ಪುತ್ತೂರು : ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಮುಸ್ಲಿಂ ಶಿಕ್ಷಕರ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರ ಸಮಾವೇಶ ಸೆ.17ರಂದು ಮಿತ್ತೂರು ಕೆಜಿಎನ್ ದಾರುಲ್ ಇರ್ಷಾದ್ ವಿದ್ಯಾಲಯ ಕೆಜಿಎನ್ ಕ್ಯಾಂಪಸ್‌ನಲ್ಲಿ ನಡೆಯಿತು.
ಸಯ್ಯಿದ್ ಎಸ್.ಎಂ ತಂಙಳ್ ಉಜಿರೆ ದುವಾ ನೆರವೇರಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಜಿ.ಎಂ.ಎಂ ಕಾಮಿಲ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿ ಸಮಾವೇಶದ ಉದ್ಧೇಶದ ಬಗ್ಗೆ ಪ್ರಸ್ತಾಪಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಂಟ್ವಾಳಮೂಡ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿಯವರು ವಿಧ್ಯಾರ್ಥಿಗಳ ಶಿಕ್ಷಣ, ಗುಣ ನಡತೆ, ತರಬೇತಿ ಮೊದಲಾದವುಗಳ ಬಗ್ಗೆ ವಿಷಯಗಳ ಮಂಡಿಸಿ ಅದಕ್ಕೆ ಬೇಕಾದ ಪರಿಹಾರ ಮಾರ್ಗವನ್ನು ನಾವೆಲ್ಲರೂ ಕಂಡುಕೊಳ್ಳಬೇಕಾಗಿದೆ, ಕರ್ನಾಟಕ ಮುಸ್ಲಿಂ ಜಮಾಅತ್ ಅದಕ್ಕೆ ಮುನ್ನುಡಿ ಹಾಕಿದೆ, ಇಂತಹ ಕಾರ್ಯಕ್ರಮಗಳು ಪ್ರತಿ ಮೊಹಲ್ಲಾಗಳಲ್ಲಿ ನಡೆಯಲಿ ಎಂದು ಹೇಳಿದರು.ಸಮಾವೇಶದಲ್ಲಿ ಭಾಗವಹಿಸಿದ ಪ್ರತಿನಿಧಿಗಳು ವಿವಿಧ ಅಭಿಪ್ರಾಯ ಮಂಡಿಸಿದರು.
ಮೌಲಿದ್ ಪಾರಾಯಣ:
ಕಾರ್ಯಕ್ರಮದ ಆರಂಭದಲ್ಲಿ ಮೌಲೀದ್ ಪಾರಾಯಣ ಮಾಡಲಾಯಿತು. ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ, ಸದಸ್ಯರಾದ ಅಬೂಬಕ್ಕರ್ ಸಅದಿ ಮಜೂರು, ಅಬ್ದುಲ್ ಖಾದಿರ್ ಸಖಾಫಿ ಕಡಂಬು, ಅಬ್ದುಲ್ಲಾ ಮುಸ್ಲಿಯಾರ್ ಪುತ್ತೂರು, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಇಬ್ರಾಹಿಂ ಮುಸ್ಲಿಯಾರ್ ಕೊಡುಂಗಾಯಿ ಹಾಗೂ ಪಿ.ಯು ಅಬ್ದುರ್ರಹ್ಮಾನ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸದಸ್ಯರಾದ ಕೆ.ಬಿ ಖಾಸಿಂ ಹಾಜಿ ಪರ್ಲೋಟು, ಇಕ್ಬಾಲ್ ಬಪ್ಪಳಿಗೆ, ಹಾಜಿ ಅಬ್ದುಲ್ ಕರೀಂ ಚೆನ್ನಾರ್, ಮುಹಮ್ಮದ್ ಕುಂಞಿ ಜೋಗಿಬೆಟ್ಟು, ಉಮರ್ ತಾಜ್ ನೆಲ್ಯಾಡಿ, ಕೆ.ಎಂ ಮುಸ್ತಫಾ ಸುಳ್ಯ, ಉಸ್ಮಾನ್ ಹಾಜಿ ಸೆರ್ಕಳ, ಯು. ಹನೀಫ್ ಉಜಿರೆ, ಮಾಣಿ ಸರ್ಕಲ್ ಅಧ್ಯಕ್ಷ ಇಬ್ರಾಹಿಂ ಸಅದಿ ಮಾಣಿ, ಕೋಶಾಧಿಕಾರಿ ಖಾಸಿಂ ಪಾಟ್ರಕೋಡಿ ಉಪಸ್ಥಿತರಿದ್ದರು.ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳಪದವುಸ್ವಾಗತಿಸಿದರು, ಜಿಲ್ಲಾ ಸಮಿತಿ ಸದಸ್ಯ ಅಬ್ಬಾಸ್ ಬಟ್ಲಡ್ಕ ವಂದಿಸಿದರು.
ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಹಮೀದ್ ಸುಣ್ಣಮೂಲೆ ಕಾರ್ಯಕ್ರಮ ನಿರೂಪಿಸಿದರು. ಇನ್ನೊರ್ವ ಜಿಲ್ಲಾ ಕಾರ್ಯದರ್ಶಿ ಕೆ.ಇ ಅಬೂಬಕ್ಕರ್ ನೆಲ್ಯಾಡಿ ಹಾಗೂ ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರು ಸಹಕರಿಸಿದರು.