ಬಡಗನ್ನೂರು: ಕಾಡುಕೋಣ ಹಾವಳಿಯಿಂದ ಕೃಷಿ ನಾಶ

0

ಬಡಗನ್ನೂರುಃ ಕಾಡುಕೋಣ ಹಾವಳಿಯಿಂದ ಕೃಷಿ ನಾಶಗೊಂಡ ಘಟನೆ ಬಡಗನ್ನೂರುನಲ್ಲಿ ನಡೆದಿದೆ. ಬಡಗನ್ನೂರು ಗ್ರಾಮದ ಪೇರಾಲು ಎಂಬಲ್ಲಿನ ಹೊಲದಲ್ಲಿ ಬೆಳೆದ ಪೈರು,ಹಾಗೂ ಊರಿನ ಕೆಲವಡೆ ಅಡಿಕೆ ಸಸಿಗಳನ್ನು ನಾಶಪಡಿಸಿದೆ.15 ದಿವಸಗಳ ಮೊದಲು ಒಂಟಿ ಕಾಡುಕೋಣ ತನ್ನ ಮರಿ ಜತೆ ಬಂದಿದ್ದು ಓಡಿಸಲು ಕಷ್ಟವಾಗಿತ್ತು. ಆದರೆ ಈಗ ಮತ್ತೆ ಮರಿಯೊಂದಿಗೆ 5,6 ಹಿಂಡಾಗಿ ಬರುತ್ತಿದ್ದು ಕೃಷಿಗಳನ್ನು ನಾಶಮಾಡುತ್ತಿದೆ.ಇದರಿಂದ ಗ್ರಾಮದ ಹಲವು ರೈತರು ಕಂಗಲಾಗಿದ್ದಾರೆ.

ಸುಮಾರು 3 ತಿಂಗಳು ತುಂಬಿದ ಪೈರು ಇನ್ನೇನು ಒಂದು ವಾರದಲ್ಲಿ ತೆನೆ ಹೊರಡುವ ಸಂದರ್ಭದಲ್ಲಿ ಕಾಡುಕೋಣದಿಂದ ಬೆಳೆ ನಾಶವಾದರೆ ಕೃಷಿಕರಿಗೆ ಆರ್ಥಿಕ ನಷ್ಟ ಕಂಡಿತ. ಕಾಡುಪ್ರಾಣಿ ಹಾವಳಿಯಿಂದ ಬೆಳೆ ನಾಶವಾದರೆ ರೈತರ ಜೀವನ ಪರಿಸ್ಥಿತಿ ಕಷ್ಟದಾಯಕವಾಗಲಿದೆ.ಈ ಬಗ್ಗೆ ಅರಣ್ಯಾಧಿಕಾರಿಗಳು ಗಮನಿಸಿ ಕಾಡುಕೋಣಗಳನ್ನು ನಾಡಿನಿಂದ ಕಾಡಿಗೆ ಮರಳಿಸಲು ಸೂಕ್ತ  ವ್ಯವಸ್ಥೆ ಮಾಡಬೇಕಾಗಿದೆ.

ನಿರಂತರ ಹಾವಳಿ
ಬಡಗನ್ನೂರು ಭಾಗದಲ್ಲಿ ಕಾಡುಕೋಣಗಳ ಹಾವಳಿ ನಿರಂತವಾಗಿದ್ದು, ಆಹಾರ ಹುಡುಕಿ ಕಾಡಿನಿಂದ ನಾಡಿಗೆ ಬರುವ ಕೋಣಗಳು ಕೃಷಿಯನ್ನು ನಾಶ ಮಾಡುತ್ತಿದ್ದು ಕಾಡಿನ ದಾರಿಗೆ ತಡೆ ಬೇಲಿ ಹಾಕುವಂತೆ ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರು ಆಗ್ರಹವನ್ನು ಮಾಡುತ್ತಿದ್ದಾರೆ. ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳನ್ನು ಕೆಲವರು ಭೇಟೆಯಾಡುತ್ತಿದ್ದಾರೆ ಎಂಬ ಮಾಹಿತಿಗಳೂ ಇದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಬೇಕು ಎಂಬ ಆಗ್ರಹವೂ ಸಾರ್ವಜನಿಕ ವಲಯಗಳಲ್ಲಿ ವ್ಯಕ್ತವಾಗಿದೆ. 

LEAVE A REPLY

Please enter your comment!
Please enter your name here