ಕೆಲಿಂಜ: ಬಸ್ಸುಗಳ ನಡುವೆ ಅಪಘಾತ

0

ವಿಟ್ಲ: ಖಾಸಗಿ ಬಸ್ ಮತ್ತು ಸರಕಾರಿ ಬಸ್ಸಿನ ನಡುವೆ ಅಪಘಾತ ನಡೆದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲಿಂಜ ಸಮೀಪ ನಡೆದಿದೆ.
ಕೆಲಿಂಜ ದೇವಸ್ಥಾನದ ಸಮೀಪ ವಿಟ್ಲ- ಮಂಗಳೂರು ದಾರಿ ಮಧ್ಯೆ ಸಂಚರಿಸುವ ಖಾಸಗಿ ಬಸ್ ಹಾಗೂ ಅದೇ ದಾರಿಯಲ್ಲಿ ಸಂಚರಿಸುವ ಸರಕಾರಿ ಬಸ್ಸಿನ ನಡುವೆ ಈ ಅಪಘಾತ ಸಂಭವಿಸಿದೆ. ಘಟನೆಯಿಂದಾಗಿ ಎರಡೂ ಬಸ್ಸಿನಲ್ಲಿದ್ದ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ಎರಡೂ ಬಸ್ಸಿಗೂ ಹಾನಿಯಾಗಿದೆ.

LEAVE A REPLY

Please enter your comment!
Please enter your name here