ಪುತ್ತೂರು ಬಾಲಕಿಯರ ಸ.ಪ.ಪೂ ಕಾಲೇಜಿನಲ್ಲಿ ಜ್ಯೂನಿಯರ್ ರೆಡ್ ಕ್ರಾಸ್ ಘಟಕದ ಉದ್ಘಾಟನೆ

0

ಪುತ್ತೂರು : ಮುಕ್ರಂಪಾಡಿಯಲ್ಲಿರುವ ಬಾಲಕಿಯ ಸರಕಾರಿ ಪ.ಪೂ.ಕಾಲೇಜಿನ ಜ್ಯೂನಿಯರ್ ರೆಡ್ ಕ್ರಾಸ್ ಘಟಕವನ್ನು ವಿಭಿನ್ನ ರೀತಿಯಲ್ಲಿ ಉದ್ಘಾಟಿಸಲಾಯಿತು.

ಎನ್‌ಡಿಆರ್‌ಎಫ್ ದ.ಕ ಜಿಲ್ಲಾ ಪ್ರಾದೇಶಿಕಾ ಪಡೆಯ ಇನ್‌ಸ್ಪೆಕ್ಟರ್ ಹರಿಶ್ಚಂದ್ರ ಪಾಂಡೆಯವರು ದೀಪ ಪಜ್ವಲಿಸುವದರೊಂದಿಗೆ ಉದ್ಘಾಟಿಸಿ ಮಾತನಾಡಿ, ಎನ್‌ಡಿಆರ್‌ಎಫ್ ಹೇಗೆ ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆಯಲ್ಲಿ ಸಕೀಯವಾಗಿ ತೊಡಗಿಸಿಕೊಂಡು, ಜನರ ಜೀವರಕ್ಷಣೆ ಚರ್ತು ಚಿಕಿತ್ಸೆ, ಸಾಂತ್ವಾನ, ಧೈರ್ಯ ತುಂಬುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ತಿಳಿಸಿದರು. ನಂತರದಲ್ಲಿ ಪ್ರಥಮ ಚಿಕಿತ್ಸೆ, ಬೆಂಕಿ ಅಪಘಾತ, ನೆರೆಹಾವಳಿ, ರಸ್ತೆ ಅಪಘಾತ, ಹೃದಯಾಘಾತ, ಭೂಕಂಪ, ರಕ್ತಸ್ರಾವ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆಗಳನ್ನು ನಡೆಸುವುದರ ಮೂಲಕ ಪ್ರತ್ಯಕ್ಷ ಅನುಭವಾತ್ಮಕ ಮಾಹಿತಿ ನೀಡಲಾಯಿತು.

ಕಾರಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರಮೀಳ ಜೆಸ್ಸಿ ಕ್ರಾಸ್ತಾ ವಹಿಸಿದ್ದರು. ಇತಿಹಾಸ ಉಪನ್ಯಾಸಕ ಜೂನಿಯರ್ ರೆಡ್ ಕ್ರಾಸ್ ಘಟಕದ ಸಂಯೋಜಕ ದಾಮೋದರ್ ಪ್ರಾಸ್ತಾವಿಕ ನುಡಿಗಳೊಂದಿಗೆ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿಯರಾದ ಪವಿತ್ರ ಹಾಗೂ ಭೂಮಿಕ ಪ್ರಾರ್ಥಿಸಿದರು. ಎನ್‌ಡಿಆರ್‌ಎಫ್‌ನ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಚಿತ್ರ: ಮುಕ್ರಂಪಾಡಿ

LEAVE A REPLY

Please enter your comment!
Please enter your name here