ಪುರುಷರಕಟ್ಟೆಯಲ್ಲಿ 23ನೇ ವರ್ಷದ ಗಣೇಶೋತ್ಸವ, ಧಾರ್ಮಿಕ ಸಭೆ

0

ಪುತ್ತೂರು: ಪುರುಷರಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ಕಟ್ಟೆಯ ಮುಂಭಾಗದಲ್ಲಿ ನಡೆದ 23ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಸೆ.20ರಂದು ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಧಾರ್ಮಿಕ ಉಪನ್ಯಾಸ ನೀಡಿದ ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಸಂಸ್ಕೃತ ಅಧ್ಯಾಪಕ ಪರೀಕ್ಷಿತ್ ತೋಳ್ಪಾಡಿ ಮಾತನಾಡಿ, ಸನಾತನವಗಿರುವುದೇ ಹಿಂದು ಧರ್ಮ. ಎಲ್ಲರ ಹೃದಯದಲ್ಲಿರುವ ಭಗವಂತನೇ ಸನಾತನ ಧರ್ಮ. ಇಂತಹ ಶ್ರೇಷ್ಠ ಧರ್ಮವನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಆತ ನೀಡಿದ ಹೇಳಿಕೆಯ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಎಲ್ಲರನ್ನು ಮತ್ತೊಮ್ಮೆ ಯೋಚಿಸುವಂತೆ ಮಾಡಿದೆ. ಅನೇಕ ಆಯಾಮಗಳಲ್ಲಿ ಜನರು ಮತ್ತೊಮ್ಮೆ ಮುಂದೆ ಬಂದಿದ್ದು ಈ ಹೇಳಿಕೆಯಿಂದ ಹಿಂದೂ ಸಮಾಜಕ್ಕೆ ಒಳ್ಳೆಯದೇ ಆಗಿದೆ. ಪುರುಷರಕಟ್ಟೆಯಲ್ಲಿ ಎಲ್ಲಾ ಧರ್ಮದವರ ಸಹಕಾರದಿಂದ ಸಾಮರಸ್ಯದ ಕಾರ್ಯಕ್ರಮವಾಗಿ ಗಣೇಶೋತ್ವವನ್ನು ನಡೆಯುತ್ತಿದೆ. ಹೀಗೆ ನಡೆದರೆ ಉದಯ ನಿಧಿಯಂತಹ ನೂರು ಜನರ ಬಂದರೂ ಸನಾತನವಾದ ಧರ್ಮವನ್ನು ನಿರ್ಮೂಲನೆ ಮಾಡಲು ಸಾದ್ಯವಿಲ್ಲ ಎಂದರು. ಮುಖ್ಯ ಅತಿಥಿಯಾಗಿದ್ದ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು, ಧರ್ಮ ಸಂರಕ್ಷಣೆಯ ಮಹತ್ವಗಳ ಬಗ್ಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಪುರುಷ ಎಂ.ಪುರುಷರಕಟ್ಟೆ ಮಾತನಾಡಿ, ಗಣೇಶೋತ್ಸವದ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದವರಿಗೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಉಮೇಶ್ ಎಂ. ಇಂದಿರಾನಗರ, ಸದಸ್ಯ ಪ್ರತಿಮಾ ರವೀಂದ್ರ ನೆಕ್ಕಿಲು, ಉದ್ಯಮಿ ವೇದನಾಥ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಸಮಾಜ ಸೇವೆಯಲ್ಲಿ ಸೋಮಂತ್‌ಜಾನ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ ಚಂದ್ರಶೇಖರ ರೈ ಸೂರಿಕುಮೇರು, ಗಿನ್ನಿಸ್ ರೆಕಾರ್ಡ್ ಸಾಧನೆ ಮಾಡಿದ ಪವನ್ ಹಾಗೂ ಗಣೇಶೋತ್ಸವದಲ್ಲಿ ಅಪ್ಪ ತಯಾರಿಕೆಯಲ್ಲಿ ಸಹಕರಿಸಿದ ಭೀಮ್ ಭಟ್‌ರವರನ್ನು ಸನ್ಮಾನಿಸಲಾಯಿತು.

ವಿಮಲ ನಾರಾಯಣ ಹಾಗೂ ವಸಂತಿ ರೈ ಪ್ರಾರ್ಥಿಸಿದರು. ವಿಶ್ವನಾಥ ಬಲ್ಯಾಯ ಮುಂಡೋಡಿ ಸ್ವಾಗತಿಸಿದರು. ಸತೀಶ್ ಪುರುಷರಕಟ್ಟೆ ಕಾರ್ಯಕ್ರಮ ನಿರೂಪಿಸಿ, ರವೀಂದ್ರ ನೆಕ್ಕಿಲು ವಂದಿಸಿದರು. ಗಣೇಶೋತ್ಸವದಲ್ಲಿ ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಶಾಂತಿಗೋಡು ಕೂಡುರಸ್ತೆ ಶ್ರೀದುರ್ಗಾ ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ ನರಿಮೊಗರು ಸರಸ್ವತಿ ವಿದ್ಯಾಮಂದಿರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿದ್ಯ ಕಾರ್ಯಕ್ರಮಗಳು, ರಾತ್ರಿ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ತುಳು ಅಪ್ಪೆ ಕಲಾವಿದೆಡ್ ಗಯಾಪದ ಇವರಿಂದ ʼಮುರಳಿ ಈ ಪಿರ ಬರೋಲಿ’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here