ವಿಕಲ ಚೇತನರಿಗೆ ವಿವಿಧ ಸವಲತ್ತುಗಳ ವಿತರಣೆ

0

ವಿಕಲ ಚೇತನರಿಗೆ ಸರಕಾರದಿಂದ ಸರ್ವ ರೀತಿಯ ಸಹಕಾರ: ಅಶೋಕ್ ರೈ
ಪುತ್ತೂರು: ವಿಕಲ ಚೇತನ ಅದು ಶಾಪವಲ್ಲ ಅದನ್ನು ಮೆಟ್ಟಿ ನಿಲ್ಲುವ ಮತ್ತು ದಿಟ್ಟ ಮನಸ್ಸಿನಿಂದ ಎದುರಿಸುವ ಮೂಲಕ ನಾವು ಸ್ವಾಭಿಮಾನಿಗಳಾಗಿ ಬದುಕುವವರಾಗಬೇಕು, ವಿಕಲ ಚೇತನರಿಗೆ ಸರಕಾರದಿಂದ ಸಿಗುವ ಸರ್ವ ಸವಲತ್ತುಗಳನ್ನು ಒದಗಿಸಲು ಸಹಕಾರ ನೀಡುವುದಾಗಿ ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ನೆಟ್ಟಿಕಟ್ಟೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಇದರ ವತಿಯಿಂದ ನಡೆದ ವಿಕಲಚೇತನರ ವಿವಿಧ ಸಾಧನ ಮತ್ತು ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಸರಕಾರ ಈಗಾಗಲೇ ವಿಕಲ ಚೇತನರಿಗೆ ವಿವಿಧ ಸವಲತ್ತುಗಳನ್ನು ಒದಗಿಸಿದೆ, ಮಾಸಾಶನವನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಅವುಗಳನ್ನು ಅರ್ಹರಿಗೆ ದೊರೆಯುವಲ್ಲಿ ಶ್ರಮವಹಿಸಲಾಗುವುದು ಎಂದು ಶಾಸಕರು ಹೇಳಿದರು. ಪುತ್ತೂರು ತಾಲೂಕಿನಲ್ಲಿ ಸೊನ್ನೆಯಿಂದ ಹತ್ತನೇ ತರಗತಿ ತನಕ ಒಟ್ಟು 358 ವಿದ್ಯಾರ್ಥಿಗಳು ವಿಕಲಚೇತನರು ಇದ್ದು ಈ ಪೈಕಿ ಕೆಲವು ಮಂದಿಗೆ ಸವಲತ್ತು ದೊರೆಯದೆ ಇದ್ದು ಮುಂದಿನ ದಿನಗಳಲ್ಲಿ ಅವರಿಗೂ ಸವಲತ್ತು ನೀಡಲಾಗುವುದು ಎಂದು ಶಾಸಕರು ತಿಳಿಸಿದರು.

ಅನುದಾನ ಬಿಡುಗಡೆ
ನೆಲ್ಲಿಕಟ್ಟೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ವಿಕಲ ಚೇತನರಗೆ ವಿಶೇಷ ಶೌಚಾಲಯ ನಿರ್ಮಾಣಕ್ಕಾಗಿ ರೂ.5 ಲಕ್ಷ ಮತ್ತು ರಸೆ ಕಾಂಕ್ರೀಟೀಕರಣಕ್ಕೆ ರೂ.3 ಲಕ್ಷ ವನ್ನು ನೀಡುವುದಾಗಿ ಶಾಸಕರು ಭರವಸೆ ನೀಡಿದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ, ನಗರಸಭಾ ಸದಸ್ಯ ಶಕ್ತಿ ಸಿನ್ಹಾ,ಅಕ್ಷರದಾಸೋಹ ಸಹಾಯಕ ನಿದೇಶಕರಾದ ವಿಷ್ಣು, ದಿನೇಶ್ ಕಾಮತ್ ಉಪಸ್ಥಿತರಿದ್ದರು.
ಸಮನ್ವಯಾಧಿಕಾರಿ ನವೀನ್ ವೇಗಸ್ ಸ್ವಾಗತಿಸಿ, ಇಸಿಒ ಅಮೃತಕಲಾ ವಂದಿಸಿದರು. ಸಿಆರ್ ಪಿ ಮಹಮ್ಮದ್ ಆಶ್ರಫ್ ಕಾರ್ಯಕ್ರಮ ನಿರೂಪಿಸಿದರು. ಬಿಐಇಆರ್‌ಟಿ ತನುಜಾ ಫಲಾನುಭವಿಗಳ ಪಟ್ಟಿ ವಾಚಿಸಿದರು. ಬಿಐಇಆರ್‌ಟಿ ಸೀತಮ್ಮ, ಪ್ರಿಯಾ ಸಹಕರಿಸಿದರು.

LEAVE A REPLY

Please enter your comment!
Please enter your name here