





ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷದಲ್ಲಿ ಮಳೆ ಕೊರತೆಯಿಂದಾಗಿ ರೈತರು ಕೃಷಿ ಕಾರ್ಯ ಮಾಡದೇ ಕಂಗಾಲಗಿದ್ದಾರೆ. ಈಗಾಗಲೇ ಸರಕಾರ ಮೂಡಬಿದ್ರೆ ಮತ್ತು ಮಂಗಳೂರು ತಾಲೂಕುಗಳನ್ನು ಬರಪೀಡಿತ ತಾಲೂಕೆಂದು ಘೋಷಣೆ ಮಾಡಿ ಪುತ್ತೂರು, ಸುಳ್ಯ, ಕಡಬ, ಬಂಟ್ವಾಳವನ್ನು ಕೈ ಬಿಟ್ಟಿದ್ದಾರೆ. ಇದು ಜನ ಸಾಮಾನ್ಯರಿಗೆ ಅನ್ಯಾಯ ಮಾಡಿದಂತಾಗಿದೆ. ಹಾಗಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬರಪೀಡಿತ ಜಿಲ್ಲೆಯನ್ನಾಗಿ ಮಾಡುವಂತೆ ಮಾಜಿ ಶಾಸಕ ಸಂಜೀವ ಮಠಂದೂರು ಸರಕಾರವನ್ನು ಆಗ್ರಹಿಸಿದ್ದಾರೆ.


ಕರಾವಳಿಯಲ್ಲಿ ಸರಾಸರಿ 4ಸಾವಿರ ದಿಂದ 5 ಸಾವಿರ ಮಿ.ಮೀ ಮಳೆಯಾಗುತ್ತಿದ್ದು, ಈ ವರ್ಷ ಇವತ್ತಿನ ತನಕ 3,100 ಮಿ.ಮೀ ಮಳೆಯಾಗಿದೆ. ಸರಾಸರಿ 3,600 ಮಿ ಮೀ ಮಳೆ ಕೊರತೆಯಿಂದ ಕೃಷಿಕಾರ್ಯ ಕುಂಟಿತವಾಗಿದೆ. ಮುಂದಿನ ದಿನ ಜಾನುವಾರುಗಳಿಗೆ ಮೇವಿನ ಕೊರತೆ, ಕೃಷಿಗೆ ನೀರಿನ ಅಭಾವ ಹಾಗು ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಸರಕಾರ ಇದನ್ನು ಮನಗಂಡು ಈಗಾಗಲೇ ಕೆಲವು ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ದ.ಕ.ಜಿಲ್ಲೆಯಲ್ಲಿ ಮೂಡಬಿದ್ರೆ ಹಾಗು ಮಂಗಳೂರು ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ. ಪುತ್ತೂರು, ಸುಳ್ಯ, ಕಡಬ,ಬಂಟ್ವಾಳ, ಬೆಳ್ತಂಗಡಿಯನ್ನು ಕೈ ಬಿಡಲಾಗಿದೆ. ಜನಸಾಮಾನ್ಯರಿಗೆ ಇದರಿಂದ ಅನ್ಯಾಯವಾಗಿದೆ. ಆದ್ದರಿಂದ ಸರಕಾರ ತಕ್ಷಣ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬರ ಪೀಡಿತ ಜಿಲ್ಲೆಯೆಂದು ಘೋಷಣೆ ಮಾಡುವಂತೆ ಅವರು ಸರಕಾರವನ್ನು ಆಗ್ರಹಿಸಿದ್ದಾರೆ.







 
            
