ಮುಂದುವರಿದ ಉಜ್ರುಪಾದೆ ಹೈಮಾಸ್ಟ್ ದೀಪ ಅಳವಡಿಕೆ ಪರ ವಿರೋಧ ಅಭಿಪ್ರಾಯ-ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು ನೇತೃತ್ವದಲ್ಲಿ ಮನವಿ

0

ಪುತ್ತೂರು: ನಗರಸಭೆಯ ವಾರ್ಡ್ ಸಂಖ್ಯೆ 31ರ ಬಲ್ನಾಡು ಗ್ರಾಮದ ಉಜ್ರುಪಾದೆ ಎಂಬಲ್ಲಿ ಹೈಮಾಸ್ಟ್ ದೀಪ ಅಳವಡಿಸುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಪರ ವಿರೋಧಗಳು ಮುಂದುವರಿದಿದೆ. ಇದೀಗ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು ಅವರು ಹೈಮಾಸ್ಟ್ ದೀಪವನ್ನು ಪ್ರಯೋಜನವಿಲ್ಲದಲ್ಲಿ ಅಳವಡಿಸುವ ಬದಲು ಅವಶ್ಯಕತೆ ಇರುವಲ್ಲಿ ಅಳವಡಿಸುವಂತೆ ನಗರಸಭೆಗೆ ಮನವಿ ಮಾಡಿದ್ದಾರೆ.


ಉಜ್ರುಪಾದೆ ಜಂಕ್ಷನ್‌ನಲ್ಲಿ ಹೈ ಮಾಸ್ಟ್ ದೀಪ ಅಳವಡಿಸಲಾಗುತ್ತದೆ. ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ನಗರ ಕಾಂಗ್ರೆಸ್ ಅಧ್ಯಕ್ಷರಾಗಿರುವ ನಗರಸಭೆ ಮಾಜಿ ಸದಸ್ಯ ಹೆಚ್.ಮಹಮ್ಮದ್ ಆಲಿ ಅವರು ನಗರಸಭೆಗೆ ದೂರು ನೀಡಿದ್ದರು. ಈ ಕುರಿತು ನಗರಸಭೆ ಆ ಭಾಗದ ಸದಸ್ಯೆ ಪೂರ್ಣಿಮಾ ಕೋಡಿಯಡ್ಕ ಅವರು ಆಕ್ಷೇಪ ವ್ಯಕ್ತಪಡಿಸಿ ನಾವು ಸಾರ್ವಜನಿಕರ ಮನವಿ ಮೇರೆಗೆ ಅಲ್ಲಿ ಹೈಮಾಸ್ಟ್ ಅಳವಡಿಸುತ್ತಿರುವುದು ಎಂದು ತಿಳಿಸಿದ್ದರು. ಇದೀಗ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು ಅವರು ಉಜ್ರಪಾದೆಯ ಜಂಕ್ಷನ್‌ನಲ್ಲಿ ಅಳವಡಿಸುವ ಹೈಮಾಸ್ಟ್ ದೀಪ ಯಾರಿಗೂ ಪ್ರಯೋಜನವಿಲ್ಲ. ಪುರಸಭೆಯ ಮಾಜಿ ಚಾಲಕನ ಒತ್ತಾಸೆಗೆ ಅಲ್ಲಿ ದೀಪ ಅಳವಡಿಸಲಾಗುತ್ತಿದೆ ಹೊರತು ಸಾರ್ವಜನಿಕ ಹಿತಾಸಕ್ತಿ ಇರುವುದಿಲ್ಲ. ಹೈಮಾಸ್ಟ್ ದೀಪ ಅಳವಡಿಸಬೇಕೆಂದಲ್ಲಿ ಉಜ್ರುಪಾದೆಯಲ್ಲಿರುವ ಸಾರ್ವಜನಿಕರಿಗೆ ಉಪಯೋಗ ಆಗುವ ಹಲವಾರು ಸ್ಥಳಗಳಿವೆ. ಹೈ ಮಾಸ್ಟ್ ದೀಪವನ್ನು ಯಾರಿಗೂ ಪ್ರಯೋಜನವಿಲ್ಲದ, ವಾಹನ ಸಂಚಾಕರಕ್ಕೆ ತೊಂದರೆ ಆಗುವ ರೀತಿಯಲ್ಲಿ ಅಳವಡಿಸುವ ಬದಲು ಸಾರ್ವಜನಿಕರಿಗೆ ಪ್ರಯೋಜನವಾಗುವ ಸ್ಥಳದಲ್ಲಿ ಅಳವಡಿಸುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here