ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಾಂತಿನಗರ ಒಕ್ಕೂಟದ ಆಶ್ರಯದಲ್ಲಿ ಜೇಸಿಐ ಆಲಂಕಾರು ಇದರ ಜೇಸಿ ಸಪ್ತಾಹ-2023ರ ಪ್ರಯುಕ್ತ ಶೌರ್ಯ ವಿಪತ್ತು ನಿಗ್ರಹ ದಳ ಗೋಳಿತ್ತೊಟ್ಟು ಇದರ ಸಹಯೋಗದೊಂದಿಗೆ ಸುಳ್ಯ ಕೆವಿಜಿ ದಂತ ಮಹಾವಿದ್ಯಾಲಯದ ವೈದ್ಯರಿಂದ ಉಚಿತ ದಂತ ತಪಾಸನಾ ಹಾಗೂ ಚಿಕಿತ್ಸಾ ಶಿಬಿರ ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ಅವರು ಶಿಬಿರ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ರವಿಪ್ರಸಾದ್, ಗೋಳಿತ್ತೊಟ್ಟು ಗ್ರಾ.ಪಂ.ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ, ಸದಸ್ಯರಾದ ಬಾಲಕೃಷ್ಣ ಅಲೆಕ್ಕಿ, ಕೆ.ವಿ.ಜಿ.ದಂತ ಮಹಾವಿದ್ಯಾಲಯದ ವೈದ್ಯರಾದ ಡಾ.ಕ್ರಿಸ್ಟಾಜೋಸ್, ಡಾ.ಸುಮನ್, ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂದಿರದ ಗೌರವಾಧ್ಯಕ್ಷ ವಾಯುಪ್ರಭಾ ಹೆಗ್ಡೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಗುರುಂಪು, ರತಿದಾಮೋದರ, ಸುಜಾತ ಉಪಸ್ಥಿತರಿದ್ದರು. ಜೇಸಿಐ ಆಲಂಕಾರು ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಪ್ರಭಾರ ಮುಖ್ಯಗುರು ಪ್ರದೀಪ್ ಬಾಕಿಲ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹೇಶ್ ಆಲಂತಾಯ ವಂದಿಸಿದರು. ಶಿಕ್ಷಕ ಮಂಜುನಾಥ್ ಮಣಕವಾಡ ಕಾರ್ಯಕ್ರಮ ನಿರೂಪಿಸಿದರು. ಆಲಂಕಾರು ಜೇಸಿಐನ ಗಣೇಶ್ ಕಟ್ಟಪುಣಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಆಲಂಕಾರು ಜೇಸಿಐನ ಸದಸ್ಯರು, ಸೇವಾಪ್ರತಿನಿಧಿಗಳು, ಯೋಜನೆಯ ಕಾರ್ಯಕರ್ತರು, ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ಊರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. 75ಕ್ಕಿಂತಲೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.