ಪುತ್ತೂರು: ಜೇಸಿ ಸಂಸ್ಥೆ ಯಿಂದ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಈ ವರ್ಷದ ಕಮಲ ಪತ್ರ ಪ್ರಶಸ್ತಿಯನ್ನು ಜೇಸಿಐ ಪುತ್ತೂರಿನ ಪೂರ್ವ ಅಧ್ಯಕ್ಷ ಜೆಸಿ ಭಾರತದ ವಲಯ ತರಬೇತುದಾರಾಗಿರುವ ದಾಮೋದರ ಪಾಟಾಳಿಯವರಿಗೆ ನೀಡಿ ಗೌರವಿಸಲಾಯಿತು.ಜೇಸಿಐ ಪುತ್ತೂರು ಇದರ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ,ಜೇಸಿಐ ವಲಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ,ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಮುರಳಿ ಶ್ಯಾಮ್, ಜೇಸಿಐ ಪುತ್ತೂರಿನ ಅಧ್ಯಕ್ಷ ಸುಹಾಸ್ ಮರಿಕೆ, ಸಪ್ತಾಹದ ನಿರ್ದೇಶಕ ಮೋಹನ್ ಕೆ ಹಾಗೂ ಪೂರ್ವ ಅಧ್ಯಕ್ಷರುಗಳು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮುಕ್ರಂಪಾಡಿ ನಿವಾಸಿಯಾಗಿರುವ ದಾಮೋದರ ಪಾಟಾಳಿಯವರಯ 2009ರಲ್ಲಿ ಜೆಸಿಐ ಪುತ್ತೂರಿಗೆ ಸೇರ್ಪಡೆಗೊಂಡು ಹಲವಾರು ಹುದ್ದೆಗಳನ್ನು ನಿಭಾಯಿಸಿ 2014ರಲ್ಲಿ ವಲಯ ತರಬೇತುದಾರರಾಗಿ ಮೂಡಿಬಂದರು ವ್ಯಕ್ತಿತ್ವ ವಿಕಸನ ವ್ಯವಹಾರ ಅಭಿವೃದ್ಧಿ ಮೃದು ಕೌಶಲ್ಯ ಇಂತಹ ನೂರಾರು ತರಬೇತಿಗಳನ್ನು ನೀಡಿರುತ್ತಾರೆ. 2018ರಲ್ಲಿ ಜೆಸಿಐ ಪುತ್ತೂರಿನ ಅಧ್ಯಕ್ಷರಾಗಿ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿಯನ್ನು ಪಡೆದಿರುತ್ತಾರೆ. 2019ರಲ್ಲಿ ವಲಯ ಉಪಾಧ್ಯಕ್ಷರಾಗಿoutstanding zone vice president ಆಗಿ ಮೂಡಿ ಬಂದಿರುವ ಇವರು 2020ರಲ್ಲಿ ಜೇಸಿಐ ಭಾರತದ ರಾಷ್ಟ್ರೀಯ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಸೆಪ್ಟೆಂಬರ್ 9 ರಿಂದ 15 ರ ತನಕ ನಡೆಯುವ ಜೆಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಜೆ ಸಿ ಐ ಪುತ್ತೂರಿನ ವತಿಯಿಂದ ಈ ವರ್ಷದ ಕಮಲ ಪತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ.
ಪ್ರಸ್ತುತ ನಂದನ ವಿವಿಧೋದ್ದೇಶ ಸೌಹಾರ್ದ ಸಹಕಾರಿಯಲ್ಲಿ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.