





ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯಿಂದ ಡಿ.28ರಂದು ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ಸಂಭ್ರಮಿಸಲಿರುವ ‘ಮರಾಟಿ ಸಂಭ್ರಮ’, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಮರಾಟಿ ವಧು-ವರರ ಸಮಾನ್ವೇಷನೆ ಹಾಗೂ ಸಾಂಸ್ಕೃತಿಕ ಕಲಾ ವೈಭವದ ಆಮಂತ್ರಣ ಪತ್ರಿಕೆಯು ನ.23ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.


ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅರ್ಚಕ ಶಂಕರನಾರಾಯಣ ಭಟ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.





ಸಮಿತಿ ಉಪಾಧ್ಯಕ್ಷ ಸದಾಶಿವ ನಾಯ್ಕ ಬನ್ನೂರು, ಸಂಚಾಲಕ ಶ್ರೀಧರ ನಾಯ್ಕ ಮುಂಡೋವುಮೂಲೆ, ಪ್ರಧಾನ ಕಾರ್ಯದರ್ಶಿ ವಿಮಲಾ ಮಹಾಲಿಂಗ ನಾಯ್ಕ, ಖಜಾಂಚಿ ಸೇಸಪ್ಪ ನಾಯ್ಕ ಮರಕ್ಕಿಣಿ, ನೆರವು ಸಮಿತಿ ಬಾಲಕೃಷ್ಣ ನಾಯ್ಕ ಮುರುಂಗಿ, ರತ್ನಾವತಿ ದಾರಂದಕುಕ್ಕು, ಉಷಾಕಿರಣ ಬನ್ನೂರು, ರಕ್ಷಿತ್ ಬೆಳ್ಳಿಚಡವು, ಸುಂದರ ನಾಯ್ಕ ನಾಗನಮಜಲು, ಭವ್ಯ ಮರಕ್ಕಿಣಿ, ಶಾರದಾ ಸದಾಶಿವ ನಾಯ್ಕ ಬನ್ನೂರು, ಮಂಜುನಾಥ ನಾಯ್ಕ ಮಂಗಳೂರು, ವೀಣಾಲತಾ ಮಂಗಳೂರು, ಪ್ರಸಾದ್ ನಾಯ್ಕ ವಡ್ಯ, ಜಾನ್ವಿ ಹಾಗೂ ಕಮಲ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.









