ಪ್ರವೀಣ್ ಚೆನ್ನಾವರ
ಸವಣೂರು : ಗ್ರಾಮ ಪಂಚಾಯತುಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕೆಂಬ ಉzಶದಿಂದ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಗ್ರಾ. ಪಂಗೆ ಪ್ರತಿ ತಾಲೂಕಿಗೆ ಒಂದರಂತೆ ರಾಜ್ಯ ಸರ್ಕಾರದಿಂದ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದ್ದು, ಕಡಬ ತಾಲೂಕಿನ ಸವಣೂರು ಗ್ರಾ.ಪಂ. ಆಯ್ಕೆಯಾಗಿದೆ. ಈ ಪ್ರಶಸ್ತಿ ಆಯ್ಕೆಯ ಹಿಂದೆ ಸವಣೂರು ಗ್ರಾ.ಪಂ.ನ ಅಭಿವೃದ್ದಿ ಪರ ಕಾರ್ಯ ಹಾಗೂ ಸಾಮಾಜಿಕ ಬದ್ದತೆ ಫಲ ನೀಡಿದೆ. ಸವಣೂರು ಗ್ರಾ.ಪಂ. ವ್ಯಾಪ್ತಿಯ ಶಾಲೆಗಳಲ್ಲಿ ಮೂಲ ಸೌಕರ್ಯ,ಅಂಗನವಾಡಿಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿದೆ. ಪ್ರತೀ ಗ್ರಾಮದ ಮನೆ ಮನೆಯಿಂದ ವಾಹನದ ಮೂಲಕ ತ್ಯಾಜ್ಯ ಸಂಗ್ರಹಿಸಿ ಪಾಲ್ತಾಡಿ ಗ್ರಾಮದ ನಾಡೋಳಿ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತ್ಯಾಜ್ಯ ವಿಂಗಡನೆ ಮಾಡಲಾಗುತ್ತದ
ಪ್ರತೀ ಮನೆಗೂ ನಳ್ಳಿ ಮುಖಾಂತರ ಕುಡಿಯುವ ನೀರು ,ಗ್ರಂಥಾಲಯಗಳ ಡಿಜಿಟಲೀಕರಣ ,ಬೀದಿ ದೀಪಗಳ ನಿರ್ವಹಣೆ , ಸವಣೂರು ಜಂಕ್ಷನ್,ಅಂಕತ್ತಡ್ಕ ಜಂಕ್ಷನ್ ಹಾಗೂ ಗ್ರಾ.ಪಂ.ಗಳ ವಿವಿಧೆಡೆ ಸೋಲಾರ್ ದೀಪಗಳ ಅಳವಡಿಕೆ ಮಾಡಲಾಗಿದೆ. ಗ್ರಾಮ ಪಂಚಾಯತ್ ಕಟ್ಟಡಕ್ಕೆ ಸೌರ ವಿದ್ಯುತ್ ಅಳವಡಿಕೆ ಮಾಡಲಾಗಿದೆ. ಸವಣೂರು ಗ್ರಾಮದ ಕನಡ ಕುಮೇರು ಬಳಿ ಹಿಂದೂ ರುದ್ರಭೂಮಿಯ ಅಭಿವೃದ್ದಿ ಮಾಡಲಾಗಿದೆ. ಗ್ರಾ.ಪಂ.ನ ಬಾಪೂಜಿ ಸೇವಾ ಕೇಂದ್ರದ ಮೂಲಕ ಗ್ರಾಮಸ್ಥರಿಗೆ ಉತ್ತಮ ಸೇವೆಗಳನ್ನು ನೀಡಲಾಗುತ್ತಿದೆ.
ಅಮೃತ ಗ್ರಾಮ ಯೋಜನೆಯಲ್ಲಿ ಪುಣ್ಚಪ್ಪಾಡಿ ಗ್ರಾಮದ ನಡುಮನೆಯಲ್ಲಿ ಅಮೃತ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಅಮೃತ ಸರೋವರಕ್ಕೆ ಆಯ್ಕೆಯಾಗಿರುವ ಕೊಂಬಕೆರೆಯನ್ನು ಶ್ರೀ ಕ್ಷೇ.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಕೆರೆ ಅಭಿವೃದ್ದಿ ಸಮಿತಿಯ ಸಹಯೋಗದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಸವಣೂರು ಪ.ಪೂ.ಕಾಲೇಜಿಗೆ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಆಟದ ಮೈದಾನ ನಿರ್ಮಿಸಲಾಗಿದೆ. ಗ್ರಾ.ಪಂ. ವ್ಯಾಪ್ತಿಯ ಪಾಲ್ತಾಡಿ ,ಪುಣ್ಚಪ್ಪಾಡಿ, ಸವಣೂರು ಗ್ರಾಮದಲ್ಲಿರುವ ಎಲ್ಲಾ ಸರಕಾರಿ ಶಾಲೆಗಳಿಗೆ ಉದ್ಯೋಗ ಖಾತರಿ ಯೋಜನೆಯ ಮೂಲಕ ಆವರಣಗೋಡೆ ನಿರ್ಮಾಣ ಮಾಡಲಾಗಿದೆ.ಸ್ವಚ್ಚತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಚತಾ ಕಾರ್ಯ ಸೇರಿದಂತೆ ಹತ್ತು ಹಲವು ಕಾರ್ಯ ನಡೆಸಲಾಗಿದೆ.
ಸ್ವಾತಂತ್ರ ದಿನಾಚರಣೆಯ ಅಮೃತಮಹೋತ್ಸವದ ಅಂಗವಾಗಿ ವಿನೂತನ 75 ಕಾರ್ಯಕ್ರಮಗಳನ್ನು ಮಾಡಲಾಗಿದ್ದು ,ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವವನ್ನು ಅದ್ದೂರಿಯಾಗಿ ನಡೆಸಿ ,ಈ ಹಿಂದೆ ಗ್ರಾ.ಪಂ.ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದವರಿಗೆ ಗೌರವಾರ್ಪಣೆ ,ಸಾಧಕರಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಸವಣೂರು ಗ್ರಾ.ಪಂ. ನಲ್ಲಿ ಪ್ರಸ್ತುತ ಅಧ್ಯಕ್ಷರಾಗಿ ಸುಂದರಿ ಬಿ.ಎಸ್., ಉಪಾಧ್ಯಕ್ಷರಾಗಿ ಜಯಶ್ರೀ ವಿಜಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಥಮ ಅವಧಿಯಲ್ಲಿ ಅಧ್ಯಕ್ಷರಾಗಿ ರಾಜೀವಿ ವಿ.ಶೆಟ್ಟಿ ಕೆಡೆಂಜಿ ,ಉಪಾಧ್ಯಕ್ಷರಾಗಿ ಶೀನಪ್ಪ ಶೆಟ್ಟಿ ನೆಕ್ರಾಜೆ ಕರ್ತವ್ಯ ನಿರ್ವಹಿಸಿದ್ದರು. ಸದಸ್ಯರಾಗಿ ಗಿರಿಶಂಕರ ಸುಲಾಯ, ಅಬ್ದುಲ್ ರಝಾಕ್,ಚೆನ್ನು ಮಾಂತೂರು, ಸತೀಶ್ಅಂಗಡಿಮೂಲೆ,ರಫೀಕ್ಎಂ.ಎ. ,ಯಶೋಧಾ ,ಭರತ್ ರೈ, ತಾರಾನಾಥ ಬೊಳಿಯಾಲ, ಹರೀಶ್ ಕಾಯರಗುರಿ, ಚೇತನಾ ಶಿವಾನಂದ ,ವಿನೋದಾ ರೈ ,ಹರಿಕಲಾ ರೈ, ಚಂದ್ರಾವತಿ ಸುಣ್ಣಾಜೆ, ತೀರ್ಥರಾಮ ಕೆಡೆಂಜಿ,ಇಂದಿರಾ ಬೇರಿಕೆ ,ಬಾಬು ಎನ್ ,ಆಯಿಶತ್ಸಬೀನಾ ಹಾಗೂ ಪ್ರಭಾರ ಅಭಿವೃದ್ದಿ ಅಧಿಕಾರಿಯಾಗಿ ಸಂದೇಶ್,ಲೆಕ್ಕಸಹಾಯಕರಾಗಿ ಹಾಗೂ ಪ್ರಥಮ ಅವಧಿಯಲ್ಲಿ ಪ್ರಭಾರ ಅಭಿವೃದ್ದಿ ಅಧಿಕಾರಿಯಾಗಿ ಎ.ಮನ್ಮಥ ಹಾಗೂ ಸಿಬಂದಿಗಳಾದ ಪ್ರಮೋದ್ ಕುಮಾರ್ ರೈ, ದಯಾನಂದ ಮಾಲೆತ್ತಾರು, ಜಯಾ ಕೆ., ಜಯಶ್ರೀ ,ಯತೀಶ್ ಕುಮಾರ್,ಗ್ರಂಥಪಾಲಕಿಯಾಗಿ ಶಾರದಾ ರಾಮಕುಂಜ ,ವಿಕಲ ಚೇತನರ ಪುನರ್ವಸತಿ ಕಾರ್ಯಕರ್ತೆಯಾಗಿ ದೀಪಿಕಾ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.