ಬಡಗನ್ನೂರು: ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ಶ್ರೀ ವಿನಾಯಕ ಚತುರ್ಥಿ ಪ್ರಯುಕ್ತ ಶ್ರೀ ಮಹಾಗಣಪತಿ ಹೋಮ, ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಆ.27 ರಂದು ನಡೆಯಲಿದೆ.
ಬೆಳಗ್ಗೆ ಗಂ.9 ರಿಂದ ಶ್ರೀ ಮಹಾಗಣಪತಿ ಹೋಮ, ಬಳಿಕ ಗಂ.10 ರಿಂದ ಗುರುದಕ್ಷಿಣೆ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಹಿಮ್ಮೇಳದಲ್ಲಿ ಭಾಗವತರು ಲಕ್ಷ್ಮೀನಾರಾಯಣ ಭಟ್ಟ ಬಟ್ಯಮೂಲೆ ಹಾಗೂ ಆದಿತ್ಯಕೃಷ್ಣ ದ್ವಾರಕಾ ಭಾಗವಹಿಸಲಿದ್ದಾರೆ.
ಚೆಂಡೆ-ಮದ್ದಳೆ-ಚಕ್ರತಾಳವಾದಕರಾಗಿ ಶ್ರೀಹರಿ ಪದ್ಯಾಣ, ಸ್ಕಂದಗಣಪತಿ ಅಡ್ಕಸ್ಥಳ, ಅಕ್ಷರೀ ದ್ವಾರಕಾ, ಹಾಗೂ ಮುಮ್ಮೇಳದಲ್ಲಿ ಗಣರಾಜ ಕುಂಬ್ಳೆ, ವೆಂಕಟೇಶ ಭಟ್ ಬಾಳಿಲ, ಕೃಷ್ಣಮೂರ್ತಿ ಭಟ್ ಕೆಮ್ಮಾರ, ಧನ್ಯಶ್ರೀ ಮಿಂಚಿನಡ್ಕ, ಕೀರ್ತನಾ ಅರ್ತ್ಯಡ್ಕ ಭಾಗವಹಿಸಲಿದ್ದಾರೆ. ಭಾಜನರಾಗಿರಿ ಕಲೆಯನ್ನು ಕಲಾವಿದರನ್ನು ಪ್ರೋತ್ಸಾಹಿಸುವಂತೆ ಪುತ್ತೂರು ದ್ವಾರಕಾ ಪ್ರತಿಷ್ಠಾನ (ರಿ.) ಅಧ್ಯಕ್ಷ ಗೋಪಾಲಕೃಷ್ಣ ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.