ಪುತ್ತೂರು: ಕಳೆದ ನಾಲ್ಕು ದಿನಗಳಿಂದ ಸರಕಾರದ ವಿರುದ್ಧ ಸತ್ಯಾಗ್ರಹ ಮಾಡುತ್ತಿರುವ ಪುನೀತ್ ಕೆರೆಹಳ್ಳಿಯವರನ್ನು ಪುತ್ತೂರು ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ಅ.5ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಗೋಸಾಗಟ ಸಂದರ್ಭ ನಡೆದ ಗೋಸಾಗಟಗಾರನ ಸಾವು ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿಯವರ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ಅವರು ನ್ಯಾಯಕ್ಕಾಗಿ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.
ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪುನೀತ್ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುನೀತ್ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ, ಅರುಣ್ ಪುತ್ತಿಲ ತನ್ನ ಫೇಸ್ ಬುಕ್ ನಲ್ಲಿ ಹಾಕಿರುವ ಪೋಸ್ಟ್ ಗೆ ಆಸ್ಪತ್ರೆಗೆ ಬರುವಂತೆ ಕಾರ್ಯಕರ್ತರು ಒತ್ತಾಯಿಸಿದ ಕಾರಣ ಅರುಣ್ ಪುತ್ತಿಲ ಹಾಗೂ ಪುತ್ತಿಲ ಪರಿವಾರದ ಪ್ರಮುಖರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದರು ಎಂದು ಪುತ್ತಿಲ ಪರಿವಾರದ ಪ್ರಮುಖರು ತಿಳಿಸಿದ್ದಾರೆ.
ಸರಕಾರ ತಪ್ಪೊಪ್ಪಿಕೊಳ್ಳದೆ ಉಪವಾಸ ಹಿಂಪಡೆಯುವುದಿಲ್ಲ:
ಪುನೀತ್ ಕೆರೆಹಳ್ಳಿ ಆರೋಗ್ಯ ವಿಚಾರಿಸಿ ಅವರ ಜೊತೆ ಮಾತನಾಡಿದಾಗ, ದಾಖಲೆಗಳಿಲ್ಲದೆ ಹಲವು ಪ್ರಕರಣ ಹಾಕಿದ ಕಾಂಗ್ರೇಸ್ ಸರ್ಕಾರ ತಪ್ಪೊಪ್ಪಿಕೊಳ್ಳುವವರೆಗೆ ಉಪವಾಸದಿಂದ ಹಿಂದೆ ಸರಿಯುವುದಿಲ್ಲ ಎಂದು ಪುನೀತ್ ಕೆರೆಹಳ್ಳಿ ಹೇಳಿರುವುದಾಗಿ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.