ಪುತ್ತೂರು : ಕಲಾವಿದನ ಮನಸ್ಸಿನಲ್ಲಿ ಅರಳುವ ಕಲಾಗಾರಿಕೆಗೆ ಇಂತಹದ್ದೇ ವಸ್ತು ಎಂಬುದ್ದಿಲ್ಲ .ಅದು ಎಲ್ಲಿಯೂ ಬೇಕಾದರೂ ಅರಳುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಕಳೆದ ಹಲವಾರು ವರ್ಷಗಳಿಂದ ಪ್ರಕೃತಿಗೆ ಹಾನಿಯನ್ನು ಉಂಟು ಮಾಡದ ವಸ್ತುಗಳಿಂದ ನಾನಾ ರೀತಿಯಲ್ಲಿ ಗಣೇಶನ ಮೂರ್ತಿಯನ್ನು ರಚಿಸುತ್ತಿರುವ ಕಲ್ಲಾರೆಯಲ್ಲಿರುವ ವರ್ಣಕುಟೀರದ ಪ್ರವೀಣ್ ಈ ಬಾರಿ ನೀರಿನಲ್ಲಿ ತೇಲುವ ಎಎಸಿ ಬ್ಲಾಕ್ಗಳಿಂದ ಐದು ಗಣಪತಿ ವಿಗ್ರಹಗಳನ್ನು ರಚಿಸಿದ್ದಾರೆ.
ಪ್ರಕೃತಿಗೆ ಯಾವುದೇ ಹಾನಿಯನ್ನು ಮಾಡದ ವಸ್ತುಗಳಿಂದ ನಾನಾ ರೀತಿಯ ಗಣಪನ ವಿಗ್ರಹ ಮಾಡುತ್ತಾ ಬಂದಿರುವ ಕಲ್ಲಾರೆ ಕಾವೇರಿ ಕಾಂಪ್ಲೆಕ್ಸ್ನಲ್ಲಿ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಪ್ರವೀಣ್ ಅವರು ಈ ಹಿಂದೆ ಮಾಡಿದ ಒಂದು ಸಾಸಿವೆ ಕಾಳಿನಲ್ಲಿ ರೇಖಾ ಚಿತ್ರ, ಬಿದಿರಿನಲ್ಲಿ ಮಾಡಿದ ಗಣಪ, ಪ್ರೇಮ್ ಒಯಸೀಸ್ ಬ್ರಿಗ್ಸ್, ಡೀಪ್ ಶೀಟ್ ಒಂದು ಪೆನ್ಸಿಲ್ ಮೊನೆಯ ಗಣಪನ ಕೆತ್ತನೆ ಶಿಲ್ಪ, ಮಣ್ಣಿನಿಂದ ಮಾಡಿದ ಪುಟ್ಟ ಗಣಪ, ಪೆನ್ನಿನ ರೀಫಿಲ್ನಲ್ಲಿ, ಐಸ್ಕ್ಯಾಂಡಿ ಕಡ್ಡಿಯಲ್ಲಿ, ಬೆಂಕಿ ಕಡ್ಡಿಯಲ್ಲಿ ಮಾಡಿದ ಗಣಪ, ಎಲೆಕ್ಟ್ರಾನಿಕ್ ಬಿಡಿಭಾಗಗಳಲ್ಲಿ ಸಣ್ಣ ಸಣ್ಣ ಗಣಪ, ಮೋಲ್ಡಿಟ್ ಎಂಬ ವಸ್ತುವಿನಿಂದ ಮೂಡಿದ ಗಣಪತಿ ಮೂರ್ತಿಗಳು, ನೀರಿನ ಪೈಪ್ ಮತ್ತು ವಯರಿಂಗ್ ಪೈಪ್ಗಳ ತುಂಡುಗಳನ್ನು ಬಳಸಿಕೊಂಡು ಪಂಚ ಭೂತಗಳನ್ನು ಗಣಪತಿ ಮೂರ್ತಿ ಪ್ರಸಿದ್ದಿ ಪಡೆದಿತ್ತು.ಇದೀಗ ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿರುವ ಕಟ್ಟಡಗಳ ಪಾರ್ಟಿಷಿಯನ್ ಮಾಡಲು ಬಳಸುವ ಪರಿಸರ ಪ್ರೇಮಿ ತೇಲುವ ಎಎಸಿ ಬ್ಲಾಕ್ನಿಂದ ಐದು ವಿಭಿನ್ನ ಗಣಪತಿಯ ಮೂರ್ತಿಯನ್ನು ರಚಿಸಿದ್ದಾರೆ. ಇದು ನೋಡಲು ಶಿಲೆ ಕಲ್ಲಿನಿಂದ ನಿರ್ಮಾಣ ಮಾಡಿದಂತೆ ಕಂಡರೂ ಅದು ಹಗುರವಾಗಿದೆ. ಕಚೇರಿ, ಸಂಸ್ಥೆಗಳಲ್ಲಿ ಇದನ್ನು ಬಳಕೆ ಮಾಡಬಹುದಾಗಿದೆ. ವರ್ಣಕುಟೀರದಲ್ಲಿ ಮಕ್ಕಳಲ್ಲಿ ಪರಿಸರ ರಕ್ಷಣೆ ಕುರಿತು ಜಾಗೃತಿ ಮತ್ತು ಮಕ್ಕಳಿಗೆ ಕ್ರಾಫ್ಟ್ ಗಳನ್ನು ಕಳೆದ ಹಲವು ವರ್ಷಗಳಿಂದ ಹೇಳಿಕೊಡುತ್ತಾ ಬಂದಿದ್ದು, ಈ ಸಂಸ್ಥೆಯಲ್ಲಿ ಹಲವಾರು ವಿದ್ಯಾರ್ಥಿಗಳು ಚಿತ್ರಕಲಾ, ಕ್ಲೇ ಮೊಡೆಲಿಂಗ್, ಸ್ಯಾಂಡ್ವುಡ್ ಆರ್ಟ್, ಸಂಗೀತ, ಕೀ ಬೋರ್ಡ್ ಶಿಕ್ಷಣ ಪಡೆಯುತ್ತಿದ್ದಾರೆ.