ಬೆಟ್ಟಂಪಾಡಿ ಕಾಲೇಜಿನಲ್ಲಿ ‘ಜ್ಞಾನ ದೀವಿಗೆ ಉಪನ್ಯಾಸ ಕೌಶಲ್ಯ ತರಬೇತಿ ಘಟಕ’ ಉದ್ಘಾಟನೆ

0

ಬೆಟ್ಟಂಪಾಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಅರ್ಥಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ 2023-24ನೇ ಶೈಕ್ಷಣಿಕ ವರ್ಷದ ‘ಜ್ಞಾನ ದೀವಿಗೆ ಉಪನ್ಯಾಸ ಕೌಶಲ್ಯ ತರಬೇತಿ ಘಟಕ’ಉದ್ಘಾಟನಾ ಕಾರ್ಯಕ್ರಮ ಸೆ. 21 ರಂದು ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸರಕಾರಿ ಬೆಳಿಯೂರುಕಟ್ಟೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹರಿಪ್ರಕಾಶ್ ಬೈಲಾಡಿ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಗುರುವಿನ ಮಹತ್ವ ಹಾಗೂ ನಿರ್ದಿಷ್ಟ ಗುರಿಯನ್ನಿಟ್ಟು ಜೀವನದಲ್ಲಿ ಹೇಗೆ ಯಶಸ್ವಿ ಹೊಂದಬಹುದು ಮತ್ತು ಶಿಕ್ಷಣದ ಮೂಲಕ ಮನುಷ್ಯತ್ವವನ್ನು ಬೆಳೆಸಿಕೊಳ್ಳುವುದರ ಬಗ್ಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.


ಕಾಲೇಜಿನ ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡುತ್ತಾ ಮಾತುಗಾರಿಕೆ ಒಂದು ಒಳ್ಳೆಯ ಕಲೆ, ವಿದ್ಯಾರ್ಥಿಗಳ ಜೀವನದಲ್ಲಿ ಅದನ್ನು ಹೇಗೆ ಬಳಸಿಕೊಳ್ಳುವುದು ಎಂದು ಹೇಳುತ್ತಾ ಕಾರ್ಯಕ್ರಮವು ಯಶಸ್ಸಾಗಿ ಜರಗಲಿ ಎಂದು ಹಾರೈಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ತಿಮ್ಮಯ್ಯ ಎಲ್. ಎಮ್. ಪ್ರಸ್ತಾವನೆಗೈದರು.


ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ. ಕಾಂತೇಶ ಎಸ್. ಮತ್ತು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ದೀಕ್ಷಿತಾ ಕೆ. ಕಾರ್ಯಕ್ರಮ ಸ್ವಾಗತಿಸಿದರು. ರಮ್ಯಾ ಶ್ರೀ ಕೆ. ವಂದಿಸಿದರು. ಪಲ್ಲವಿ ಬಿ. ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here