ಐ ಲುಕ್ ಅಪ್ಟಿಕಲ್ಸ್‌ನಲ್ಲಿ ದಸರಾ ದೀಪಾವಳಿ ಫೆಸ್ಟಿವಲ್ ಆಫರ್

0

ಎಲ್ಲಾ ಕನ್ನಡಕಗಳ ಖರೀದಿಗೆ ಶೇ.30 ಡಿಸ್ಕೌಂಟ್ ಆಫರ್

ಪುತ್ತೂರು: ಇಲ್ಲಿನ ಎಂ.ಟಿ ರಸ್ತೆಯಲ್ಲಿರುವ ಎ.ಹೆಚ್.ಹಿಂದುಸ್ಥಾನ್ ಬಿಲ್ಡಿಂಗ್‌ನಲ್ಲಿ ವ್ಯವಹರಿಸುತ್ತಿರುವ ಐ ಲುಕ್ ಅಪ್ಟಿಕಲ್ಸ್ 2ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿದ್ದು ಇದೇ ಸಂದರ್ಭದಲ್ಲಿ ಫೆಸ್ಟಿವಲ್ ಆಫರ್ ಹಾಗೂ ಡಿಸ್ಕೌಂಟ್ ಆಫರ್ ಆಯೋಜಿಸಲಾಗಿದೆ.

ಐ ಲುಕ್ ಅಪ್ಟಿಕಲ್ಸ್‌ನಲ್ಲಿ ಪಾದಾರ್ಪಣೆ ಹಾಗೂ ದಸರಾ, ದೀಪಾವಳಿ ಫೆಸ್ಟಿವಲ್ ಪ್ರಯುಕ್ತ ಶೇ.30 ಡಿಸ್ಕೌಂಟ್ ಆಫರ್ ಲಭ್ಯವಿದೆ. ಪ್ರತೀ ಕನ್ನಡಕ ಖರೀದಿಯ ಮೇಲೆ ಶೇ.30ರಷ್ಟು ಡಿಸ್ಕೌಂಟ್ ಆಫರ್ ಗ್ರಾಹಕರಿಗೆ ದೊರೆಯಲಿದೆ. ಬ್ರ್ಯಾಂಡೆಡ್ ಲೆನ್ಸ್‌ಗಳು, ಬ್ಲೂ ಫಿಲ್ಟರ್ ಲೆನ್ಸ್‌ಗಳು, ತಂಪು ಕನ್ನಡಕಗಳು, ಕಲರ್ ಕಾಂಟಾಕ್ಟ್ ಲೆನ್ಸ್‌ಗಳು, ಕಂಪ್ಯೂಟರ್ ಮತ್ತು ಮೊಬೈಲ್‌ಗೆ ಬಳಸುವ ಕನ್ನಡಕಗಳು, ಡ್ರೈವ್ ಸೇಫ್ ಕನ್ನಡಕಗಳು ನಮ್ಮ ವಿಶೇಷತೆಯಾಗಿದೆ. ಅಲ್ಲದೆ ಎಲ್ಲಾ ತರಹದ ಕನ್ನಡಕಗಳನ್ನು ಕೂಡಲೇ ಮಾಡಿಕೊಡಲಾಗುವುದು ಎಂದು ಮಾಲಕರಾದ ವಿನಯ ಅನಿಲ್ ಹೆಗ್ಡೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here