ಉಪ್ಪಿನಂಗಡಿ : ಭಜನೆ ವ್ಯಕ್ತಿ ಮತ್ತು ಭಗವಂತನ ನಡುವೆ ಸಂಬಂಧ ಬೆಸೆಯುವ ಮಾದ್ಯಮವಾಗಿದ್ದು, ಭಜನಾ ಸಂಸ್ಕಾರವಿರುವಾತನಿಗೆ ಬದುಕು ಸುಂದರವಾಗುವುದರಲ್ಲಿ ಸಂದೇಹವಿಲ್ಲ ಎಂದು ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಶರತ್ ಕೋಟೆ ತಿಳಿಸಿದರು.
ಅವರು ಅ.8ರಂದು ನಂದಿನಿನಗರದ ಶ್ರೀ ನಂದಿಕೇಶ್ವರ ಭಜನಾ ಮಂದಿರದಲ್ಲಿ ಆಯೋಜಿಸಲ್ಪಟ್ಟ 8 ದಿನಗಳ ಭಜನಾ ತರಬೇತಿ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಭಜನೆ ಇಂದು ವೈವಿದ್ಯಮಯವಾಗಿ ಜನಾಕರ್ಷಣೆಗೆ ಒಳಗಾಗುತ್ತಿದೆ. ಇಲ್ಲಿ ಭಗವಂತನ ಮೇಲಿನ ಭಕ್ತಿ ಹಾಗೂ ಸಮಾಜದೊಳಗಿನ ಸಾಮರಸ್ಯದ ಶಕ್ತಿ ಅನಾವರಣಗೊಳ್ಳುತ್ತಿರುವುದು ಸಂತಸದ ಬೆಳವಣಿಗೆ . ಇದಕ್ಕೆ ಪೂರಕ ಬೆಂಬಲ ಒದಗಿಸಬೇಕಾಗಿರುವುದು ಸಮಾಜದ ಕರ್ತವ್ಯವಾಗಿದೆ. ಈ ದಿಶೆಯಲ್ಲಿ ಶ್ರೀ ನಂದಿಕೇಶ್ವರ ಭಜನಾ ಮಂಡಳಿಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ನಂದಿಕೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಪುಲಮೊಗೆರು ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಂದಿಕೇಶ್ವರ ಭಜನಾ ಮಂಡಳಿಯ ಗೌರವಾಧ್ಯಕ್ಷ ಎನ್ ಉಮೇಶ್ ಶೆಣೈ , ಭಜನಾ ತರಬೇತುದಾರ ಬೊಮ್ಮಯ್ಯ ಬಂಗೇರ, ಸಹ ತರಬೇತುದಾರ ದಿಲೀಪ್ ಶೆಟ್ಟಿ ಕರಾಯ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಎನ್ ಹರೀಶ್ ನಾಯಕ್, ಬಾಲಚಂದ್ರ, ಭಾಸ್ಕರ್ ಹರಿನಗರ, ಅಕ್ಷಯ್ ಕುಮಾರ್, ಆದಿತ್ಯ, ಕಿರಣ್, ಶ್ಯಾಮಲಾ ಶೆಣೈ, ದುರ್ಗಾಪ್ರಸಾದ್, ಗಾಯತ್ರಿ, ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಣಮ್ಯ ಪ್ರಾರ್ಥಿಸಿ , ಚಂದ್ರಶೇಖರ್ ಸ್ವಾಗತಿಸಿ , ಭಜನಾ ಮಂಡಳಿಯ ಕಾರ್ಯದರ್ಶಿ ಯತೀಶ್ ಕುಮಾರ್ ವಂದಿಸಿದರು. .ಕೃಷ್ಣಪ್ಪ ಪೂಜಾರಿ ನಿರೂಪಿಸಿದರು.