





ಪುತ್ತೂರು: ಅಯೋಧ್ಯೆಯ ರಾಮ ಜನ್ಮಭೂಮಿ ಟ್ರಸ್ಟ್ ಸಮಿತಿಯ ಸದಸ್ಯ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜೀಯವರ 36ನೇ ಚಾತುರ್ಮಾಸ್ಯ ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣಧಾಮದಲ್ಲಿ ಜರಗುತ್ತಿದ್ದು ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಶ್ರೀ ಗಳೊಂದಿಗೆ ಮೈಸೂರಿನ ಬಿ ಬಿ ಕೇರಿಯಲ್ಲಿ ಸೌಹಾರ್ದ ಭೇಟಿಗೆ ಜೊತೆಯಾದರು.


ಕಾಲೊನಿಯಲ್ಲಿ ಸ್ವಾಮಿಜಿ ಪಾದಯಾತ್ರೆ ನಡೆಸಿ, ಅಲ್ಲಿನ ನಿವಾಸಿಗಳ ಮನೆಗಳಿಗೂ ಭೇಟಿ ನೀಡಿದರು, ಅಲ್ಲಿ ಅವರವರ ದೇವರಪೂಜೆ ಮಾಡಿ, ತುಸು ಹೊತ್ತು ಮನೆಯವರ, ನೆರೆಕೆರೆಯವರ ಜತೆ ಸಂವಾದದಲ್ಲಿ ಪಾಲ್ಗೊಂಡು ಅವರನ್ನು ಆಶೀರ್ವದಿಸಿದರು.





ಕಾಲೋನಿಯವರು ಭಕ್ತಿ ಭಾವದಿಂದ ಸ್ವಾಮಿಜೀಯವರನ್ನು ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಪೂರ್ಣಕುಂಭ ಸ್ವಾಗತ ಮಾಡಿದರು. ಅರುಣ್ ಕುಮಾರ್ ಪುತ್ತಿಲ ಶ್ರೀಗಳೊಂದಿಗೆ ಜೊತೆಯಾಗಿ ಸೇರಿಕೊಂಡರು.







