ಬೆಟ್ಟಂಪಾಡಿ ಕಾಲೇಜಿನಲ್ಲಿ ವಾಣಿಜ್ಯ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

0

ಸ್ಥಳೀಯ ಉತ್ಪನ್ನಕ್ಕೆ ಪ್ರೋತ್ಸಾಹ ಅಗತ್ಯ: ಪಿ.ಬಿ.ಸುಧಾಕರ ರೈ

ಪುತ್ತೂರು: ಸ್ಥಳೀಯ ಉತ್ಪನ್ನಕ್ಕೆ ಪ್ರೋತ್ಸಾಹ ಅಗತ್ಯ. ವಾಣಿಜ್ಯ ಕ್ಷೇತ್ರದ ಕಲಿಕೆಯಿಂದ ನಿರ್ಧಾರ ತೆಗೆದುಕೊಳ್ಳುವ ಮತ್ತು ಗುಂಪು ಚಟುವಟಿಕೆಗಳನ್ನು ಹೇಗೆ ನಿರ್ವಹಿಸಬಹುದೆಂದು ಪ್ರಾಯೋಗಿಕವಾಗಿ ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದು ಸುಳ್ಯದ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಇದರ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಹೇಳಿದರು.

ಸೆ.22 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ ಶೈಕ್ಷಣಿಕ ವರ್ಷ 2023-24 ನೇ ಸಾಲಿನ ವಾಣಿಜ್ಯ ಸಂಘದ ವಾರ್ಷಿಕ ಚಟವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಸಮಾಜವು ಇ-ವಾಣಿಜ್ಯಕ್ಕೆ ಹೆಚ್ಚು ಒತ್ತು ಕೊಡುವುದರಿಂದ ಸ್ಥಳೀಯ ಉತ್ಪನ್ನಗಳನ್ನು ಕಡೆಗಣಿಸುತ್ತಿವೆ. ನಾಗರಿಕ ಪ್ರಜ್ಞೆವುಳ್ಳ ನಾವು ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿ ಜೀವನದಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳುವುದರಿಂದ ನಾಗರಿಕ ಪ್ರಜ್ಞೆ ಬೆಳೆಯಲು ಸಾಧ್ಯ. ಈ ರೀತಿಯ ಸಂಘ ಸಂಸ್ಥೆಗಳ ಸದಸ್ಯತ್ವದಿಂದ ಸಮಾಜ ನಿಮ್ಮನ್ನು ಗುರುತಿಸುತ್ತದೆ ಎಂದರು.

ಪ್ರಸ್ತಾವಿಕ ಮಾತುಗಳನ್ನಾಡಿದ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಶ್ರೀರಾಮಚಂದ್ರ ಡಿ ಇವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಪ್ರತಿಭೆಯನ್ನು ಹೊರಹಾಕಲು ವಾಣಿಜ್ಯ ಸಂಘವು ವೇದಿಕೆಯನ್ನು ಕಲ್ಪಿಸುತ್ತದೆ. ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದ ಅಭಿವೃದ್ಧಿಯು ವಾಣಿಜ್ಯ ಸಂಘದ ಧೇಯೋದ್ದೇಶವನ್ನು ಹೊಂದಿದೆ. ಸಂಘ ನಡೆಸುವ ಪ್ರತಿ ಚಟುವಟಿಕೆಯಲ್ಲಿ ಪೂರ್ಣವಾದ ತೊಡಗಿಸಿಕೊಳ್ಳುವಿಕೆಯಿಂದ ವ್ಯಕ್ತಿತ್ವ ವಿಕಸನ ಸಾದ್ಯ ಎಂದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ ವರದರಾಜ ಚಂದ್ರಗಿರಿ ಇವರು ಇಂದಿನ ದೈನಂದಿನ ಜೀವನದಲ್ಲಿ ವಾಣಿಜ್ಯವು ಒಂದು ಅವಿಭಾಜ್ಯ ಅಂಗವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಅಗತ್ಯವಾಗಿರುವುದರಿಂದ ವಿದ್ಯಾರ್ಥಿ ಜೀವನದಲ್ಲಿ ಕೌಶಲ್ಯದ ಅಭಿವೃದ್ಧಿಯನ್ನು ಪಠ್ಯೇತರ ಚಟುವಟಿಕೆಗಳಿಂದ ವೃದ್ಧಿಸಬೇಕು ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ ಕಾಂತೇಶ್ ಎಸ್ ಮಾತನಾಡಿ ಪ್ರಸ್ತುತ ಕಾರ್ಪೊರೇಟ್ ವಲಯ ಅನೇಕ ಕೌಶಲ್ಯಗಳನ್ನು ನಿರೀಕ್ಷಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಇಂತಹ ಸಂಘ ಗಳನ್ನು ಉಪಯೋಗಿಸಿಕೊಂಡು ಕೌಶಲ್ಯದ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ನುಡಿದರು.

2023-24 ನೇ ಸಾಲಿನ ವಾಣಿಜ್ಯ ಸಂಘದ ಅಧ್ಯಕ್ಷರಾಗಿ ನಯನ ಬಿ ಹಾಗೂ ಕಾರ್ಯದರ್ಶಿಯಾಗಿ ಜೀವನ್ ರಾಜ್ ಬಿ ಮತ್ತು ಖಜಾಂಜಿಯಾಗಿ ಆದರ್ಶ ಬಿ ಆಯ್ಕೆಗೊಂಡರು.  ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಅನನ್ಯ ಎಸ್, ವಿದ್ಯಾಶ್ರೀ ಡಿ, ದೀಕ್ಷಿತಾ, ನವ್ಯಶ್ರೀ, ಪಂಚಮಿ ಇವರು ಪ್ರಾರ್ಥಿಸಿದರು. ನಯನ ಬಿ ವಂದನಾರ್ಪಣೆಗೈದರು. ಆದರ್ಶ್ ಎನ್ ನಿರೂಪಿಸಿದರು.

LEAVE A REPLY

Please enter your comment!
Please enter your name here