





ಬುಕ್ಕಿಂಗ್‌ಗಾಗಿ ಇಂದೇ ಸಂದರ್ಶಿಸಿರಿ…


ಪುತ್ತೂರು: ದೇಹ ಮನಸ್ಸುಗಳ ಆರೋಗ್ಯಕ್ಕಾಗಿ ಯೋಗ ಎಂಬ ಧ್ಯೇಯದೊಂದಿಗೆ ಶ್ರೀ ದೇವಿ ಯೋಗ ಕೇಂದ್ರ ಇದರ ವತಿಯಿಂದ ಶ್ರೀ ದುರ್ಗಾ ನಿಲಯ ಬಾಲವನ ಪರ್ಲಡ್ಕ ಇಲ್ಲಿ ವಿಶೇಷ ಯೋಗ ತರಬೇತಿ ಡಿ.01 ರಿಂದ ಆರಂಭಗೊಳ್ಳುತ್ತಿದೆ. ಮಂಡಿನೋವು, ನಿದ್ರಾಹೀನತೆ, ಅಧಿಕ ರಕ್ತದೊತ್ತಡ, ಬೊಜ್ಜು ಕರಗಿಸಲು, ಮಧುಮೇಹ, ಏಕಾಗ್ರತೆ, ಮಲಬದ್ಧತೆ, ಮೈಗ್ರೇನ್, ಉಸಿರಾಟದ ತೊಂದರೆ, ಮುಟ್ಟಿನ ಸಮಸ್ಯೆ, ಥೈರಾಯ್ಡ್, ಬೆನ್ನುನೋವು ಇತ್ಯಾದಿ ಖಾಯಿಲೆಗಳಿಗೆ ಅನುಗುಣವಾಗಿ ತಜ್ಞ ಯೋಗ ಕಲಾ ವೈದ್ಯೆಯವರಿಂದ ಯೋಗ ತರಬೇತಿ ನಡೆಯಲಿದೆ.





ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಅವರವರ ಖಾಯಿಲೆಗಳಿಗೆ ಅನುಗುಣವಾಗಿ ವ್ಯಾಯಾಮ, ಆಸನ, ಪ್ರಾಣಾಯಾಮ, ಮುದ್ರೆ ಮತ್ತು ಕ್ರಿಯೆಗಳ ತರಬೇತಿ ನೀಡಲಾಗುತ್ತದೆ. 10 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳು, ಪುರುಷರು,ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರು ಈ ತರಬೇತಿಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ದೇಹ ಮತ್ತು ಮನಸ್ಸುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ಗಮನಿಸಿ
ಯೋಗ ತರಬೇತಿ ಡಿ.01 ರಿಂದ ಆರಂಭಗೊಳ್ಳಲಿದ್ದು ಬೆಳಿಗ್ಗೆ 5 ರಿಂದ 6ರ ತನಕ ಆನ್‌ಲೈನ್ ಕ್ಲಾಸ್ ಮೂಲಕ ತರಬೇತಿ ನೀಡಲಾಗುತ್ತದೆ. 6 ರಿಂದ 8ಗಂಟೆಯವರೆಗೆ ಯೋಗ ಕೇಂದ್ರದಲ್ಲಿ ತರಬೇತಿ ಹಾಗೆ ಸಂಜೆ 5.30 ರಿಂದ 6.30ರವರೆಗೆ ಯೋಗ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ. ಬುಕ್ಕಿಂಗ್ ಮತ್ತು ಹೆಚ್ಚಿನ ಮಾಹಿತಿಗಾಗಿ ಯೋಗ ಕಲಾ ವೈದ್ಯೆ ಡಾ.ಯಶಸ್ವಿ ಬಿಎನ್‌ವೈಎಸ್ (ನೈಸರ್ಗಿಕ ಚಿಕಿತ್ಸೆ ಮತ್ತು ಯೋಗ ವಿಜ್ಞಾನ) ಇವರ ಮೊಬೈಲ್ ಸಂಖ್ಯೆ 7619309443 ಅಥವಾ 7760412741ಗೆ ಸಂಪರ್ಕಿಸಬಹುದಾಗಿದೆ.









