ಶಾಂತಿನಗರ ಶಾಲೆಯಲ್ಲಿ ವಿಭಿನ್ನ ರೀತಿಯಲ್ಲಿ ಗಾಂಧೀ ಜಯಂತಿ ಆಚರಣೆ
ನೆಲ್ಯಾಡಿ: ’ಗಾಂಧೀ ತಾತನಿಗೆ 154 ದೀಪದಾರತಿ’ ಎಂಬ ಹೆಸರಿನಡಿಯಲ್ಲಿ ಗೋಳಿತ್ತಟ್ಟು ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಹುಟ್ಟುಹಬ್ಬದ ಪ್ರಯುಕ್ತ 154 ಹಣತೆಗಳನ್ನು ಉರಿಸುವುದರ ಮೂಲಕ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು.
ಮೊದಲ ಹಣತೆಯನ್ನು ಶಾಲಾ ದಾನಿ, ಸಮಾಜ ಸೇವಕರಾದ ರಂಜಿತ್ ಜೈನ್ ಮೇಲೂರುರವರು ಉದಯಿಸಿದರು. ಬಳಿಕ ವಿದ್ಯಾರ್ಥಿಗಳು, ಪೋಷಕರು, ಊರ ನಾಗರಿಕರು ಒಂದು ಹಣತೆಯಿಂದ ಇನ್ನೊಂದು ಹಣತೆಯನ್ನು ಉದಯಿಸುತ್ತಾ ರಾಷ್ಟ್ರಪಿತನಿಗೆ 154 ಹಣತೆಗಳ ಆರತಿಯನ್ನು ಬೆಳಗಿಸಿದರು. ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ನಾರಾಯಣ ಪೂಜಾರಿ ಡೆಂಬಲೆ, ಮೋನಪ್ಪ ಪೂಜಾರಿ ಡೆಂಬಲೆ, ರತಿ ದಾಮೋದರ ಪೂಜಾರಿ, ಶಾಂತಿನಗರ ಯುವಕ ಮಂಡಲದ ಅಧ್ಯಕ್ಷ ತೇಜಸ್ ಬರಮೇಲು, ಜನಾರ್ದನ ಗೌಡ ಬರಮೇಲು, ಶಿವಪ್ರಸಾದ್ ಶಾಂತಿನಗರ, ರೀತಾಕ್ಷಿ, ಎಸ್‌ಡಿಎಂಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಗುರುಂಪು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಶಿಕ್ಷಕ ಪ್ರದೀಪ್ ಬಾಕಿಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ತಾರಾ ವಂದಿಸಿದರು. ಶಿಕ್ಷಕ ಮಂಜುನಾಥ ಮಣಕವಾಡ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿಯರಾದ ಪ್ರಮೀಳಾ, ಸುನಂದ ಸಹಕರಿಸಿದರು. ಗಾಂಧೀ ತಾತನಿಗೆ ಪುಷ್ಪಾರ್ಚನೆ, ಸರ್ವಧರ್ಮ ಪ್ರಾರ್ಥನೆ ಹಾಗೂ ಸಭಾ ಕಾರ್ಯಕ್ರಮ ನಡೆಯಿತು.