ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇದರ ಸಹಯೋಗದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.
ತಂಡದಲ್ಲಿ ಕೃತಿಕಾ ಜಿ( ರವಿ ಮತ್ತು ಯಶೋಧ ದಂಪತಿ ಪುತ್ರಿ), ಆದ್ಯ ಬಿ. ಆರ್. ( ರಾಮಣ್ಣಗೌಡ ಮತ್ತು ರೇಖಾ ಪಿ. ದಂಪತಿ ಪುತ್ರಿ), ಕವನಶ್ರೀ (ಗೋಪಾಲಕೃಷ್ಣ ಮತ್ತು ಶೈಲಜಾ ದಂಪತಿಯ ಪುತ್ರಿ), ಬಿಂದುಶ್ರೀ (ಜನಾರ್ಧನ ಮತ್ತು ಶಶಿಕಲಾ ದಂಪತಿ ಪುತ್ರಿ), ದೀಕ್ಷಿತಾ (ದೇವಪ್ಪಗೌಡ ಮತ್ತು ಹೇಮಾವತಿ ದಂಪತಿ ಪುತ್ರಿ), ಲೋಚನ ಯಂ. (ಸುಂದರ ಗೌಡ ಮತ್ತು ಉಷಾ ಕೆ. ದಂಪತಿ ಪುತ್ರಿ), ಪೂಜಾ ( ಸುರೇಶ್ ಮತ್ತು ವನಿತಾ ದಂಪತಿ ಪುತ್ರಿ), ಮಾನಸ ಎಂ. ( ಜಯೇಶ್ ಮತ್ತು ಸುಮಿತ್ರ ದಂಪತಿ ಪುತ್ರಿ), ಸುಶಾ ಎಂ. (ಕೃಷ್ಣಪ್ಪ ಎಂ. ಮತ್ತು ಗೀತಾ ದಂಪತಿ ಪುತ್ರಿ), ಯಲ್ಲವ್ವ (ಹನುಮಂತ ಮತ್ತು ಲಕ್ಷ್ಮೀ ದಂಪತಿ ಪುತ್ರಿ), ತನುಜಾ (ಅಪ್ಪಸಾಬ ಮತ್ತು ಗೌರವ್ವ ದಂಪತಿ ಪುತ್ರಿ), ಗೋದಾವರಿ (ಸುನೀಲ ಮತ್ತು ಚಂದ್ರಿಮಾ ದಂಪತಿ ಪುತ್ರಿ) ಭಾಗವಹಿಸಿದ್ದರು. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್ ಮತ್ತು ಶ್ರೀಮತಿ ಹರಿಣಾಕ್ಷಿ ಹಾಗೂ ಮನೋಹರ್ ತರಬೇತಿ ನೀಡಿದ್ದರು.