ಸುನೈಪ್ ವಿಟ್ಲ ಕನ್ನಡಕ್ಕೆ ಅನುವಾದಿಸಿದ ‘ತಾಜ್ ಮಹಲ್ಲಿನ ಖೈದಿಗಳು’ ಕೃತಿ ಬೆಂಗಳೂರಿನಲ್ಲಿ ಬಿಡುಗಡೆ

0

ಬೆಂಗಳೂರು: ಶಿಹಾಬುದ್ದೀನ್ ಪೊಯ್ತುಂಕಡವು ಅವರ ಮಲಯಾಳಂ ಭಾಷೆಯ ಆಯ್ದ ಕೃತಿಗಳನ್ನು ಸುನೈಪ್ ವಿಟ್ಲ ಕನ್ನಡಕ್ಕೆ ಅನುವಾದಿಸಿದ ಕೃತಿ ‘ತಾಜ್ ಮಹಲ್ಲಿನ ಖೈದಿಗಳು’ ಇಂದು ನಗರದ ಗಾಂಧಿ ಭವನದಲ್ಲಿ ಬಿಡುಗಡೆಗೊಂಡಿತು.

ಪುಸ್ತಕ ಬಿಡುಗಡೆ ಮಾಡಿದ ಹಿರಿಯ ಕವಯತ್ರಿ ಲಲಿತಾ ಸಿದ್ದಬಸವಯ್ಯಾ ಮಾತನಾಡಿ, ಸಾಹಿತ್ಯದಲ್ಲಿ ಸಾಹಿತ್ಯ ಧರ್ಮ ಪಾಲನೆಯಾಗಬೇಕು, ಸಾಹಿತ್ಯ ಧರ್ಮವೆಂದರೆ ಮನುಷ್ಯನನ್ನು ಸಕಲ ಚರಾಚರದೊಂದಿಗೆ ಬೆಸೆಯುವ ಕ್ರಿಯೆ ಎಂದು ಹೇಳಿದರು.ಕೇಶವ ಮಳಗಿ ಮಾತನಾಡಿ, ಅನುವಾದಕರು ಮೂಲ‌ ಲೇಖಕರಿಗೆ ದಕ್ಕೆಯಾಗದಂತೆ ಅನುವಾದಿಸಬೇಕು, ಮೂಲದಲ್ಲಿರದ ವಿಷಯಗಳನ್ನು ಅನುವಾದಕರು ತಮ್ಮ ಜೇಬಿನಿಂದ ಬುಟ್ಟಿ ಇಳಿಸುವ ಕಾರ್ಯಕ್ಕೆ ಮುಂದಾಗಬಾರದು ಎಂದರು.

ಕೃತಿಯ ಮೂಲ ಲೇಖಕ ಶಿಹಾಬುದ್ದೀನ್ ಪೊಯ್ತುಂಕಡವು ಮಾತನಾಡಿ, ಪ್ರಸ್ತುತ ವಚನ ಚಳವಳಿಯ ಅಗತ್ಯತೆ ಹೆಚ್ಚಾಗಿದೆ.ಹೊಸಕಾಲದ ಸಾಹಿತ್ಯಗಳು ಪರಸ್ಪರ ಭಾಷೆಗಳಿಗೆ ಅನುವಾದಗೊಳ್ಳುವ ಸಂಖ್ಯೆ ಕಡಿಮೆಯಾಗಿದ್ದು ಕೋಮು ದ್ವೇಷಗಳ‌ ದಳ್ಳುರಿ ನಡೆಯುತ್ತಿರುವ ಈ ಕಾಲಗಟ್ಟದಲ್ಲಿ ವಚನ ಚಳುವಳಿಯ ಪ್ರಸ್ತುತತೆಯ ಬಗ್ಗೆ ಮಾತನಾಡಿದರು.

ಅನುವಾದಕ ಸುನೈಪ್ ವಿಟ್ಲ ಮಾತನಾಡಿ, ಮಲಯಾಳಂ ನಿಂದ ಕನ್ನಡಕ್ಕೆ ಹಲವಾರು ಸಾಹಿತ್ಯಗಳು ಅನುವಾದಗೊಳ್ಳುತ್ತಿವೆ, ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡದಿಂದ ಮಲಯಾಳಂ ಗೆ ಅನುವಾದವಾಗುವ ಕೃತಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು.ಚರಣ್ ಐವರ್ನಾಡು ಸ್ವಾಗತಿಸಿ ನಿರೂಪಿಸಿದರು, ಮುನೀರ್ ಕಾಟಿಪಳ್ಳ ವಂದಿಸಿದರು.

LEAVE A REPLY

Please enter your comment!
Please enter your name here