





ಪುತ್ತೂರು:ಇಲ್ಲಿನ ಕಲ್ಲಿಮಾರು ಶ್ರೀ ಮಹಮ್ಮಾಯ ದೇವಸ್ಥಾನದ ಬಳಿ ಚೇತನಾ ಆಸ್ಪತ್ರೆಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಉಚಿತ ಶ್ವಾಸಕೋಶ ತಪಾಸಣೆ, ರಿಯಾಯಿತಿ ದರದಲ್ಲಿ CBC, IGE ತಪಾಸಣೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಲಿದೆ. ಮಂಗಳೂರಿನ ಫಾ.ಮುಲ್ಲರ್ಸ್ ಆಸ್ಪತ್ರೆಯಲ್ಲಿ ಶ್ವಾಸಕೋಶ ಹಾಗೂ ಆಲರ್ಜಿ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಡೋನ್ ಗ್ರೆಗೊರಿ ಮಸ್ಕರೇನ್ಹಸ್ ರವರು ಶ್ವಾಸಕೋಶ ತಪಾಸಣೆಯನ್ನು ಮಾಡಲಿದ್ದಾರೆ. ಫಲಾನುಭವಿಗಳು ಶಿಬಿರದಲ್ಲಿ ಹಾಜರಾಗಿ ಶಿಬಿರದ ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ 9379442485, 8123276901 ನಂಬರಿಗೆ ಸಂಪರ್ಕಿಸಬಹುದು ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.











