ಸುದಾನ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

0

ಪುತ್ತೂರು: ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದ 2023-24ನೇ ಸಾಲಿನ ಪುತ್ತೂರು ನಗರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸುದಾನ ಶಾಲೆಯ ಐದು ವಿದ್ಯಾರ್ಥಿಗಳು ಏಳು ಪದಕಗಳೊಂದಿಗೆ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿರುತ್ತಾರೆ. ಗಗನ್ ಎ.ಜಿ 100 ಮೀಟರ್,200 ಮೀಟರ್‌ನಲ್ಲಿ ಪ್ರಥಮ, ಅಖಿಲ್ ಶಾಟ್‌ಪುಟ್, ಡಿಸ್ಕಸ್ ಥ್ರೋದಲ್ಲಿ ಪ್ರಥಮ , ಅಕ್ಷತ್ ಕುಮಾರ್ ಹೈಜಂಪ್‌ನಲ್ಲಿ ದ್ವಿತೀಯ, ವಿಘ್ನೇಶ್ ಸಿ ರೈ ಡಿಸ್ಕಸ್‌ನಲ್ಲಿ ದ್ವಿತೀಯ ಮತ್ತು ಶೆಲ್ಡನ್ ಸಿಕ್ಷೇರಾ ಹೈಜಂಪ್‌ನಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಇವರಿಗೆ ಶಾಲಾ ದೈಶಿಕ ಶಿಕ್ಷಕ ಪುಷ್ಪರಾಜ್ , ನವೀನ್, ಶ್ರೀನಿಥಿ ಆರ್ಯಾಪು ,ಲೀಲಾವತಿ ತರಬೇತಿ ನೀಡಿರುತ್ತಾರೆ. ಇವರನ್ನು ಶಾಲಾ ಸಂಚಾಲಕ ವಿಜಯ ಹಾರ್ವಿನ್ ಮತ್ತು ಮುಖ್ಯ ಶಿಕ್ಷಕಿ ಶೋಭಾನಾಗರಾಜ್‌ಅಭಿನಂದಿಸಿ ಶುಭಹಾರೈಸಿರುತ್ತಾರೆ.

LEAVE A REPLY

Please enter your comment!
Please enter your name here