ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಗಾಂಧಿ ಜಯಂತಿ”

0

ಪುತ್ತೂರು: ಬನ್ನೂರು ಕೃಷ್ಣನಗರ ಸಮೀಪದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅ.2ರಂದು “ಗಾಂಧಿ ಜಯಂತಿ” ಕಾರ್ಯಕ್ರಮ ಆಚರಿಸಲಾಯಿತು.
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಶ್ರೀಧರ್ ಗೌಡ ಪಾನತ್ತಿಲ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಹಾತ್ಮಾ ಗಾಂಧೀಜಿ ಯವರ ತತ್ವ ಸಿದ್ಧಾಂತಗಳನ್ನು ನಾವು ನಮ್ಮ ಜೀವನದಲ್ಲಿ ಯಾವ ರೀತಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಇವರು ಸಭಾಧ್ಯಕ್ಷತೆಯನ್ನು ವಹಿಸಿದರು. ಎವಿಜಿ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯರವರು ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಮಹತ್ವವನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಗೆ ಪೋಡಿಯಂನ್ನು ಕೊಡುಗೆಯಾಗಿ ನೀಡಿದ ಸಂಸ್ಥೆಯ ಶಿಕ್ಷಕಿ ಯಶುಭ ರೈ, ಅವರ ಪುತ್ರರಾದ ಚಿಂತನ್ ರೈ ಮತ್ತು ಚಿರಂತ್ ರೈ ಗೌರವಿಸಲಾಯಿತು. ಸಂಸ್ಥೆಯ ಸಂಚಾಲಕ ಎ.ವಿ. ನಾರಾಯಣ, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ಯನ್, ಎವಿಜಿ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷೆ ಪುಷ್ಪಾವತಿ ಗೌಡ ಕಳುವಾಜೆ, ಪೋಷಕ ವೃಂದದವರು, ಪುಟಾಣಿ ಮಕ್ಕಳು ಉಪಸ್ಥಿಯಲ್ಲಿದ್ದರು. ಸಂಸ್ಥೆಯ ಸಹಾಯಕರಾದ ನಾರಾಯಣ ಕುಲಾಲ್ , ಭುವನೇಶ್ವರಿ ಸಹಕರಿಸಿದರು. ಶಾಲೆಯ ಶಿಕ್ಷಕಿ ಯಶುಭಾ ರೈ ಪ್ರಾರ್ಥಿಸಿದರು. ಸಂಸ್ಥೆಯ ಶಿಕ್ಷಕಿ ವನಿತಾ ಸಂವಿಧಾನದ ಪೂರ್ವ ಪೀಠಿಕೆ ಮತ್ತು ಗಾಂಧೀಜಿಯವರ ಜೀವನದ ಮಹತ್ವವನ್ನು ವಾಚಿಸಿದರು. ಶಿಕ್ಷಕಿಯರು ಗಾಂಧೀಜಿಯ ಸರ್ವಧರ್ಮ ಪ್ರಾರ್ಥನೆಯನ್ನು ಹಾಡಿದರು. ಪ್ರಾಂಶುಪಾಲೆ ಉಷಾ ಕಿರಣ ಕೆ.ಯಸ್ ಸ್ವಾಗತಿಸಿ, ಸಂಸ್ಥೆಯ ಉಪಾಧ್ಯಕ್ಷ ಉಮೇಶ್ ಮಳುವೇಲು ವಂದಿಸಿದರು. ಶಿಕ್ಷಕಿ ಯಶುಭ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here