







ಸವಣೂರು: ಪುಣ್ಚಪ್ಪಾಡಿ ಗ್ರಾಮದ ಬಿಜೆಪಿ ಪಕ್ಷದ ಕಾರ್ಯಕರ್ತರಾದ ಅಪಘಾತದಿಂದ ಕಾಲಿಗೆ ಗಾಯಗೊಂಡ ಕುಚ್ಚೆಜಾಲು ವಿಜಯ ಗೌಡ ಮತ್ತು ಕಾಲು ನೋವಿನಿಂದ ಬಳಲುತ್ತಿರುವ ಬಿಜೆಪಿ ಬೆಳಂದೂರು ಶಕ್ತಿಕೇಂದ್ರದ ಮಾಜಿ ಅಧ್ಯಕ್ಷರಾದ ಪುಣ್ಚಪ್ಪಾಡಿ ಮೋಹನ್ ದೇವಾಡಿಗ ರವರ ಮನೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.


ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.,ಸವಣೂರು ಸಿ.ಎ.ಬ್ಯಾಂಕ್ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ, ಗ್ರಾಮ ಪಂಚಾಯತ್ ಸದಸ್ಯ ಗಿರಿಶಂಕರ್ ಸುಲಾಯ, ಪ್ರಮುಖರಾದ ವಸಂತ ನಡುಬೈಲು, ಆಶಾ ರೈ ಕಲಾಯಿ, ಚೆನ್ನಪ್ಪ ಗೌಡ ಬುಡನಡ್ಕ, ದಿವಾಕರ ಗುಂಡ್ಯಡ್ಕ, ಮಹೇಶ್ ಕೆ ಸವಣೂರು, ಅಮಿತಾ ಮೊದಲಾದವರು ಉಪಸ್ಥಿತರಿದ್ದರು.










