ಸೆ. 19:ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಬಡಗನ್ನೂರುಃ  ಪಡುಮಲೆ  ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸೆ. 19 ರಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿಜೃಂಭಣೆಯಿಂದ ಜರಗಲಿರುವುದು. 

ಕಾರ್ಯಕ್ರಮಗಳು
ಸೆ 19 ರಂದು  ಬೆಳಗ್ಗೆ ಗಂ 8 ಕ್ಕೆ ಕದಿರು ಪೂಜೆ,8.30 ಕ್ಕೆ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ , 9-30ರಿಂದ : ಮಹಾಗಣಪತಿ ಹೋ 10 ರಿಂದ  ಶಾಲಾ ಮಕ್ಕಳಿಗೆ ಗಣೇಶ ಭಕ್ತಿಗೀತೆ ಸ್ಪರ್ಧೆ, ,ಗಣೇಶನ ಚಿತ್ರ ಬಿಡಿಸುವುದು, ಮಹಿಳೆಯರಿಗೆ ಸಂಗೀತ ಕುರ್ಚಿಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ ಗಂ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2 ರಿಂದ 4 ರವರೆಗೆ ಭಜನಾ ಕಾರ್ಯಕ್ರಮ,  ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.ಸಂಜೆ ಗಂ 4-30ರಿಂದ  ಶ್ರೀ ಗಣಪತಿ ದೇವರ ಶೋಭಾಯಾತ್ರೆಯು  ಮೈಂದನಡ್ಕ -ಮುಡಿಪಿನಡ್ಕ ರಾಜರಸ್ತೆಮೂಲಕ  ಪಟ್ಟೆ  ಸೀರೆ ಹೊಳೆಯಲ್ಲಿ ಜಲಸ್ತಂಭನಗೊಳ್ಳಲಿದೆ.

LEAVE A REPLY

Please enter your comment!
Please enter your name here