ಪುತ್ತೂರು: ಸೆ.24 ರಂದು ನಿಧನರಾದ ಕಡಬ ಕುದ್ಕೊಳಿ ಮನೆಯ ಕೆ.ಅಚ್ಚುತ ಗೌಡರವರ ಶ್ರದ್ದಾಂಜಲಿ ಸಭೆ ಅ.11 ರಂದು ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ದಿವಂಗತ ಅಚ್ಚುತ ಗೌಡರವರ ಸಹೋದರ ಪದ್ಮನಾಭ ಗೌಡರವರು ಕೆ.ಅಚ್ಚುತ ಗೌಡರ ಗುಣಗಾನ ಮಾಡಿ ಬಂಧು ಮಿತ್ರರ ಸಮ್ಮಖದಲ್ಲಿ ತಿಳಿಸಿ ಮೃತರ ಆತ್ಮಕ್ಕೆ ಶಾಂತಿ, ಸದ್ಗತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ನಿವೃತ್ತ ಶಿಕ್ಷಕ ಜನಾರ್ಧನ ಗೌಡ ಪಣೆಮಜಲು ಮಾತನಾಡಿ ಉತ್ತಮ ಪ್ರಗತಿಪರ ಕೃಷಿಕರಾಗಿ, ತುಂಬಿದ ಕೂಡು ಕುಟುಂಬವನ್ನು ಮುನ್ನಡೆಸಿ 30 ವರ್ಷದ ದಾಂಪತ್ಯ ಜೀವನವನ್ನು ನಡೆಸಿ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಬೆಳೆಸಿ, ತಮ್ಮ 63 ವರ್ಷದ ಜೀವನದಲ್ಲಿ ಸದಾಕಾಲ ಪರೋಪಕಾರಿಯಾಗಿ ಬಾಳಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಜೀವನದ ಕೊನೆಯ ಕ್ಷಣದಲ್ಲಿಯೂ ತಾನೂ ಪ್ರಯಾಣಿಸುತಿದ್ದ ಬಸ್ಸಿನಲ್ಲಿ ಸಹ ಪ್ರಯಾಣೆಕ ಆಯತಪ್ಪಿ ಬಸ್ಸಿನಿಂದ ಕೆಳಗೆ ಬೀಳುವುದನ್ನು ತಪ್ಪಿಸಲು ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆಕಸ್ಮಿಕ ಅಗಲಿಕೆಯ ದುಖವನ್ನು ಸಹಿಸುವ ಶಕ್ತಿಯನ್ನು ಮನೆಯವರಿಗೆ ಭಗವಂತನು ಕರುಣಿಸಲಿ ಎಂದರು. ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆ ಯನ್ನು ಸಲ್ಲಿಸಿ ಮೃತರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಮೃತರ ಪತ್ನಿ ಜಯ, ಪುತ್ರ ರೂಪೇಶ್, ಪುತ್ರಿಯರಾದ ಶ್ವೇತಾ, ಕವಿತಾ ಪೂಜಾ, ಅಳಿಯಂದಿರಾದ ಯೋಗೀಶ್, ಜಯಪ್ರಕಾಶ್ ಹಾಗೂ ಮೊಮ್ಮಕ್ಕಳು, ಸಹೋದರ ಪದ್ಮನಾಭ ಗೌಡ, ನಾದಿನಿ ರೂಪ, ಸಹೋದರಿಯರಾದ ಲಲಿತ,ಸುನಂದ, ಜಲಜಾಕ್ಷಿ, ಕಮಲಾಕ್ಷಿ ಹಾಗೂ ಬಾವಂದಿರು,ಅಳಿಯಂದಿರು, ಮಾವ ತಿಮ್ಮಪ್ಪ ಗೌಡ, ಅತ್ತೆ ದೇವಕಿ,ಬಾವಂದಿರಾದ ಜನಾರ್ಧನ ಗೌಡ,ಸತೀಶ್ ಗೌಡ, ಚಿಕ್ಕಪ್ಪ ಗಣಪಯ್ಯ ಗೌಡ ಹಾಗೂ ಕುಟುಂಬಸ್ಥರು ಮತ್ತು ಬಂಧು ಮಿತ್ರರು ಉಪಸ್ಥಿತರಿದ್ದು ಶ್ರದ್ದಾಂಜಲಿ ಸಲ್ಲಿಸಿದರು.