ಸೆ.30:ತಾ|ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನಿಂದ ಕಿಲ್ಲೆ ಮೈದಾನದಲ್ಲಿ ಪ್ರೊ ಕಬಡ್ಡಿ ಮಾದರಿಯ ಅಹರ್ನಿಶಿ ಕಬಡ್ಡಿ

0

10 ಸಾವಿರ ಕ್ರೀಡಾಭಿಮಾನಿಗಳ ನಿರೀಕ್ಷೆ | ಪ್ರೊ ಕಬಡ್ಡಿಗೆ ಕ್ಷಣಗಣನೆ

ಪುತ್ತೂರು: ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್, ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮತ್ತು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಸಂಯುಕ್ತ ಆಶ್ರಯದಲ್ಲಿ ಶ್ರೀ ಗಣೇಶೋತ್ಸವದ ಪ್ರಯುಕ್ತ ನಡೆಯುವ ಮ್ಯಾಟ್ ಅಂಕಣದ ಆಹ್ವಾನಿತ ತಂಡಗಳ ಪುರುಷರ ವಿಭಾಗದ ಪ್ರೊ ಕಬಡ್ಡಿ ಮಾದರಿಯ ಅಹರ್ನಿಶಿ ಕಬಡ್ಡಿ ಪಂದ್ಯಾಟವು ಸೆ.30 ರಂದು ಕಿಲ್ಲೆ ಮೈದಾನದಲ್ಲಿ ನಡೆಯಲಿದ್ದು, ಪ್ರೊ ಕಬಡ್ಡಿ ಮಾದರಿ ಅಹರ್ನಿಶಿ ಕಬಡ್ಡಿಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ ಮಾತ್ರವಲ್ಲ ಪಂದ್ಯಾಟಕ್ಕೆ ಕ್ಷಣಗಣನೆ ಆರಂಭವಾಗಿದೆ.


ಜಿದ್ದಾಜಿದ್ದಿನ ಹೋರಾಟ:
ಪಂದ್ಯಾಟದಲ್ಲಿ ಆಹ್ವಾನಿತ ಬಲಿಷ್ಟ 12 ತಂಡಗಳು ಭಾಗವಹಿಸುತ್ತಿದ್ದು, ಪ್ರತೀ ಪಂದ್ಯಗಳು ಜಿದ್ದಾಜಿದ್ದಿನಂತೆ ಕೂಡಿ ಬರಲಿದೆ. ಪಂದ್ಯಾಟಗಳು ಬೆಳಗ್ಗೆ 9 ರಿಂದ ಆರಂಭವಾಗಿ ರಾತ್ರಿ 9 ಗಂಟೆ ತನಕ ಪಂದ್ಯಾಕೂಟವು ನಡೆಯಲಿದೆ. ಡಿಜಿಟಲ್ ಕ್ಲಾಕ್ ಸಿಸ್ಟಮ್, ಬೃಹತ್ ಪರದೆ, ಕಬಡ್ಡಿ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆಟಗಾರರಿಗೆ ಮತ್ತು ತೀರ್ಪುಗಾರರಿಗೆ ಸಮಸ್ಯೆಯಾಗದ ರೀತಿಯಲ್ಲಿ ಈ ಬಾರಿ ಕಬಡ್ಡಿ ಅಂಕಣದ ಸುತ್ತಲೂ ಇಂತಿಷ್ಟೇ ದೂರದಲ್ಲಿ ಬೇಲಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ ಮಾತ್ರವಲ್ಲದೆ 10 ಸಾವಿರಕ್ಕೂ ಮಿಕ್ಕಿ ಪ್ರೇಕ್ಷಕರು ಆಗಮಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.


ಆಕರ್ಷಕ ಬಹುಮಾನಗಳು/ಸನ್ಮಾನ:
ಪ್ರಥಮ ಬಹುಮಾನ ರೂ.50 ಸಾವಿರ ನಗದು ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನ ರೂ.30 ಸಾವಿರ ನಗದು ಹಾಗೂ ಶಾಶ್ವತ ಫಲಕ, ತೃತೀಯ ಹಾಗೂ ಚತುರ್ಥ ಬಹುಮಾನ ರೂ.20 ಸಾವಿರ ಹಾಗೂ ಶಾಶ್ವತ ಫಲಕ ಅಲ್ಲದೆ ಹಲವಾರು ವೈಯಕ್ತಿಕ ಬಹುಮಾನಗಳನ್ನು ಪಂದ್ಯಾಕೂಟವು ಒಳಗೊಂಡಿದೆ. ಪುತ್ತೂರಿಗೆ ಪ್ರಥಮ ಬಾರಿಗೆ ಪರಿಚಯಿಸಲಿರುವ ಪೊಪ್ಯುಲರ್ ಐಸ್‌ಕ್ರೀಂರವರ ಅಂದಾಜು ರೂ.40 ಸಾವಿರ ಪ್ರಾಯೋಜಕತ್ವದ ಆಕರ್ಷಕ ಟ್ರೋಫಿಗಳ ಆಕರ್ಷಣೆಯನ್ನು ಈ ಪಂದ್ಯಾಟವು ಒಳಗೊಂಡಿದೆ ಅಲ್ಲದೆ ಈ ಪಂದ್ಯಾಟದಲ್ಲಿ ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವೈದ್ಯರುಗಳಿಗೆ ಸನ್ಮಾನ, ‘ಡಿ’ ಗ್ರೂಪ್ ನೌಕರರಿಗೆ ಸಮವಸ್ತ್ರ ವಿತರಣೆ ಜರಗಲಿದೆ.


ಉದ್ಘಾಟನಾ ಸಮಾರಂಭ:
ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರು ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲು, ಸಹಾಯಕ ಆಯುಕ್ತ ಗಿರೀಶ್ ನಂದನ್, ಪುತ್ತೂರು ಡಿವೈಎಸ್‌ಪಿ ಡಾ.ಗಾನ ಸಿ.ಕುಮಾರ್, ಕರ್ನಾಟಕ ಸರಕಾರ ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಸುದಾನ ವಸತಿಯುತ ಶಾಲಾ ಸಂಚಾಲಕ ರೆ|ವಿಜಯ ಹಾರ್ವಿನ್, ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ರಾಜ್ಯ ಸರಕಾರದ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ಶ್ರೀಮತಿ ದಿವ್ಯಪ್ರಭಾ ಚಿಲ್ತಡ್ಕ, ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಮೈಸೂರು ಎಸ್‌ಎಲ್‌ವಿ ಗ್ರೂಪ್‌ನ ದಿವಾಕರ್ ದಾಸ್, ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಪವರ್ ಪ್ರಾಜೆಕ್ಟ್ ಜನರಲ್ ಮ್ಯಾನೇಜರ್ ಹರೀಶ್ ಶೆಟ್ಟಿ, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ಉದ್ಯಮಿ ಅರಿಯಡ್ಕ ಸಂದೀಪ್ ಶೆಟ್ಟಿ ಬೆಂಗಳೂರು, ಉದ್ಯಮಿ ಪ್ರವೀಣ್ ಶೆಟ್ಟಿ ಅಳಕೆಮಜಲು ಬೆಂಗಳೂರು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕರುಣಾಕರ ಸುವರ್ಣ, ಪ್ರಗತಿಪರ ಕೃಷಿಕ ವೆಂಕಟೇಶ್ ಅಯ್ಯಂಗಾರ್ ಮುಂಡೂರು, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ರಾಜರಾಮ ಶೆಟ್ಟಿ ಕೋಲ್ಫೆರವರು ಭಾಗವಹಿಸಲಿದ್ದಾರೆ.


ಗೌರವ ಉಪಸ್ಥಿತಿ:
ಗೌರವ ಉಪಸ್ಥಿತಿಯಾಗಿ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪುತ್ತೂರು ಶಂಕರ್ ಗ್ರೂಪ್ ಆಪ್ ಕಂಪೆನಿಯ ಎಂ.ಡಿ ಸತ್ಯಶಂಕರ್ ಭಟ್, ಕ್ಲಾಸ್-೧ ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ರಾಧಾಕೃಷ್ಣ ನಾಕ್, ಬನ್ನೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಭರತ್ ಕುಮಾರ್ ಆರಿಗ ಪಟ್ಟೆಗುತ್ತು, ಕುಂಬ್ರ ಪಂಚಮಿ ಎಕ್ಸ್‌ಪೋರ್ಟ್‌ನ ಮೇನೆಜಿಂಗ್ ಪಾರ್ಟ್ನರ್ ಪುರಂದರ ರೈ, ಉದ್ಯಮಿ ಗಂಗಾಧರ್ ರೈ ಮಾಣಿ, ಉದ್ಯಮಿ ಸಚಿನ್ ಟ್ರೇಡರ‍್ಸ್‌ನ ಮಂಜುನಾಥ ನಾಯಕ್, ಉದ್ಯಮಿಗಳಾದ ಸೂರಜ್ ನಾಯರ್, ರೋಶನ್ ರೈ ಬನ್ನೂರು, ಎಂ.ಆರ್ ಜಯಕುಮಾರ್, ಉಮೇಶ್ ನಾಡಾಜೆ ಮಂಗಳೂರು, ಸುಕುಮಾರ್ ಶೆಟ್ಟಿ ಉಜಿರೆ, ಶಮ್ಮೂನ್ ಪರ್ಲಡ್ಕ, ಚೆಲ್ಯಡ್ಕ ಯತೀಶ್ ರೈ ಪಟ್ಲ-ಮಂಗಳೂರು, ಮಹಮ್ಮದ್ ರಫೀಕ್ ಕೊಡಾಜೆ(ಸುಲ್ತಾನ್), ಸುಧೀರ್ ಶೆಟ್ಟಿ ನೇಸರ ಕಂಪ, ಗಂಗಾಧರ ಶೆಟ್ಟಿ ಕೈಕಾರ, ರಮೇಶ್ ಶಾಂತಿಗೋಡು, ಶಶಿಧರ್ ಮೈಸೂರು, ಉಜ್ವಲ್ ಪುತ್ತೂರು, ಅರುಣ್ ಕುಮಾರ್ ಆನಾಜೆ, ಅಬ್ದುಲ್ ಜಲೀಲ್ ಸಂಪ್ಯ, ಇಲ್ಯಾಸ್ ಮುಕ್ವೆ, ಮೋಹನ್‌ದಾಸ್ ಮೇಗಿನಗುತ್ತು, ಪಿಡಬ್ಲ್ಯೂಡಿ ಇಂಜಿನಿಯರ್ ಪ್ರಮೋದ್ ಕುಮಾರ್, ಕಬಕ ಕಾಮತ್ ಕ್ರಷರ‍್ಸ್‌ನ ಆದಿತ್ಯ ಕಾಮತ್, ಸಾಜ ಟಿಂಬರ್ ಮರ್ಚಂಟ್ ಯೂಸುಫ್ ಗೌಸಿಯಾ, ಪೆರ್ಲಂಪಾಡಿ ಶ್ರೀ ಷಣ್ಮುಖ ಪ್ರೌಢಶಾಲೆಯ ಸಂಚಾಲಕ ಶಿವರಾಮ ಭಟ್, ಯಂಗ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಂಜಿತ್ ಬಂಗೇರ, ನಗರಸಭಾ ಸದಸ್ಯ ಮಹಮದ್ ರಿಯಾಜ್, ಬೊಳುವಾರು ಪ್ರಣಾಮ್ ಎಂಟರ್‌ಪ್ರೈಸಸ್‌ನ ದಯಾನಂದ ರೈ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ವೈದ್ಯರಾದ ಡಾ.ಸುರೇಶ್ ಪುತ್ತೂರಾಯ, ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಸಂತೋಷ್ ರೈ ಇಳಂತಾಜೆ, ಕಲ್ಲಾರೆ ಜೆ.ಕೆ ಕನ್‌ಸ್ಟ್ರಕ್ಷನ್ ಆಂಡ್ ಡೆವಲಪರ‍್ಸ್‌ನ ಜಯಕುಮಾರ್ ನಾಯರ್, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಪಡ್ಡಾಯೂರು ಸ್ವಸ್ತಿಕ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಲೋಕೇಶ್ ಪಡ್ಡಾಯೂರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಂ, ಆರ್ಯಾಪು ಸಿಎ ಬ್ಯಾಂಕ್ ಅಧ್ಯಕ್ಷ ಎಚ್.ಮಹಮದ್ ಆಲಿ, ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ರೈ ನಳೀಲು, ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಮಂಗಳೂರು ಎಂಆರ್‌ಪಿಎಲ್‌ನ ಸೀತಾರಾಮ ರೈ ಕೈಕಾರ, ಪೊಪ್ಯುಲರ್ ಸ್ವೀಟ್ಸ್ ಮಾಲಕ ನಾಗೇಂದ್ರ ಕಾಮತ್, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಕಬಡ್ಡಿ ಆಟಗಾರ ಪ್ರವೀಣ್ ಚಂದ್ರ ಆಳ್ವ, ಎಎಪಿ ಜಿಲ್ಲಾಧ್ಯಕ್ಷ ಡಾ.ವಿಷು ಕುಮಾರ್, ಮೆಸ್ಕಾಂ ಮಾಜಿ ನಿರ್ದೇಶಕ ಕಿಶೋರ್ ಕುಮಾರ್ ಬೊಟ್ಯಾಡಿ,, ಪಟ್ಟೆ ಅರ್ಥ್‌ಮೂವರ‍್ಸ್‌ನ ರಾಧಾಕೃಷ್ಣ ರೈ, ನಿಡ್ಪಳ್ಳಿ ಗ್ರಾ.ಪಂ ಸದಸ್ಯ ಬಾಲಚಂದ್ರ ರೈ ಆನಾಜೆ, ಪುತ್ತೂರು ಹೆಗ್ಡೆ ಪ್ಲಾಸ್ಟಿಕ್‌ನ ದಾಮೋದರ ಹೆಗ್ಡೆ, ಕಿರಣ್ ಎಂಟರ್‌ಪ್ರೈಸಸ್‌ನ ಮಾಲಕ ಕೇಶವ ಎಂ, ಈಶ್ವರಮಂಗಲ ರತನ್ ನಾಯಕ್ ಕರ್ನೂರ್‌ಗುತ್ತು, ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ನಿರ್ದೇಶಕ ಮನೋಜ್ ಡಾಯಸ್, ಇಡ್ಕಿದು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುಧಾಕರ್ ಶೆಟ್ಟಿರವರು ಭಾಗವಹಿಸಲಿದ್ದಾರೆ.


ಸಮಾರೋಪ ಸಮಾರಂಭ:
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈರವರು ವಹಿಸಲಿದ್ದಾರೆ. ರಾಜ್ಯ ಸರಕಾರದ ಸಭಾಪತಿ ಯು.ಟಿ ಖಾದರ್ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ನಗರಾಭಿವೃದ್ಧಿ ಸಚಿವರಾದ ವಿನಯಕುಮಾರ್ ಸೊರಕೆ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಚೇರ್‌ಮ್ಯಾನ್ ರಾಕೇಶ್ ಮಲ್ಲಿ, ಮಂಗಳೂರು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಉದ್ಯಮಿ ರವಿ ಶೆಟ್ಟಿ ಕತಾರ್, ಚೌಟ ಇಂಡಿಯನ್ ಗ್ಯಾಸ್ ಏಜೆನ್ಸಿಯ ಜಗನ್ನಾಥ್ ಚೌಟ, ಪುತ್ತೂರು-ಪಾಣಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ, ಹಿಂದೂಸ್ಥಾನ್ ಪ್ರಮೋಟರ‍್ಸ್ ಮತ್ತು ಡೆವಲಪ್ಪರ‍್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಮಹಮ್ಮದ್ ಇಬ್ರಾಹಿಂ, ಅಕ್ಷಯ ಕಾಲೇಜ್ ಚೇರ್‌ಮ್ಯಾನ್ ಜಯಂತ್ ನಡುಬೈಲು, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವಿನೋದ್ ಶೆಟ್ಟಿ ಅರಿಯಡ್ಕ, ಮಂಗಳೂರು ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರತನ್ ಶೆಟ್ಟಿ, ಕಾರ್ಯಾಧ್ಯಕ್ಷ ಪುರುಷೋತ್ತಮ ಪೂಜಾರಿ, ಬೆಳಂದೂರು ಅಲಿಫ್ ಚಾಆರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶ್ರಫ್ ಶಾ ಮಾಂತೂರು, ಪುತ್ತೂರು ಸರಕಾರಿ ಆಸ್ಪತ್ರೆ ವೈದ್ಯ ಡಾ.ಅಜಯ್, ಉದ್ಯಮಿ ಇಕ್ಬಾಲ್ ಕೋಲ್ಫೆ ನೆಲ್ಯಾಡಿ, ತಾಲೂಕು ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಉದ್ಯಮಿ ಅಜಿತ್ ಶೆಟ್ಟಿ ಬೆಂಗಳೂರು, ರುಚಿ ಕೆಟರರ‍್ಸ್‌ನ ಸುಜಿತ್ ಶೆಟ್ಟಿ ಸವಣೂರು, ಪುತ್ತೂರು ಸಂತೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಡಿ.ಕೆ ಹಮೀದ್‌ರವರು ಭಾಗವಹಿಸಲಿದ್ದಾರೆ ಎಂದು ತಾಲೂಕು ಅಮೆಚೂರು ಕಬಡ್ಡಿ ಪಂದ್ಯಾಟದ ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು ನೇಸರ, ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ, ಪಂದ್ಯಾಟ ಸಮಿತಿ ಗೌರವಾಧ್ಯಕ್ಷ ಶಿವರಾಂ ಆಳ್ವ, ಅಧ್ಯಕ್ಷ ಹಬೀಬ್ ಮಾಣಿ, ಕಾರ್ಯದರ್ಶಿ ನವನೀತ್ ಬಜಾಜ್, ನಿರ್ವಾಹಕ ಎಲ್ಯಾಸ್ ಪಿಂಟೋ, ರೆಫ್ರಿ ಬೋರ್ಡ್ ಅಧ್ಯಕ್ಷ ಆಸಿಫ್ ತಂಬುತ್ತಡ್ಕ ಹಾಗೂ ಪದಾಧಿಕಾರಿಗಳು, ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏಕಲವ್ಯ ಪ್ರಶಸ್ತಿ ಪುರಸ್ಕೃತ ಜಿಲ್ಲೆಯ ಪ್ರಥಮ ಕಬಡ್ಡಿ ಆಟಗಾರ
ದಿ.ಉದಯ ಚೌಟರವರ ಸ್ಮರಣಾರ್ಥ ಕಬಡ್ಡಿ..

ದಿ.ಉದಯ ಚೌಟ

ಬಂಟ್ವಾಳದ ಮಾಣಿ ಬದಿಗುಡ್ಡೆ ನಿವಾಸಿ, ಬ್ಯಾಂಕ್ ಆಫ್ ಬರೋಡದ ಉಪ ಪ್ರಬಂಧಕರಾಗಿದ್ದ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಆಟಗಾರ, ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ದಿ.ಉದಯ ಚೌಟರವರ ಮನದಾಳದ ಆಸೆಯೇ ಪುತ್ತೂರಿನಲ್ಲಿ ಕಬಡ್ಡಿ ಪಂದ್ಯಾಟ ಏರ್ಪಡಿಸಬೇಕೆಂಬುದು. 2007ರ ದ್ವಿತೀಯ ವಿಶ್ವಕಪ್ ಕಬಡ್ಡಿ ಪಂದ್ಯಾಟದಲ್ಲಿ ಅತ್ತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು. ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ನಾಲ್ಕು ವರ್ಷ ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ಜಯಗಳಿಸಿದ್ದ ಉದಯ್ ಚೌಟರವರು ಅಂತರ್ ವಿಶ್ವವಿದ್ಯಾನಿಲಯದ ದಕ್ಷಿಣ ವಲಯಕ್ಕೆ ಮಂಗಳೂರು ವಿವಿಯನ್ನು ಮೂರು ವರ್ಷ ಪ್ರತಿನಿಧಿಸಿದ್ದರು. 1993ರಲ್ಲಿ ಜ್ಯೂ.ನ್ಯಾಷನಲ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು 2000ರಿಂದ 2008ರ ವರೆಗೆ ರಾಷ್ಟ್ರೀಯ ತಂಡದಲ್ಲಿದ್ದರು. ಬ್ಯಾಂಕ್ ಒಲಿಂಪಿಯಾಡ್, ಬ್ಯಾಂಕ್ ಸ್ಪೋರ್ಟ್ಸ್ ಬೋರ್ಡ್ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ್ದು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ದ.ಕ ಜಿಲ್ಲೆಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ಸಂಘಟನಾ ಉಪಾಧ್ಯಕ್ಷರಾಗಿ, 2004ರಲ್ಲಿ ಭಾರತ-ಬಾಂಗ್ಲಾ ಟೆಸ್ಟ್ ಕಬಡ್ಡಿ ಪಂದ್ಯಾಟದಲ್ಲಿ 5 ಪಂದ್ಯಗಳನ್ನು ಜಯಿಸಿ ಚಿನ್ನದ ಪದಕವನ್ನು ಪಡೆದಿದ್ದರು. ಕ್ರೀಡೆಯಲ್ಲಿನ ಸಾಧನೆಗೆ ರಾಜ್ಯ ಸರಕಾರ ನೀಡುವ ಏಕಲವ್ಯ ಪ್ರಶಸ್ತಿಯನ್ನು ದ.ಕ ಜಿಲ್ಲೆಯಿಂದ ಪ್ರಥಮ ಬಾರಿಗೆ ಪಡೆದ ಹೆಗ್ಗಳಿಕೆ ಉದಯ ಚೌಟರವರದ್ದು. 20 ವರ್ಷಗಳ ಕಾಲ ಕಬಡ್ಡಿ ಜೀವನದಲ್ಲಿ ಅಖಿಲ ಭಾರತ ಮಟ್ಟದಲ್ಲಿ 100ಕ್ಕೂ ಅಧಿಕ, ರಾಜ್ಯ ಮಟ್ಟದಲ್ಲಿ 300ಕ್ಕೂ ಅಧಿಕ ಪಂದ್ಯಾಟಗಳನ್ನು ಆಡಿರುತ್ತಾರೆ.

ವಿಶೇಷ ಆಕರ್ಷಣೆ..
ಪಂದ್ಯಾಟದ ಆಕರ್ಷಣೆಯಾಗಿ ಆರಂಭಿಕ ಪಂದ್ಯಾಟದ ಮುನ್ನ ಖ್ಯಾತ ಗಾಯಕಿ ‘ಕಟೀಲು ಶ್ರೀದೇವಿ ಚರಿತೆ’ ಮತ್ತು ‘ಕೋಟಿ-ಚೆನ್ನಯ’ ಧಾರವಾಹಿ ನಟಿ ಸಮನ್ವಿ ರೈ ಮದಕರವರು ರಾಷ್ಟ್ರಗೀತೆ ಹಾಡುವುದರ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಲಿದ್ದಾರೆ.


ಚಲನಚಿತ್ರ ನಟರು ಭಾಗಿ..
ಈ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಟರಾದ ಚಲನಚಿತ್ರ ನಟ, ನಿರ್ದೇಶಕ, ರಂಗ ಕಲಾವಿದ ಸುಂದರ್ ರೈ ಮಂದಾರ, ಚಲನಚಿತ್ರ ನಟ, ರಂಗ ಕಲಾವಿದ ದೀಪಕ್ ರೈ ಪಾಣಾಜೆ, ಸರ್ಕಸ್ ಚಲನಚಿತ್ರದ ನಟಿ ಕು|ರಚನಾ ರೈ, ಚಲನಚಿತ್ರ ನಟಿ ಕು|ದೀಕ್ಷಾ ರೈಯವರು ಭಾಗವಹಿಸಲಿದ್ದಾರೆ.


ಪ್ರದರ್ಶನ ಪಂದ್ಯ..
ಪಂದ್ಯಾಕೂಟವನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಪ್ರದರ್ಶನ ಪಂದ್ಯಾಟವನ್ನು ಏರ್ಪಡಿಸಲಾಗಿದ್ದು, ಪೊಲೀಸ್ ತಂಡ, ಫಿಲೋಮಿನಾ ಕಾಲೇಜು ‘ಎ’ ಮತ್ತು ‘ಬಿ’ ತಂಡ ಹಾಗೂ ವಿವೇಕಾನಂದ ಕಾಲೇಜಿನ ತಂಡಗಳ ಮಧ್ಯೆ ಪಂದ್ಯಾಟ ನಡೆಯಲಿದೆ.

ಪಂದ್ಯಾಟ ಸುದ್ದಿ ಯೂಟ್ಯೂಬ್ ಚಾನೆಲ್‌ನಿಂದ ನೇರ ಪ್ರಸಾರ

-ಸಂತೋಷ್ ಮೊಟ್ಟೆತ್ತಡ್ಕ

LEAVE A REPLY

Please enter your comment!
Please enter your name here