ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾವೇರಿಕಟ್ಟೆಯ ವತಿಯಿಂದ ಸೆ.19ರಿಂದ 21ರವರೆಗೆ ಮೂರು ದಿನಗಳ ಕಾಲ ಭಕ್ತಾಭಿಮಾನಿಗಳ ವಿಶೇಷ ಸಹಕಾರದೊಂದಿಗೆ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಪುತ್ತೂರು ದರ್ಬೆಯ ಕಾವೇರಿಕಟ್ಟೆ (ಕಾರ್‌ಟೆಕ್)ನಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆ.19ರಂದು ಮಂಗಳವಾರ ಬೆಳಗ್ಗೆ 8.30ರಿಂದ 9ರ ವರೆಗೆ ಗಣಪತಿ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಬೆಳಗ್ಗೆ 10ಕ್ಕೆ ಗಣಪತಿ ಹವನ, 11ರಿಂದ ಪುತ್ತೂರು ಈಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5 ಗಂಟೆಯಿಂದ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದ ಹಿಂದೂ ಧಾರ್ಮಿಕ ಶಿಕ್ಷಣದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 7 ಗಂಟೆಗೆ ರಂಗಪೂಜೆ ನಡೆಯಲಿದ್ದು, 8 ಗಂಟೆಗೆ ವಿಸ್ಮಯ ವಿನಾಯಕ್ ಮತ್ತು ತಂಡ ಮಂಗಳೂರು ಇವರಿಂದ ತಮಾಷಾ ಫ್ಯಾಕ್ಟರಿ ಕಾರ್ಯಕ್ರಮ ನಡೆಯಲಿದೆ.
ಸೆ.20ರಂದು ಬೆಳಗ್ಗೆ 8.30ಕ್ಕೆ ಬೆಳಗಿನ ಪೂಜೆ ನಡೆದು 9.30ಕ್ಕೆ ಗಣಪತಿ ಹವನ ನೆರವೇರಲಿದೆ. 11 ಗಂಟೆಗೆ ಕೆಮ್ಮಿಂಜೆ ಶ್ರೀರಾಮ ಭಜನಾ ಮಂಡಳಿಯಿಂದ ಭಜನೆ ನಡೆದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆಯಲಿದೆ. ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೆದಿಲ ಗಣರಾಜ ಭಟ್ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ ಕುಮಾರ್ ಬೆದ್ರಾಳ, ಸುನೀಲ್ ಜೋನ್ಸ್ ಮಂಗಳೂರು, ವೆಂಕಟೇಶ್ ಭಟ್, ಶಿವಶಂಕರ್ ಬೆಂಗಳೂರು, ಡಾ.ಶ್ವೇತಾ ವಿ., ಲೋಕಪ್ಪ ಗೌಡ ಕೆರೆಮನೆ, ಪಾಂಡುರಂಗ ಭಟ್, ನಗರಸಭೆ ಸದಸ್ಯ ಬಾಲಚಂದ್ರ ಕೆ. ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 8ರಿಂದ ಮೇಘ ಕಲಾ ಆರ್ಟ್ಸ್ ಮತ್ತು ನೃತ್ಯಾಲಯ ತಂಡದಿಂದ ವಿವಿಧ ಕಾರ್ಯಕ್ರಮಗಳು ನೆರವೇರಲಿವೆ.
ಸೆ.21ರಂದು ಗುರುವಾರ ಬೆಳಗ್ಗೆ 8.30ಕ್ಕೆ ಬೆಳಗಿನ ಪೂಜೆ ನಡೆದು 10ಕ್ಕೆ ಗಣಪತಿ ಹವನ ನಡೆಯಲಿದೆ. ಪೂರ್ವಾಹ್ನ 11ಕ್ಕೆ ಭಜನಾ ಕಾರ್ಯಕ್ರಮ ನಡೆದು 12.30ಕ್ಕೆ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ಕೊಂಬೆಟ್ಟು ಮರಾಠಿ ಯುವ ವೇದಿಕೆ ಭಜನಾ ಸಂಘದ ಸದಸ್ಯರಿಂದ ಕುಣಿತ ಭಜನೆ ನಡೆದು ಸಂಜೆ 6 ಗಂಟೆಗೆ ಮಹಾಪೂಜೆ ನೆರವೇರಲಿದೆ. ಸಂಜೆ 7ರಿಂದ ಗಣೇಶನ ಶೋಭಾಯಾತ್ರೆ ಆರಂಭಗೊಳ್ಳಲಿದ್ದು, ದರ್ಬೆ ಸರ್ಕಲ್-ಕೆಮ್ಮಿಂಜೆ-ಬೆದ್ರಾಳ ಮೂಲಕ ಶೋಭಾಯಾತ್ರೆಯು ಸಾಗಿ ಬೆದ್ರಾಳದಲ್ಲಿ ವಿಗ್ರಹ ವಿಸರ್ಜನೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಚೆಂಡೆ, ತಾಲೀಮು, ವಿಶೇಷ ಬ್ಯಾಂಡ್ ಸೆಟ್ ಹಾಗೂ ಕಾವೇರಿಕಟ್ಟೆ ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ ಡಿ.ಜೆ. ಸೌಂಡ್ಸ್ ವಿಶೇಷ ಆಕರ್ಷಣೆಯಾಗಿರಲಿದೆ. ಎಲ್ಲಾ ಭಕ್ತಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಮಿತಿಯು ಪ್ರಕಟಣೆಯಲ್ಲ ತಿಳಿಸಿದೆ.