





ಕೆಯ್ಯೂರು: ಕೆಯ್ಯೂರು ಗ್ರಾಮದ ಅಂಕತ್ತಡ್ಕ ಜನತಾ ಕಾಲೊನಿ ನಿವಾಸಿ ಮಂಜುನಾಥ ರೈ ಅಂಕತ್ತಡ್ಕ (42ವ) ಅಲ್ಪಕಾಲದ ಅಸೌಖ್ಯದಿಂದ ಅ.11ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ತಾಯಿ ರತ್ನಾವತಿ ರೈ, ಪತ್ನಿ ಶೋಬಾ ರೈ, ಮಗಳು ಮಾನ್ಯ ರೈ, ಮಗ ಮನೀಷ್ ರೈ, ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.











