ಪುತ್ತೂರು: ಭಾರತ ಸರಕಾರದ ಮಾನ್ಯತೆ ಪಡೆದಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಖಾಸಗಿ ಉದ್ಯೋಗಗಳ ವೃತ್ತಿಪರ ಕೌಶಲ್ಯ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿ ಇದರ ಚೊಚ್ಚಲ ಶಾಖೆ ಸೆ. 28 ರಂದು ಸುಳ್ಯ ರಥಬೀದಿಯಲ್ಲಿನ ಟಿ.ಎ.ಪಿ.ಸಿ.ಎಂ.ಎಸ್. ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ನಿತ್ಯಾನಂದ ಮುಂಡೋಡಿ ದೀಪ ಬೆಳಗಿಸಿ ಕಚೇರಿಯನ್ನು ಉದ್ಘಾಟಿಸಿದರು.
ಅಣ್ಣಾ ವಿನಯಚಂದ್ರ, ಪಿ.ಸಿ.ಜಯರಾಮ್, ಜಯಪ್ರಕಾಶ್ ರೈ, ಪ್ರೊ.ಬಾಲಚಂದ್ರ ಗೌಡ, ಪಿ.ಎಸ್.ಗಂಗಾಧರ್, ಎ.ಕೆ.ಜಯರಾಮ ರೈ, ಜಯರಾಮ ದೇರಪ್ಪಜ್ಜನಮನೆ, ಅರವಿಂದ ಚೊಕ್ಕಾಡಿ, ಡಾ.ಪೂವಪ್ಪ ಕಣಿಯೂರು, ಹೇಮನಾಥ ಶೆಟ್ಟಿ, ವಿನಯ ಕಂದಡ್ಕ, ಪಿ.ಬಿ.ಸುಧಾಕರ ರೈ ಮೊದಲಾದ ಹಲವಾರು ಗಣ್ಯರು ಉಪಸ್ಥಿತರಿದ್ದರು.ಅಕಾಡೆಮಿಯ ಅಧ್ಯಕ್ಷ ಭಾಗ್ಯೇಶ್ ರೈ ಯವರು ಸ್ವಾಗತಿಸಿದರು.