ಕೆಯ್ಯೂರು: ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ದೇವಳದ ವ್ಯವಸ್ಥಾಪನ ಸಮಿತಿ ಕೆಯ್ಯೂರು ಇದರ ಆಶ್ರಯದಲ್ಲಿ ಸೆ.19ರಿಂದ ಸೆ.21ವರೆಗೆ ಕೆಯ್ಯೂರು ದೇವಳದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವವು, ವಿವಿಧ ದಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಪ್ರಧಾನ ಅರ್ಚಕ ಶ್ರೀನಿವಾಸ ರಾವ್ ಮತ್ತು ಆನಂದ ಭಟ್, ಸರಳ ಕಾರ್ಯಕ್ರಮಗಳ ಮೂಲಕ ವಿಘ್ನ ವಿನಾಶಕನ ಆರಾಧನೆಯೊಂದಿಗೆ ನಡೆಯಿತು.ಕೆಯ್ಯೂರು ಶ್ರೀ ದುರ್ಗಾ ಭಜನಾ ಮಂಡಳಿಯ ವತಿಯಿಂದ ವಿವಿಧ ಭಜನಾ ತಂಡಗಳಿಂದ ಮೂರು ದಿವಸಗಳ ಕಾಲ ದೇವಳದಲ್ಲಿ ಭಜನಾ ಕಾರ್ಯಕ್ರಮ ಜರಗಿತು.
ಸೆ.21ರಂದು ಬೆಳಿಗ್ಗೆ ಗಣಪತಿ ಹವನ, ಮಧ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ ನಡೆದು,ಸಂಜೆ ವಿಜೃಂಭಣೆಯ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆಯು, ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಇವರಿಂದ ಭಜನಾ ಕಾರ್ಯಕ್ರಮ, ಶ್ರೀ ರಾಮ ಕುಣಿತ ಭಜನಾ ತಂಡ ಕೆಯ್ಯೂರು, ಮತ್ತು ಶ್ರೀ ದುರ್ಗಾಪರಮೇಶ್ವರಿ ಕುಣಿತ ಭಜನಾ ತಂಡ ಪುಟಾಣಿ ಮಕ್ಕಳಿಂದ ಭಜನಾ ಕುಣಿತ, ಶ್ರೀ ರಾಮ ಚೆಂಡೆ ಲಕ್ಷ್ಮೀದೇವಿ ಬೆಟ್ಟ ಪುತ್ತೂರು ಚೆಂಡೆ ಕುಣಿತ, ಕಾರ್ಯಕ್ರಮ ನಡೆಯಿತು. ಶೋಬಾಯಾತ್ರೆಯಲ್ಲಿ ಕೇಸರಿ ಪ್ರೇಂಡ್ಸ್ ಸಂತೋಷ್ ನಗರ ಪದಾದಿಕಾರಿಗಳಿಂದ ಸುಡುಮದ್ದು, ನಡೆಯಿತು. ಕೆಯ್ಯೂರು, ಸಂತೋಷ್ ನಗರ ,ಮಾಡಾವು ಕಟ್ಟೆ , ಬೊಳಿಕ್ಕಳದಲ್ಲಿ ಪೂಜೆ, ನಡೆದು ಗೌರಿ ಹೊಳೆ ಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.