ಹಿರೆಬಂಡಾಡಿ : ಸರ್ವೋದಯ ಪ್ರೌಢಶಾಲೆ ಪೆರಿಯಡ್ಕ ಇಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆ 7 ಚಿನ್ನ, 18 ಬೆಳ್ಳಿ ಮತ್ತು 13 ಕಂಚುಗಳನ್ನು ಪಡೆದು ಮೊದಲ ಬಾರಿಗೆ ಸಮಗ್ರ ಚಾಂಪಿಯನ್ ಶಿಪ್ ಪಡೆದುಕೊಂಡಿದೆ. 17ರ ವಯೋಮಾನದ ಕೆಳಗಿನ ಬಾಲಕಿಯರ ವಿಭಾಗದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ದೀಕ್ಷಿತಾ ಎಲ್ 400 ಮೀ. ಮತ್ತು 800ಮೀ. ಓಟದಲ್ಲಿ ಪ್ರಥಮ ಹಾಗೂ 1500ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿರುತ್ತಾರೆ. ವೀರಪ್ಪಗೌಡ ಲಾವುತ್ತಡಿ ಮತ್ತು ಎಸ್.ಡಿ.ಎಂ.ಸಿ. ಪೋಷಕ ಸದಸ್ಯರಾದ ಜಾನಕಿ ಲಾವುತ್ತಡಿ ಇವರ ಸುಪುತ್ರಿ.
ಸದ್ರಿ ಕ್ರೀಡಾಕೂಟದಲ್ಲಿ ನೀತಾ 600ಮೀ ಓಟದಲ್ಲಿ ತೃತೀಯ, ಸಾತ್ವಿಕ್ 600ಮೀ ಓಟದಲ್ಲಿ ತೃತೀಯ, ಸ್ನೇಹಿತ್ ಎತ್ತರ ಜಿಗಿತದಲ್ಲಿ ಪ್ರಥಮ, ಸುಮನ್ ಎತ್ತರ ಜಿಗಿತದಲ್ಲಿ ದ್ವಿತೀಯ, 100 ಮೀ ಓಟದಲ್ಲಿ ತೃತೀಯ ಮತ್ತು200 ಮೀ ಓಟದಲ್ಲಿ ತೃತೀಯ, ಯಕ್ಷಿತಾ ಎತ್ತರ ಜಿಗಿತದಲ್ಲಿ ದ್ವಿತೀಯ, ಪ್ರಥ್ವಿರಾಜ್ ಗುಂಡೆಸೆತದಲ್ಲಿ ಪ್ರಥಮ ಮತ್ತು ಡಿಸ್ಕಸ್ ಎಸೆತದಲ್ಲಿ ದ್ವಿತೀಯ, ಅನುಶ್ರೀ ಡಿಸ್ಕಸ್ ಎಸೆತದಲ್ಲಿ ತೃತೀಯ, ಮಹಮ್ಮದ್ ಅಫ್ರಿಝ್ 100ಮೀ ಓಟದಲ್ಲಿ ದ್ವಿತೀಯ, 200ಮೀ ಓಟದಲ್ಲಿ ದ್ವಿತೀಯ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ, ಹಾಫಿಲ್ ಗುಂಡೆಸೆತದಲ್ಲಿ ದ್ವಿತೀಯ, ಗುರುಪ್ರಣಯಿ 3000ಮೀ ಓಟದಲ್ಲಿ ಪ್ರಥಮ ಮತ್ತು 1500 ಮೀ ಓಟದಲ್ಲಿ ತೃತೀಯ, ವೀಕ್ಷಾ 3000ಮೀ ಓಟದಲ್ಲಿ ತೃತೀಯ, ಯಜ್ಞಶ್ರೀ ಡಿಸ್ಕಸ್ ಎಸೆತದಲ್ಲಿ ಪ್ರಥಮ ಮತ್ತು ಗುಂಡೆಸೆತದಲ್ಲಿ ಪ್ರಥಮ, ಸವಿತಾ ಈಟಿ ಎಸೆತದಲ್ಲಿ ಪ್ರಥಮ, ಮನ್ವಿತ್ 800ಮೀ ಓಟದಲ್ಲಿ ಪ್ರಥಮ, ಶರಣ್ಯ 400ಮೀ ಓಟದಲ್ಲಿ ತೃತೀಯ, ಮಹಮ್ಮದ್ ತಸ್ರೀಫ್ ಗುಂಡೆಸೆತದಲ್ಲಿ ದ್ವಿತೀಯ, 17ವಯೋಮಾನದ ಕೆಳಗಿನ ವಿಭಾಗದ ರಿಲೇಯಲ್ಲಿ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಮತ್ತು ಬಾಲಕರ ವಿಭಾಗದ ತೃತೀಯ ಹಾಗೂ 14ರ ವಯೋಮಾನದ 8ನೇ ತರಗತಿ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಬಿ ಇವರ ಮಾರ್ಗದರ್ಶನದಲ್ಲಿ ಶಾಲಾ ಕ್ರೀಡಾಪಟುಗಳು ಈ ಸಾಧನೆ ಮಾಡಿರುತ್ತಾರೆ. ಶಾಲಾ ಮುಖ್ಯಶಿಕ್ಷಕ ಹರಿಕಿರಣ್ ಕೆ., ಸಮಾಜ ವಿಜ್ಞಾನ ಶಿಕ್ಷಕರಾದ ಲಲಿತ ಕೆ., ಕನ್ನಡ ಶಿಕ್ಷಕರಾದ ಮಲ್ಲಿಕಾ ಐ., ಇಂಗ್ಲಿಷ್ ಶಿಕ್ಷಕರಾದ ವಸಂತ ಕುಮಾರ್ ಪಿ., ವಿಜ್ಞಾನ ಶಿಕ್ಷಕರಾದ ಮನೋಹರ ಎಂ. ಮತ್ತು ಹಿಂದಿ ಅತಿಥಿ ಶಿಕ್ಷಕರಾದ ಆರತಿ ವೈ ಡಿ ಇವರು ಸಹಕರಿಸಿರುತ್ತಾರೆ.