ಇರ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ – ರೂ.1.70ಲಕ್ಷ ಲಾಭ, ಶೇ.13 ಡಿವಿಡೆಂಡ್, 40 ಪೈಸೆ ಬೋನಸ್

0

ಪುತ್ತೂರು: ಇರ್ದೆ ಹಾಲು ಉತ್ಪಾದಕರ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ.1,70,330.57 ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ.13 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 41 ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಶುಭಕರ ರೈಯವರು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಸೆ.18ರಂದು ಸಂಘದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ವರ್ಷದಲ್ಲಿ ಸಂಘವು 1,95,603.07 ಲೀಟರ್ ಹಾಲನ್ನು ಖರೀದಿಸಿದೆ. 1177 ಚೀಲ ಪಶು ಆಹಾರ ಹಾಗೂ 690 ಕೆ.ಜಿ ಲವಣ ಮಿಶ್ರಣ ಮಾರಾಟ ಮಾಡಲಾಗಿದೆ. 6573.8 ಲೀಟರ್ ಹಾಲು ಸ್ಥಳೀಯವಾಗಿ ಮಾರಾಟ ಮಾಡಲಾಗಿದ್ದು ಇದರಿಂದ ರೂ.2,94,099.80 ಹಾಗೂ 664.4ಮಾದರಿ ಹಾಲು ಮಾರಾಟದಿಂದ ರೂ.20,887 ಆದಾಯ ಬಂದಿರುತ್ತದೆ. ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಿಸಲಾಗಿದೆ.
ದ.ಕ ಹಾಲು ಒಕ್ಕೂಟದ ಡಾ.ಅನುದೀಪ್ ಮಾತನಾಡಿ, ಹಸುಗಳ ಪಾಲನೆ, ಪೋಷಣೆ ಮುಂಜಾಗ್ರತಾ ಕ್ರಮಗಳು, ವಿಮೆಯ ಸೌಲಭ್ಯಗಳು, ಒಕ್ಕೂಟದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ, ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಬಹುಮಾನ ವಿತರಣೆ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಜಯಂತಿ ಬಿ.ಆರ್(ಪ್ರ), ರಾಮಣ್ಣ ಪೂಜಾರಿ (ದ್ವಿ), ಅಜಿತಾ ಶಂಕರಿ(ತೃ) ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು.
ಸಂಘದ ನಿರ್ದೇಶಕರಾದ ಚಂದ್ರಶೇಖರ ರೈ, ಸೇಸಪ್ಪ ಗೌಡ, ನಾರಾಯಣ ಪಿ., ಅಜಿತಾ ಶಂಕರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ಶುಭಕರ ರೈ ಸ್ವಾಗತಿಸಿದರು. ಕಾರ್ಯದರ್ಶಿ ರಾಜರಾಮ ಭಟ್ ವರದಿ,‌ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ದಿನೇಶ್ ರೈ ಬಾಳೆಹಿತ್ಲು ವಂದಿಸಿದರು. ಸಹಾಯಕ ಹಮೀದ್ ಸಹಕರಿಸಿದರು.

LEAVE A REPLY

Please enter your comment!
Please enter your name here