ಪುತ್ತೂರು : ಪ್ರಣಾಮ್ ನೆಕ್ಕಿಲು ಇವರ ಮಾಲೀಕತ್ವದ ಎನ್.ಪಿ.ಸ್ಟುಡಿಯೋ ಬೆಳ್ಳಾರೆ ಜೂನಿಯರ್ ಕಾಲೇಜು ಬಳಿಯ ಲಕ್ಷ್ಮೀ ಜನತಾ ಸಂಕೀರ್ಣ ಇದರ ಮೊದಲ ಮಹಡಿಯಲ್ಲಿ ಸೆ.28 ರಂದು ಶುಭಾರಂಭಗೊಂಡಿತು.
ಆರಾಧ್ಯ ಸ್ಟುಡಿಯೋ ಮಾಲೀಕ ಯತಿನ್ ದೀಪ ಪ್ರಜ್ವಲನೆ ಮೂಲಕ ಮಳಿಗೆಯ ಉದ್ಘಾಟನೆ ನೆರವೇರಿಸಿ ,ಹಾರೈಸಿದರು.ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸುಭಾಷ್ ಹಾಗೂ ಕುಂಬ್ರ ಜ್ಯೋತಿ ಸ್ಟುಡಿಯೋ ಮಾಲೀಕ ಕರುಣಾಕರ ಗೌಡ ಎಲಿಯ ಮಾತನಾಡಿ , ಉತ್ತಮ ರೀತಿಯ ಸೇವೆಯನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಸಂಸ್ಥೆಯೂ ಹೆಸರುವಾಸಿಯಾಗಲಿಯೆಂದು ಹೇಳಿ , ಶ್ರೇಯೋಭಿವೃದ್ದಿಗೆ ಹರಸಿದರು.
ಎಸ್.ಕೆ.ಪಿ.ಎ ಪುತ್ತೂರು ವಲಯ ಗೌರವಧ್ಯಕ್ಷ ಹರೀಶ್ ಗೌಡ ಎಲಿಯ ,ಮಾಲೀಕರ ಹೆತ್ತವರಾದ ಪದ್ಮಯ್ಯ ನಾಯ್ಕ ಹಾಗೂ ವನಿತಾ ಪದ್ಮಯ್ಯ ,ರಾಘವೇಂದ್ರ ಬೇಕರಿ ಮಾಲೀಕ ಪ್ರಮೋದ್ ,ಉಜಿರೆ ರುಡ್ ಸೆಟ್ ನ ಫೋಟೋಗ್ರಫಿ ತರಬೇತಿ ಬ್ಯಾಚ್ ಸದಸ್ಯರುಗಳಾದ ಅಶ್ವಥ್,ಪುಷ್ಪರಾಜ್ ,ಅಶ್ವಥ್ ಹೆಚ್ ಮತ್ತು ದಿಕ್ಷೀತ್ ,ಮಾಲೀಕರ ಸಹೋದರ ಪ್ರದೀಪ್ ಕುಮಾರ್ ನೆಕ್ಕಿಲು , ತಿಮ್ಮಪ್ಪ ,ಸುಬ್ಬಣ್ಣ ,ನವೀನ್ ,ಮೋಹನ್ ಹಾಗೂ ಭರತ್ ಸಹಿತ ಹಲವು ಅತಿಥಿಗಳು ಆಗಮಿಸಿದರು.
ಮಾಲೀಕ ಪ್ರಣಾಮ್ ನೆಕ್ಕಿಲು ಅತಿಥಿಗಳನ್ನು ಸ್ವಾಗತಿಸಿ ಬಳಿಕ ಮಾತನಾಡಿ ,ಹುಟ್ಟುಹಬ್ಬ , ಮದುವೆ , ವಾರ್ಷಿಕೋತ್ಸವ , ಶುಭಕಾರ್ಯಗಳಿಗೆ ಬೇಕಾಗುವಂತಹ ಹಲವೂ ಬಗೆಯ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ , ಇನ್ಡೋರ್ ಮತ್ತು ಔಟ್ಡೋರ್ ಶೂಟ್ , ಫೋಟೋ ಕಾಪಿ ಜೊತೆಗೆ ಫ್ರೇಮ್ ವರ್ಕ್, ವಿಡಿಯೋ ಎಡಿಟಿಂಗ್ , ಅಲ್ಬಮ್ ವರ್ಕ್ ,ಲ್ಯಾಮಿನೇಷನ್ ವರ್ಕ್ ಮಾತ್ರವಲ್ಲದೇ ಮಗ್ ಮತ್ತು ಕಸ್ಟಮೈಸ್ಡ್ ಗಿಫ್ಟ್ ಸಾಮಾಗ್ರಿಗಳು ಜೊತೆಗೆ ಜೆರಾಕ್ಸ್ ಸೌಲಭ್ಯವೂ ಒಂದೇ ಸೂರಿನಡಿಯಿದ್ದು , ಎಲ್ಲರೂ ಪೂರ್ಣ ರೀತಿಯಲ್ಲಿ ಸಹಕಾರ ,ಬೆಂಬಲ ನೀಡುವಂತೆ ಕೋರಿ , ವಂದಿಸಿದರು.