





ನೆಲ್ಯಾಡಿ: ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರು ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕೊಣಾಲು ಗ್ರಾಮದ ಆರ್ಲದಲ್ಲಿ ನ.20ರಂದು ಬೆಳಿಗ್ಗೆ ನಡೆದಿದೆ.


ಬೈಕ್ ಸವಾರ ರಾಜನ್ ಹಾಗೂ ಸಹಸವಾರ ಜೆಮಿನ್ ಟೋಮಿ ಗಾಯಗೊಂಡಿದ್ದಾರೆ. ಉಡುಪಿ ನಿವಾಸಿ ಮಂತೋಷ್ ಕುಮಾರ್ ಭಾರ್ತಿ ಅವರು ಬೆಂಗಳೂರಿನ ನೆಲಮಂಗಳದಲ್ಲಿ ಕಟ್ಟಡದ ಇಂಟಿರೀಯರ್ ಡಿಸೈನ್ ಕೆಲಸಕ್ಕೆ ಉಡುಪಿಯಿಂದ ಹುಂಡೈ ಐ20 ಕಾರಿನಲ್ಲಿ (ಕೆಎ20, ಎಂಇ 3332) ಚಾಲಕರಾಗಿ ದೀಪಕ್, ಗೋವಿಂದ ಮತ್ತು ಮೋನು ಎಂಬವರು ಪ್ರಯಾಣಿಕರಾಗಿ ಮಂಗಳೂರು-ಬೆಂಗಳೂರು ರಾಷ್ತ್ರೀಯ ಹೆದ್ದಾರಿ 75ರಲ್ಲಿ ಬೆಂಗಳೂರು ಕಡೆಗೆ ಕಾರು ಚಲಾಯಿಸಿಕೊಂಡು ಹೋಗುತ್ತಾ ಕೊಣಾಲು ಗ್ರಾಮದ ಆರ್ಲ ಎಂಬಲ್ಲಿಗೆ ತಲುಪಿದಾಗ ಹೆದ್ದಾರಿಯ ಏಕಮುಖ ರಸ್ತೆಯಲ್ಲಿ ವಿರುದ್ಥ ದಿಕ್ಕಾದ ನೆಲ್ಯಾಡಿ ಕಡೆಯಿಂದ ಮಾರ್ಗದ ವಿಭಾಜಕದ ಬದಿಯಲ್ಲಿ ಬರುತ್ತಿದ್ದ ಬೈಕ್(ಕೆಎ 21, ಇಇ 5979)ನ್ನು ಅದರ ಸವಾರ ಏಕಾಏಕಿಯಾಗಿ ಆತನ ಬಲ ಬದಿಗೆ ಚಲಾಯಿಸಿದ ಪರಿಣಾಮ ಕಾರಿನ ಎಡಬದಿಗೆ ಬೈಕ್ ಡಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಪರಿಣಾಮ ಬೈಕ್ ಸವಾರ ರಾಜನ್ ಹಾಗೂ ಸಹಸವಾರ ಜೆಮಿನ್ ಟೋಮಿ ಎಂಬವರಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















