





ಷಷ್ಠಿ ಉತ್ಸವವು ಯಶಸ್ವಿಯಾಗಲಿ, ಅನ್ನಪ್ರಸಾದವು ಅಕ್ಷಯವಾಗಿ ಮೂಡಿ ಬರಲಿ-ಪಂಜಿಗುಡ್ಡೆ ಈಶ್ವರ್ ಭಟ್


ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪಂಚಮಿ ಉತ್ಸವ, ಆಶ್ಲೇಷ ಬಲಿ, ನಾಗತಂಬಿಲ ಹಾಗೂ ಷಷ್ಠಿ ಮಹೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ಜರಗಲಿದ್ದು, ಷಷ್ಠಿ ಮಹೋತ್ಸವದ ಅಂಗವಾಗಿ ಹಸಿರು ಹೊರೆ ಕಾಣಿಕೆಯ ಶ್ರದ್ಧಾಭಕ್ತಿಯ ಮೆರವಣಿಗೆಯು ನ.24 ರಂದು ನಡೆಯಿತು.





ಷಷ್ಠಿ ಉತ್ಸವವು ಯಶಸ್ವಿಯಾಗಲಿ, ಅನ್ನಪ್ರಸಾದವು ಅಕ್ಷಯವಾಗಿ ಮೂಡಿ ಬರಲಿ-ಪಂಜಿಗುಡ್ಡೆ ಈಶ್ವರ್ ಭಟ್:
ಬೆಳಿಗ್ಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಅರ್ಚಕರಾದ ಜಯರಾಜ್ ಕೆದಿಲಾಯರವರು ಹಸಿರು ಹೊರೆಕಾಣಿಕೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಹಸಿರು ಹೊರೆಕಾಣಿಕೆ ಜರಗಿದ್ದು, ಇದರ ಉದ್ಘಾಟನೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್‌ರವರು ತೆಂಗಿನಕಾಯಿಯನ್ನು ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡುತ್ತಾ ಮಾತನಾಡಿ, ಪ್ರತಿಷ್ಠಿತ ಕೆಮ್ಮಿಂಜೆ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ಬಹಳ ವಿಜ್ರಂಭಣೆಯಿಂದ ನಡೆದಿರುತ್ತದೆ. ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವರಲ್ಲಿ ಹರಕೆಯನ್ನು ಸಲ್ಲಿಸುತ್ತಾರೆ. ಪ್ರತೀ ವರ್ಷ ಕೆಮ್ಮಿಂಜೆ ಷಷ್ಠಿ ಉತ್ಸವದಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಹಸಿರುಕಾಣಿಕೆ ಹೊರಡುವುದು ಸಂಪ್ರದಾಯವಾಗಿದೆ. ಕೆಮ್ಮಿಂಜೆ ಶ್ರೀ ಕ್ಷೇತ್ರದಲ್ಲಿ ಜರಗುವ ಎಲ್ಲಾ ಧಾರ್ಮಿಕ ಕಾರ್ಯಗಳು ಭಕ್ತರ ಸಹಕಾರದಿಂದ ವಿಜ್ರಂಭಣೆ, ಸಡಗರದಿಂದ ನಡೆದು ಯಶಸ್ವಿಯಾಗಲಿ, ಅನ್ನಪ್ರಸಾದವು ಅಕ್ಷಯವಾಗಿ ಮೂಡಿ ಬರಲಿ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಎಲ್ಲಾ ರೀತಿಯಿಂದ ಸಹಕರಿಸುತ್ತದೆ ಎಂದರು.

ನ.24 ರಂದು ಬೆಳಿಗ್ಗೆ ಶ್ರೀ ದೇವರಿಗೆ ಪವಮಾನಾಭಿಷೇಕ, 6 ತೆಂಗಿನಕಾಯಿ ಮಹಾಗಣಪತಿ ಹೋಮ, ಬಿಂಬ ಶುದ್ಧಿ, ಪಂಚವಿಂಶತಿ ಕಲಶಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ, ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಶ್ರೀ ದೇವರಿಗೆ ಕಾರ್ತಿಕಪೂಜೆ, ಪ್ರಸಾದ ವಿತರಣೆ, ನ.23 ರಂದು ಸಂಜೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ರಕ್ಷೋಘ್ನಹೋಮ, ವಾಸ್ತುಹೋಮ, ವಾಸ್ತುಪೂಜಾ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ಜರಗಿತು. ಅರ್ಚಕರಾದ ಕೆ.ವೆಂಕಟೇಶ್ ಭಟ್, ರಮೇಶ್ ಭಟ್‌ರವರು ನೆರವೇರಿಸಿದರು.
ಭಜನಾ ಕಾರ್ಯಕ್ರಮ:
ನ.24 ರಂದು ಬೆಳಿಗ್ಗೆಯಿಂದ ಸಂಜೆವರೆಗೆ ಪುರುಷರಕಟ್ಟೆ ಶ್ರೀ ವನದುರ್ಗಾಂಭಿಕಾ ಭಜನಾ ಮಂಡಳಿ, ಕೆಮ್ಮಿಂಜೆ ಶ್ರೀರಾಮ ಮಹಿಳಾ ಭಜನಾ ಮಂಡಳಿ, ಸವಣೂರು ದೇವಸ್ಯ ಶ್ರೀಹರಿ ಭಜನಾ ಮಂಡಳಿ, ಪುಣ್ಚಪ್ಪಾಡಿ ಕುಮಾರಮಂಗಲ ಶ್ರೀ ಕೃಷ್ಣಾರ್ಪಿತ ಮಹಿಳಾ ಭಜನಾ ಮಂಡಳಿ, ಬೆಳಂದೂರು ವಲಯವ ವಿಷ್ಣುಪ್ರಿಯ ಮಹಿಳಾ ಭಜನಾ ಮಂಡಳಿ, ಕುಂಟ್ಯಾನ ಬ್ರಾಹ್ಮರಿ ಮಹಿಳಾ ಭಜನಾ ಮಂಡಳಿ, ಶಾಂತಿಗೋಡು ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ, ಸುಳ್ಯಪದವು ಮಹಾಲಕ್ಷ್ಮೀ ವನಿತಾ ಭಜನಾ ಮಂಡಳಿ, ತೆಂಕಿಲ ಈಶಪ್ರಿಯ ಭಜನಾ ಮಂಡಳಿ, ನರಿಮೊಗರು ಸೇರಾಜೆ ಶ್ರೀ ಶಾರದಾಂಬಾ ಭಜನಾ ಮಂಡಳಿ, ಬೆದ್ರಾಳ ನಂದಿಕೇಶ್ವರ ಮಕ್ಕಳ ಭಜನಾ ಮಂಡಳಿಗಳಿಂದ ಭಜನೆ ಕಾರ್ಯಕ್ರಮ ನೆರವೇರಲ್ಪಟ್ಟಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ವಿನಯ ಸುವರ್ಣ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಸದಸ್ಯರಾದ ಪ್ರಧಾನ ಅರ್ಚಕ ಕೆ.ವೆಂಕಟೇಶ ಭಟ್, ಸೂರಪ್ಪ ಗೌಡ ಸಂಜಯನಗರ, ಮಹೇಶ್ ಬಿ.ಕಾವೇರಿಕಟ್ಟೆ, ರಕ್ಷಿತ್ ನಾೖಕ್ ದರ್ಬೆ, ಲಲಿತಾ ಕೆ.ಕೆಮ್ಮಿಂಜೆ, ರೇಖಾ ಯಶೋಧರ ಮರೀಲು, ಚಂದ್ರಶೇಖರ ಕೆ.ಕಲ್ಲಗುಡ್ಡೆ, ವಸಂತ ನಾಯ್ಕ ಬೆದ್ರಾಳ, ಮಾಜಿ ಸದಸ್ಯರಾದ ವಿಶ್ವನಾಥ ನಾಯ್ಕ, ಬಾಲಕೃಷ್ಣ ಪೂಜಾರಿ ಕೋಲಾಡಿ, ಪ್ರಮುಖರಾದ ದಿನೇಶ್ ಕರ್ಕೇರಾ ಕೋಲಾಡಿ, ಗಣೇಶ್ ಗೌಡ ನೈತ್ತಾಡಿ, ಲೋಕೇಶ್ ಗೌಡ ಮುಕ್ರಂಪಾಡಿ, ಶ್ರೀ ವಿಷ್ಣು ಇಲೆಕ್ಟ್ರಿಕಲ್ಸ್‌ನ ಬಿ.ಸುಧಾಕರ್, ಶಶಿರಾಜ್ ಕೆಮ್ಮಿಂಜೆ, ಚಿತ್ತರಂಜನ್ ಗೌಡ, ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ಮಣ್ಣಾಪು ಸಹಿತ ಹಲವರು ಉಪಸ್ಥಿತರಿದ್ದರು.
ಹಸಿರು ಕಾಣಿಕೆ ಮೆರವಣಿಗೆ..
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕ ಜಯರಾಜ್ ಕೆದಿಲಾಯರವರು ಹಸಿರು ಹೊರೆಕಾಣಿಕೆಯ ಪೂಜೆ ಸಲ್ಲಿಸಿದ ಬಳಿಕ ತೆರೆದ ವಾಹನದಲ್ಲಿ ಹಸಿರು ಹೊರೆಕಾಣಿಕೆಯ ಮೆರವಣಿಗೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟು ನಗರದ ಪ್ರಮುಖ ರಸ್ತೆಯಲ್ಲಿ ಸಾಗುತ್ತಾ, ದರ್ಬೆ-ಕೂರ್ನಡ್ಕದಿಂದ ಸಾಗಿ ಕೆಮ್ಮಿಂಜೆ ದೇವಸ್ಥಾನಕ್ಕೆ ವಿಜ್ರಂಭಣೆಯಿಂದ ತರಲಾಯಿತು.
ನ.25 ರಂದು ಶ್ರೀ ಕ್ಷೇತ್ರದಲ್ಲಿ..
ನ.25 ರಂದು ಪಂಚಮಿ ಉತ್ಸವದ ಪ್ರಯುಕ್ತ ಬೆಳಿಗ್ಗೆ ಶ್ರೀ ಕ್ಷೇತ್ರದ ನಾಗಬನದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಮತ್ತು ನಾಗತಂಬಿಲ ಸೇವೆಗಳು, ಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಪಂಚಮಿ ಉತ್ಸವ, ಪಲ್ಲಕ್ಕಿ ಉತ್ಸವ, ಕಟ್ಟೆಪೂಜೆಗಳು, ಶಿರಾಡಿ ದೈವದ ಕಿರುವಾಳು ಬರುವುದು ನಡೆಯಲಿದೆ.









