ ಎಂದು ಗೊತ್ತಾಯಿತು. ಇವತ್ತು ಕ್ವಾಲಿಟಿ ಮತ್ತು ತಂತ್ರಜ್ಞಾನ ಬಹಳ ಅಗತ್ಯತೆ ಇದೆ. ಎಸಿಸಿಇ(ಐ)ಯು ದೊಡ್ಡ ಜ್ಞಾನದ ಭಂಡಾರವಿದ್ದಂತೆ ಇದರಿಂದ ಕಾರ್ಮಿಕರ ಜ್ಞಾನದ ಕೊರತೆಯನ್ನು ಸರಿಪಡಿಸಿ ಮುಂದುವರಿಸಲು ಸುಲಭ ಸಾಧ್ಯ ಎಂದ ಅವರು ನಮ್ಮಲ್ಲಿ ಎಸಿಸಿಇ(ಐ) ಸೆಂಟರ್ನಲ್ಲಿ ಬಹಳಷ್ಟು ಅನುಭವುಳ್ಳವರು ಇದ್ದಾರೆ. ಪುತ್ತೂರು ಸೆಂಟರ್ನಲ್ಲಿ ಆರಂಭದಲ್ಲಿ ಸದಸ್ಯತನ ಸಂಖ್ಯೆ ಕಡಿಮೆ ಇತ್ತು. ಕಾರ್ಯಕ್ರಮದ ಕೊನೆಯ ಮೂರು ದಿನದ ಮುಂದೆ ಒಂದೇ ಬಾರಿಗೆ ಸುಮಾರು ೩೫ ಮಂದಿ ಸದಸ್ಯರಾಗುವ ಮೂಲಕ ಪ್ರಸ್ತುತ 76 ಮಂದಿ ಸದಸ್ಯರಾಗಿದ್ದಾರೆ. ಕೆಲವೇ ದಿನದಲ್ಲಿ 100ರ ಸದಸ್ಯತ್ವ ಗುರಿ ಸಾಧಿಸಲಿದ್ದೇವೆ. ಸದಸ್ಯತ್ವ ಹೆಚ್ಚು ಆಗಲು ಇತ್ತೀಚೆಗೆ ಸುದ್ದಿ ಮಾಧ್ಯಮದ ಮೂಲಕ ನಡೆದ ಕಾರ್ಯಕ್ರಮ ಕಾರಣವಾಗಿದೆ ಎಂದರು. ಮುಂದಿನ ದಿನ ಇಂಜಿನಿಯರ್ಸ್ ಮತ್ತು ಗುತ್ತಿಗೆದಾರರಿಗೆ ತರಬೇತಿ ಶಿಬಿರ, ಸ್ಕಿಲ್ ಡೆವಲಪ್ಮೆಂಟ್ ಸಹಿತ ಹಲವಾರು ಕಾರ್ಯಕ್ರಮದ ಯೋಜನೆ ಇಟ್ಟುಕೊಂಡಿದ್ದೇವೆ. ಎರಡು ವರ್ಷದಲ್ಲಿ ಸಾಧ್ಯವಾದಷ್ಟು ಕಾರ್ಯಕ್ರಮ ಮಾಡಲಿದ್ದೇವೆ ಎಂದರು.
ಎಸಿಸಿಇ(ಐ)ಯಲ್ಲಿ 7 ಸಾವಿರ ಸದಸ್ಯರಿದ್ದಾರೆ:
ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ನ ರಾಷ್ಟ್ರೀಯ ಕೋಶಾಧಿಕಾರಿ ಆರ್ ಶ್ರೀನಿವಾಸನ್ ಅವರು ಮಾತನಾಡಿ, ದೇಶದಲ್ಲಿ ಎಸಿಸಿಇ(ಐ) 42 ಸೆಂಟರ್ ಇದೆ. ಕಳೆದ ಎರಡು ವರ್ಷದಿಂದ ಈ ಸೆಂಟರ್ ಗ್ರೋತ್ ಕಂಡಿದೆ. ಇದರಲ್ಲಿ 7 ಸಾವಿರ ಇಂಜಿನಿಯರ್ಸ್ ಸದಸ್ಯರಿದ್ದಾರೆ. ನಮ್ಮ ವೆಬ್ ಸೈಟ್ಗೆ ಹೋದರೆ ಅಲ್ಲಿ ಎಲ್ಲಾ ಮಾಹಿತಿ ಲಭ್ಯವಿದೆ. ಆದಷ್ಟು ಇಂಜಿನಿಯರ್ ವಿದ್ಯಾರ್ಥಿಗಳನ್ನು ತಯಾರು ಮಾಡಿ ಎಂದರು.
ಸಿವಿಲ್ ಇಂಜಿನಿಯರ್ಸ್ಗೆ ಉತ್ತಮ ಸ್ಕೋಪ್ ಇದೆ:
ಸಿವಿಲ್ ಇಂಜಿನಿಯರ್ನಲ್ಲಿ ಆವಿಷ್ಕಾರ ಹಾಗೂ ಸಾಧಕರಾಗಿರುವ ಮಾಸ್ಟರ್ ಪ್ಲಾನರಿಯ ಆನಂದ್ ಕುಮಾರ್ ಎಸ್.ಕೆ ಮತ್ತು ರೇಖಾ ಎಸ್ ಕೆ ದಂಪತಿಯನ್ನು ಸನ್ಮಾನಿಸಲಾಯಿತು. ಸನ್ಮಾನಿತ ಎಸ್ ಕೆ ಆನಂದ್ ಅವರು ಮಾತನಾಡಿ ನಾಗರೀಕತೆ ಬೆಳೆದಾಗಿನಿಂದ ಸಿವಿಲ್ ಇಂಜಿನಿಯರ್ ಆರಂಭಗೊಂಡಿದೆ. ಸಿವಿಲ್ ಇಂಜಿನಿಯರ್ನಲ್ಲಿ ಉತ್ತಮ ಸ್ಕೋಪ್ ಇದೆ. ಸರ್ ಎಮ್.ವಿಶ್ವೇಶ್ವರಯ್ಯ ಅವರು ಮೇರು ಪರ್ವತ. ಅವರ ಒಂದಾಂಶವನ್ನಾದರೂ ನಾವು ಕಾರ್ಯಗತಗೊಳಿಸಬೇಕು. ನಮಗೆಲ್ಲರಿಗೂ ಗೆಲ್ಲುವ ಅವಕಾಶವಿದೆ ಎಂದರು.
ಎಸಿಸಿಇ(ಐ)ಗೆ ಪ್ರಮೋದ್ ಕುಮಾರ್ ಸೂಕ್ತ ಆಯ್ಕೆ:
ಲೋಕೋಪಯೋಗಿ ಇಲಾಖೆಯ ಮಂಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲಾ ಇಂಜಿನಿಯರ್ಸ್ ಎಸೋಸಿಯೇಶನ್ ಅಧ್ಯಕ್ಷ ಗೋಕುಲ್ದಾಸ್ ಅವರು ಮಾತನಾಡಿ ನಾನು ಪುತ್ತೂರಿನಲ್ಲಿ ವರ್ಕ್ ಮಾಡಿzನೆ. ಆಗ ಇಲ್ಲಿ ಆಕ್ಟೀವ್ ಅಗಿರುವ ವ್ಯಕ್ತಿ ಪ್ರಮೋದ್ ಕುಮಾರ್ ಮಾತ್ರ. ಅವರು ಸಾರ್ವಜನಿಕರ ಮತ್ತು ರಾಜಕಾರಣಿಗಳ ಜೊತೆ ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಇವತ್ತು ಇಲಾಖೆಯ ಕೆಲಸದಲ್ಲಿ ನಾನ್ ಟೆಕ್ನಿಕಲ್ ಗುತ್ತಿಗೆದಾರರು ಜಾಸ್ತಿ ಇದ್ದಾರೆ. ಅವರಿಗೆ ಮಾರ್ಗದರ್ಶನ ಬೇಕೆಬೇಕು. ಪುತ್ತೂರು ಬೆಳೆಯವ ಸಿಟಿ. ಇಲ್ಲಿ ಇಂಜಿನಿಯರ್ಸ್ ಪಾತ್ರ ಬಹಳ ಮುಖ್ಯ. ಸುಂದರ ಪುತ್ತೂರಿಗೆ ನಿಮ್ಮ ಕೊಡುಗೆ ಅಗತ್ಯ. ಉತ್ತಮವಾದ ಸೆಮಿನಾರ್ ಮಾಡಿ. ನಮ್ಮ ಅನುಭವ ಕೇವಲ ಮೊಬೈಲ್ ವಾಟ್ಸಪ್ ನಲ್ಲಿ ಶೇರ್ ಆದರೆ ಸಾಲದು ಸೆಮಿನಾರ್ ಮೂಲಕ ಪ್ರಚಿಲಿತವಾಗಲಿ ಎಂದರು.
ಇಂಜಿನಿಯರ್ಸ್ ಪರಿಹಾರ ಕಂಡುಕೊಳ್ಳುವ ಮನೋಭಾವ ಬೆಳೆಸಬೇಕು:
ಎಸಿಸಿಇ(ಐ) ಮಾಜಿ ಸೆಕ್ರೆಟರಿ ಜನರಲ್ ಆಗಿರುವ ವಿಜಯವಿಷ್ಣು ಮಯ್ಯ ಅವರು ಮಾತನಾಡಿ, ಯಾವುದೇ ವ್ಯವಸ್ಥೆಗೆ ಯಶಸ್ಸು ಪ್ರಥಮ ಪ್ರಯತ್ನದಲ್ಲಿ ಬರುವುದಿಲ್ಲ. ಇಂಜಿನಿಯರ್ಸ್ ಯಾವತ್ತೂ ಇದ್ದರೂ ಪರಿಹಾರ ಕಂಡು ಕೊಳ್ಳುವ ಮನೋಭಾವ ಬೆಳೆಸಬೇಕು. ಸಮಾಜದಲ್ಲಿ ಬೆರೆಯದಿದ್ದರೆ ನಾವು ಬೆರೆಯಲು ಸಾಧ್ಯವಿಲ್ಲ. ಪುತ್ತೂರಿನಲ್ಲಿ ಎಷ್ಟೋ ವಿಫುಲ ಅವಕಾಶವಿದೆ. ಇಂತಹ ಅವಕಾಶವನ್ನು ಇಲ್ಲಿನ ಇಂಜಿನಿಯರ್ಸ್ ಪಡೆಯಬೇಕು. ಮುಂದೆ ತಾಂತ್ರಿಕತೆಯಲ್ಲಿ ಯಾವುದೇ ಸಮಸ್ಯೆ ಇದ್ದರೆ ಪುತ್ತೂರು ಘಟಕ್ಕೆ ಹೋಗಿ ಎಂಬ ಹೆಸರು ಗಳಿಸುವಂತೆ ಈ ಸೆಂಟರ್ ಉತ್ತಮ ಕಾರ್ಯ ನಿರ್ವಹಿಸಲಿ ಎಂದು ಹಾರೈಸಿದರು.
ಎಸಿಸಿಇ(ಐ) ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಚೇತನ್ ಎಸ್, ಖಜಾಂಚಿ ಕೇಶವ್ ವೇದಕೆಯಲ್ಲಿ ಉಪಸ್ಥಿತರಿದ್ದರು. ಇಂಜಿನಿಯರ್ಗಳಾದ ನಿತಿನ್ ಶಂಕರ್, ಸತೀಶ್, ಪ್ರವೀಣ್, ರಾಜಶೇಖರ್, ಜಯಪ್ರಕಾಶ್, ಲೋಕೇಶ್, ರಾಧಾಕೃಷ್ಣ, ರಕ್ಷಿತ್, ದೇವಿಪ್ರಸಾದ್, ಆದರ್ಶ್ ಅತಿಥಿಗಳನ್ನು ಗೌರವಿಸಿದರು. ಇಂಜಿನಿಯರ್ ಕೃಷ್ಣರಾಜ್ ಪ್ರಾರ್ಥಿಸಿದರು. ಬೆಳ್ತಂಗಡಿಯ ಎಸಿಸಿಇ(ಐ) ಅಧ್ಯಕ್ಷ ಇಂಜಿನಿಯರ್ ಜಗದೀಶ್ ಪ್ರಸಾದ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಜಿನಿಯರ್ ವಿನೋದ್ ಕುಮಾರ್ ವಂದಿಸಿದರು. ಇಂಜಿನಿಯರ್ ಗಳಾದ ಸುರೇಖ, ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಆರಂಭದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಬಳಿಕ ಗಣ್ಯರು ವೇದಿಕೆಯನ್ನು ಅಲಂಕರಿಸಿದರು. ಉದ್ಘಾಟನಾ ಸಭಾ ಕಾರ್ಯಕ್ರಮದ ಆರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಸಂಗೀತ ರಸ ಸಂಜೆ ನಡೆಯಿತು. ಕಲಾವಿದ ಸಿವಿಲ್ ಇಂಜಿನಿಯರ್ ಆಗಿರುವ ಕೃಷ್ಣರಾಜ್ ಅವರ ನಿರೂಪನೆಯೊಂದಿಗೆ ಪೂರ್ಣಿಮಾ ಕೃಷ್ಣರಾಜ್ ಸಹಿತ ಅವರ ಬಳಗದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಿತು. ಕೊಯಮುತ್ತೂರು ಪರಮೇಶ್ವರ, ಸುರೇಶ್, ಶಶಿಧರ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ರಾಜಾರಾಮ್, ಪುತ್ತೂರು ಸಿವಿಲ್ ಇಂಜಿನಿಯರ್ಸ್ನ ಪದಾಧಿಕಾರಿಗಳ ಸಹಿತ ಹಲವಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನೇರ ಪ್ರಸಾರವನ್ನು ಸುದ್ದಿ ಯು ಟ್ಯೂಬ್ ಚಾನೆಲ್ನಲ್ಲಿ ಪ್ರಸಾರ ಮಾಡಲಾಗಿತ್ತು.
ಸಿವಿಲ್ ಇಂಜಿನಿಯರ್ಸ್ಗಳ ಧ್ಯೇಯೋದ್ದೇಶ, ವೃತ್ತಿ ಆದರ್ಶಗಳ ಬಗ್ಗೆ ಎಲ್ಲಾ ಸದಸ್ಯರಿಗೆ ಉತ್ತೇಜನ ನೀಡಿ ಮನೋಭಾವ ಬೆಳೆಸುವುದು. ಸಿವಿಲ್ ಇಂಜಿನಿಯರ್ಸ್ ಸಾಮಾಜಿಕ ಜವಾಬ್ದಾರಿಯನ್ನು ತಿಳಿಸುವುದು, ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಲು ವಿಶ್ವವ್ಯಾಪಿಯಿರುವ ಹೊಸ ಹೊಸ ತಂತ್ರಜ್ಞಾನ, ಮಾನದಂಡಗಳನ್ನು ಪರಿಚಯಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಬಿಇ ಇಂಜಿನಿಯರ್ ಆದವರಿಗೆ ನೇರವಾಗಿ ಸದಸ್ಯತ್ವ ಪಡೆಯಬಹುದು. ಡಿಪ್ಲೋಮಾ ಆದವರಿಗೆ ಮೂರು ವರ್ಷದ ಸೇವಾನುಭವ ಹೊಂದಿರಬೇಕು. ಅಜೀವ ಸದಸ್ಯತ್ವ ಪಡೆಯಲು ಬಿಇ ಇಂಜಿನಿಯರಿಂಗ್ ಆದವರಿಗೆ 5 ವರ್ಷ ಹಾಗೂ ಡಿಪ್ಲೋಮ ಆದವರಿಗೆ 10 ವರ್ಷದ ಸೇವಾನುಭವ ಹೊಂದಿರಬೇಕು. ವಿದ್ಯಾರ್ಥಿಗಳಿಗೂ ಸದಸ್ಯತ್ವ ಪಡೆಯಲು ಅವಕಾಶವಿದ್ದು ಶಿಕ್ಷಣ ಸಂಸ್ಥೆಯವರು ತಿಳಿಸಿದಾಗ ಅಂತಹವರಿಗೆ ಶುಲ್ಕ ರಹಿತ ಸದಸ್ಯತ್ವ ನೀಡಲಾಗುವುದು. ಕೇಂದ್ರದ ಮೂಲಕ ಆನ್ಲೈನ್ ಕಾರ್ಯಕ್ರಮಗಳ ಮೂಲಕ ವೃತ್ತಿ ನೀತಿ, ನಿಯಮಗಳ ಪಾಲನೆ, ಗುಣಮಟ್ಟದ ವೃದ್ಧಿಗೆ ಹೊಸ ಹೊಸ ತಂತ್ರಜ್ಞಾನಗಳ ಪರಿಚಯ, ಅಧ್ಯಯನ ಪ್ರವಾಸಗಳು ಹಾಗೂ ವಿದ್ಯಾರ್ಥಿಗಳಿಗೆ ವೃತ್ತಿಯ ನಿರ್ದೇಶನಗಳನ್ನು ನೀಡಲಾಗುವುದು. ಪುತ್ತೂರು ಕೇಂದ್ರದ ಕಚೇರಿಯು ಸೈನಿಕ ಭವನ ರಸ್ತೆಯ ಸಾರಥಿ ಭವನ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ.
ಪ್ರಮೋದ್ ಕೆ.ಕೆ ಅಧ್ಯಕ್ಷರು ಎಸಿಸಿಇ(ಐ) ಪುತ್ತೂರು ಘಟಕ