ಸವಣೂರು : ಇನ್ನಿಲ್ಲದಂತೆ ಕಾಡುತ್ತಿರುವ ಚರಂಡಿ ಸಮಸ್ಯೆಗೆ ಮುಕ್ತಿ ಯಾವಾಗ ? ಸೊಳ್ಳೆ ಉತ್ಪತ್ತಿಗೆ ತಾಣವಾದ ಚರಂಡಿ

0

ಸವಣೂರು: ಮಳೆಗಾಲದಲ್ಲಿ ಸವಣೂರಿನ ನಾಗರಿಕರನ್ನು ಇನ್ನಿಲ್ಲದಂತೆ ಕಾಡುತ್ತಿದೆ ಚರಂಡಿ ಸಮಸ್ಯೆ.ಸವಣೂರು ಜಂಕ್ಷನ್‌ನಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆ ಸಾರ್ವಜನಿಕರಿಗೆ ಕಿರಿಕಿರಿಯಾಗಿ ಮಾರ್ಪಟ್ಟಿದೆ.ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆ ಸರಿಯಿಲ್ಲದೆ ನೀರು  ಚರಂಡಿಯಲ್ಲೇ ಉಳಿದು ರೋಗ ಭೀತಿ ಎದುರಾಗಿದೆ.ಲೋಕೋಪಯೋಗಿ ಇಲಾಖೆಯಿಂದ ಚರಂಡಿ ವ್ಯವಸ್ಥೆ ಮಾಡಿದ್ದರೂ ಅದು ಸಮರ್ಪಕವಾಗಿಲ್ಲ.

ಚರಂಡಿ ನಿರ್ಮಾಣಕ್ಕೆ ಖಾಸಗಿ ಕಟ್ಟಡಕ್ಕೆ ತೆರಳಲು ಇದ್ದ ದಾರಿ ಅಗೆಯಲಾಗಿತ್ತು.ಇದರಿಂದ ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ಸಮಸ್ಯೆ ಉಂಟಾಗಿತ್ತು. ನಂತರ ದಿನಗಳಲ್ಲಿ ತಕ್ಕಮಟ್ಟಿಗೆ ದುರಸ್ತಿ ಮಾಡಿತ್ತು.ಆದರೆ ಹಾಕಿದ ಮೋರಿಗಿಂತ ಎತ್ತರದಲ್ಲಿ ಚರಂಡಿಯಿದ್ದು ನೀರು ಮೋರಿಯಲ್ಲಿ ಹಾಗೂ ಚರಂಡಿಯಲ್ಲಿ ತುಂಬಿದೆ.ಮಳೆಗಾಲದಲ್ಲಿ ಜನರಿಗೆ ಡೆಂಗ್ಯೂ ,ಮಲೇರಿಯಾ ಮೊದಲಾದ ರೋಗಗಳು ಸೊಳ್ಳೆಯಿಂದ ಹರಡುತ್ತಿದ್ದು, ಚರಂಡಿಯಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾಗಲಿದೆ.

ರಸ್ತೆ ಅಗಲೀಕರಣ ಸಂದರ್ಭ ಮಾಡಿದ ಚರಂಡಿಯನ್ನು ಸರಿಯಾಗಿ ನಿರ್ಮಾಣ ಮಾಡದ್ದರಿಂದ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ.ಜನತೆಗೆ ಸೊಳ್ಳೆ ಉತ್ಪಾದನಾ ಕೇಂದ್ರವೂ ಆಗಿತ್ತು. ಪ್ರತಿ ಮಳೆಗಾಲದಲ್ಲಿ ಇದೊಂದು ಸಮಸ್ಯೆ ಕಾಡುತ್ತಲೇ ಇದೆ.ಈ ನಿಟ್ಟಿನಲ್ಲಿ ಚರಂಡಿ ವ್ಯವಸ್ಥೆಯನ್ನು ಸರಿಯಾಗಿ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here