ಬದುಕು ಕಟ್ಟಿ ಕೊಳ್ಳಲು,ಮತ್ತು ಜ್ಙಾನ ಹೆಚ್ಚಿಸಲು ಸ್ವ ಸಹಾಯ ಸಂಘಗಳು ಅನುಕೂಲ ಆಗಬೇಕು -ದ. ಕ.ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್
ಬಡಗನ್ನೂರುಃಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅರಿಯಡ್ಕ ವಲಯದ ಪಡುವನ್ನೂರು ಗ್ರಾಮದ ಕಾರ್ಯವ್ಯಾಪ್ತಿಯ ಸುಳ್ಯಪದವು ಅಂಗನವಾಡಿ ಕೇಂದ್ರ ನೂತನ ಸ್ವ ಸಹಾಯ ಸಂಘದ ಉದ್ಘಾಟನೆ ಸೆ.26 ರಂದು ನಡೆಯಿತು.
ನೂತನ ಸಂಘವನ್ನು ದ.ಕ.ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ಸಂಘಕ್ಕೆ ‘ನವೋದಯ ‘ಎಂದು 1982ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 5 -6 ಸಂಘಗಳು ಪ್ರಾರಂಭವಾಗಿ ಇಂದು ರಾಜ್ಯದೆಲ್ಲೆಡೆ ಐದೂವರೆ ಲಕ್ಷ ಸ್ವ-ಸಹಾಯ ಸಂಘ ರಚನೆ ಮಾಡಿ ಸುಮಾರು 50 ಲಕ್ಷ ಜನ ಪಾಲ್ಗೊಳ್ಳುತ್ತಿದ್ದಾರೆ.ಅಂದು ಬದುಕು ಬಡತನದಿಂದ ತತ್ತರಿಸುತ್ತಿತ್ತು ಆದರೆ ಇಂದು ಗ್ರಾಮಾಭಿವೃದ್ದಿ ಯೋಜನೆ ಮೂಲಕ ಪೂಜ್ಯರು ಜನರ ಬದುಕನ್ನು ಹಸನಾಗಿಸಿದ್ದಾರೆ. ಸ್ವ ಸಹಾಯ ಸಂಘ ಸಾಲಕ್ಕೆ ಮಾತ್ರ ವಲ್ಲದೆ ಬದುಕು ಕಟ್ಟಿ ಕೊಳ್ಳಲು, ಜ್ಞಾನ ಹೆಚ್ಚಿಸಲು,ಅನುಕೂಲ ಅಗಬೇಕು.ಎಂದ ಅವರು ಒಬ್ಬ ಮಹಿಳೆ ನಾಲ್ಕು ಗೋಡೆಗಳ ಮಧ್ಯದಿಂದ ಹೊರಗೆ ಬಂದು ಸಮಾಜದ ಜನರೊಡನೆ ಬೆರೆಯಲು ಮೂಲ ಕಾರಣ ಗ್ರಾಮಾಭಿವೃದ್ದಿ ಯೋಜನೆ ಎಂದು ಹೇಳಿದರೆ ತಪ್ಪಾಗಲಾರದು ಎಂದರು.
ಸುಳ್ಯಪದವು ನವೋದಯ ಪ್ರೌಢಶಾಲಾ ಆಂಗ್ಲಭಾಷಾ ಶಿಕ್ಷಕಿ ಪ್ರಶಾಂತಿ ಮಾತನಾಡಿ ನೂತನ ಸಂಘ ಬೆಳೆಯಲಿ ಮತ್ತು ತಮ್ಮೆಲ್ಲರ ಬಾಳು ಹಸನಾಗಲಿ ಎಂದು ಶುಭ ಹಾರೈಸಿದರು.
ಈಶ್ವರಮಂಗಲ ಎಂ.ಜಿ.ಟೆಕ್ಸಟೈಲ್ಸ್ ನ ಮಾಲಕ ಉದ್ಯಮಿ ಗಂಗಾಧರ ರೈ ಮಾತನಾಡಿ ಗ್ರಾಮಾಭಿವೃದ್ದಿ ಯೋಜನೆಯು ಧಾರ್ಮಿಕ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಕಾರ್ಯಕ್ರಮದ ಮೂಲಕ ಹಳ್ಳಿ, ಗ್ರಾಮ ಅಭಿವೃದ್ಧಿಯಲ್ಲಿ ಮಹ್ವತದ ಪಾತ್ರ ವಹಿಸಿದೆ. ಜಾತಿ ಬೇಧ ಇಲ್ಲದೆ ಸಮಾನ ದೃಷ್ಟಿಯಿಂದ ನೋಡುತ್ತಿರುವುದು ಸಂತೋಷದಾಯಕವಾಗಿದೆ ಎಂದರು.
ಪುತ್ತೂರು ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.ವೇದಿಕೆಯಲ್ಲಿ ಬಡಗನ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ಶ್ರೀಮತಿ ಕನ್ನಡ್ಕ, ಸದಸ್ಯ ವೆಂಕಟೇಶ್ ಕನ್ನಡ್ಕ ಉಪಸ್ಥಿತರಿದ್ದರು.ಪಡುವನ್ನೂರು ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ ಪುಷ್ಪಲತಾ ಸ್ವಾಗತಿಸಿದರು. ಜ್ಞಾನ ಜ್ಯೋತಿ ಶಿಕ್ಷಕಿ ಜ್ಯೋತಿ ರೈ ವಂದಿಸಿದರು. ಅರಿಯಡ್ಕ ವಲಯ ಮೇಲ್ವಿಚಾರಕ ಹರೀಶ್ ಕಾರ್ಯಕ್ರಮ ನಿರೂಪಿಸಿದರು.ಅಂಗನವಾಡಿ ಕಾರ್ಯಕರ್ತೆ ರಾಮಕಾಂತಿ ಪ್ರಾರ್ಥಿಸಿದರು.