ಕೊಕ್ಕಡ: ಜೇಸಿ ಸಪ್ತಾಹ -ಅಶಕ್ತರಿಗೆ ನೆರವು

0

ನೆಲ್ಯಾಡಿ: ಕೊಕ್ಕಡ ಕಪಿಲಾ ಜೇಸಿಐನ ಜೇಸಿ ಸಪ್ತಾಹ-2023ರ ಸಮಾರೋಪ ಸಮಾರಂಭದ ಅಂಗವಾಗಿ ಸೆ.17ರಂದು ಮನೆ ಮನೆ ಭೇಟಿ ನಡೆಸಲಾಯಿತು.
ಆಯ್ದ ಗ್ರಾಮಗಳಲ್ಲಿನ ಹಿರಿಯ ನಾಗರಿಕರು, ಅಶಕ್ತರ ಸಮೀಕ್ಷೆ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ನಿಡ್ಲೆ ಗ್ರಾಮ ಕಲ್ಕುಡ ಗುಡ್ಡೆ ಸಂಜೀವ ಎಂ.ಕೆ ಅವರ ಪತ್ನಿ ಪ್ರೇಮ ಅವರ ಚಿಕಿತ್ಸೆಗೆ ನೆರವು ನೀಡಲಾಯಿತು. ವಿವಿಧ ಕಾಯಿಲೆ ಪೀಡಿತರ ಯೋಗ ಕ್ಷೇಮ ವಿಚಾರಿಸಿ ಆತ್ಮ ಸ್ಥೈರ್ಯ ತುಂಬಲಾಯಿತು. ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಹಾಗೂ ಶೀಘ್ರ ಗುಣಮುಖರಾಗುವಂತೆ ಹಾರೈಸಲಾಯಿತು. ಜೇಸಿ ತಂಡದಲ್ಲಿ ಅಧ್ಯಕ್ಷರಾದ ಜಿತೇಶ್ ಎಲ್. ಪಿರೇರಾ, ನಿಕಟಪೂರ್ವ ಅಧ್ಯಕ್ಷ ಕೆ.ಶ್ರೀಧರ ರಾವ್, ಜೋಸೆಫ್ ಪಿರೇರಾ, ಜೆಸಿಂತಾ ಡಿ.ಸೋಜ, ಸಂಧ್ಯಾ, ಕಮಲ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here