ಪುತ್ತೂರು: ವಿಜಯ ಸಾಮ್ರಾಟ್ ಪುತ್ತೂರು ಇದರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಅಬ್ಬರಿಸಲಿರುವ ದ.ಕ ಜಿಲ್ಲೆಯ ಆಹ್ವಾನಿತ ಹತ್ತು ತಂಡಗಳ ಸ್ಪರ್ಧೆ ‘ಪಿಲಿಗೊಬ್ಬು’ ಹಾಗೂ ವಿವಿಧ ಖಾದ್ಯಗಳ ‘ಫುಡ್ ಫೆಸ್ಟಿವಲ್’ ಕಾರ್ಯಕ್ರಮವು ಅ.22 ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಜರಗಲಿದ್ದು, ಇದರ ಚಪ್ಪರ ಮುಹೂರ್ತವು ಸೆ.30 ರಂದು ನೆರವೇರಿತು.
ಅರ್ಚಕರಾದ ಉದಯಕೃಷ್ಣ ಭಟ್ ರವರು ಚಪ್ಪರ ಮುಹೂರ್ತದ ಪೂಜಾ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ವಿಜಯ ಸಾಮ್ರಾಟ್ ಇದರ ಗೌರವಾಧ್ಯಕ್ಷ ಸಹಜ್ ರೈ ಬಳೆಜ್ಜ, ಸಂಚಾಲಕ ನಾಗಾರಾಜ್ ನಡುವಡ್ಕ, ಕಾರ್ಯದರ್ಶಿ ಶರತ್ ಕುಮಾರ್ ಮಾಡಾವು, ಕೋಶಾಧಿಕಾರಿ ರಾಜೇಶ್ ಗೌಡ ಹಾಗೂ ಅಶೋಕ್ ಅಡೂರ್, ಜೊತೆ ಕಾರ್ಯದರ್ಶಿ ಶಂಕರ್ ಭಟ್ ಈಶಾನ್ಯ, ಪ್ರಮುಖರಾದ ಪ್ರೀತಂ ರೈ ಪೆರ್ನೆ, ಮಧು ಕುಮಾರ್, ನಗರಸಭಾ ಮಾಜಿ ಸದಸ್ಯ ರಾಜೇಶ್ ಬನ್ನೂರು, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಅಜಿತ್ ರೈ ಹೊಸಮನೆ ಉಪಸ್ಥಿತರಿದ್ದರು.