ಸರ್ವೆ ಶ್ರೀ ಗೌರಿ ಮಹಿಳಾ ಮಂಡಲದ ವಾರ್ಷಿಕ ಸಭೆ- ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷೆ ರತ್ನಾವತಿ ಎಸ್ ಡಿ, ಅಧ್ಯಕ್ಷೆ ಮೋಹಿನಿ ಎನ್ ಆರ್, ಕಾರ್ಯದರ್ಶಿ ಕುಶಲ ನಾಗೇಶ್ , ಕೋಶಾಧಿಕಾರಿ ರಜನಿ ರಾಜೇಶ್

ಪುತ್ತೂರು: ಮಹಿಳೆಯರಾದ ನಾವು ಸಮಾಜದಲ್ಲಿ ಸದೃಢವಾಗಿ , ಗೌರವಯುತವಾಗಿ ಬಾಳಿ, ಹಂತ ಹಂತವಾಗಿ ಯಶಸ್ಸಿನ ಮೆಟ್ಟಿಲೇರಬೇಕಾದರೆ ಮೊದಲು ಮನೆಯಿಂದ ಹೊರಗೆ ಬಂದು ವಿವಿಧ ಸಂಘ ಸಂಸ್ಥೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ನಮ್ಮ ಶ್ರೀ ಗೌರಿ ಮಹಿಳಾ ಮಂಡಲ ಶ್ರಮಿಸುತ್ತಿದೆ ಎಂದು ಮಹಿಳಾ ಮಂಡಲದ ಅಧ್ಯಕ್ಷೆ ಮೋಹಿನಿ ಎನ್ ಆರ್ ಅವರು ಭಕ್ತಕೋಡಿ ಅಂಗನವಾಡಿ ಕೇಂದ್ರದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಹೇಳಿದರು.


ಸಭೆಯಲ್ಲಿ ವಾರ್ಷಿಕ ಆಯವ್ಯಯ ಮಂಡನೆ, ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಕೆಲವು ಕಾರ್ಯಕ್ರಮಗಳು, ಮಹಿಳಾ ಮಂಡಲದ ಸದಸ್ಯರ ಸಾಧಕ ಮಕ್ಕಳಿಗೆ ಪ್ರೋತ್ಸಾಹ ,ಮಹಿಳಾ ಮಂಡಲದ ವತಿಯಿಂದ ವರ್ಷಕ್ಕೊಮ್ಮೆ ಸದಸ್ಯರ ಪ್ರವಾಸ ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ವಸಂತಿ ಪ್ರಾರ್ಥಿಸಿದರು. ಸ್ವಾತಿ ಪ್ರಮೋದ್ ಸ್ವಾಗತಿಸಿದರು . ಸುಮತಿ ಕರ್ಮಿನಡ್ಕ ವಂದಿಸಿದರು. ಕುಶಲ ಪಟ್ಟೆಮಜಲು ಕಾರ್ಯಕ್ರಮ ನಿರೂಪಿಸಿದರು.


ನೂತನ ಪದಾಧಿಕಾರಿಗಳ ಆಯ್ಕೆ:
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷೆಯಾಗಿ ರತ್ನಾವತಿ ಎಸ್ ಡಿ ಸರ್ವೆದೋಳಗುತ್ತು, ಅಧ್ಯಕ್ಷೆಯಾಗಿ ಮೋಹಿನಿ ಎನ್ ಆರ್ ಭಕ್ತಕೋಡಿ , ಉಪಾಧ್ಯಕ್ಷೆಯಾಗಿ ಭವ್ಯ ಸುಬ್ರಹ್ಮಣ್ಯ ಕರುಂಬಾರು, ಗೌರವ ಸಲಹೆಗಾರರಾಗಿ ವಿಜಯಲಕ್ಷ್ಮಿ ಶಂಕರನಾರಾಯಣ ಭಟ್, ಹರ್ಷಾವತಿ ಜನಾರ್ಧನ ಗೌಡ ಭಕ್ತಕೋಡಿ, ಕಾರ್ಯದರ್ಶಿಯಾಗಿ ಕುಶಲ ನಾಗೇಶ್ ಪಟ್ಟೆಮಜಲು, ಕೋಶಾಧಿಕಾರಿಯಾಗಿ ರಜನಿ ರಾಜೇಶ್ ಸರ್ವೆದೋಳಗುತ್ತು ಪುನರಾಯ್ಕೆಯಾದರು.

LEAVE A REPLY

Please enter your comment!
Please enter your name here