ಅ.15-24 ದೇಂತಡ್ಕ ಶ್ರೀವನದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಸಂಭ್ರಮ

0

ಪುತ್ತೂರು:ಕೆದಿಲ ಗ್ರಾಮದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಅ.15ರಿಂದ ಪ್ರಾರಂಭಗೊಂಡು ಅ.24ರ ತನಕ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಅನುಗ್ರಹದೊಂದಿಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರು ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಲಿದೆ.


ಅ.೧೫ರಂದು ಬೆಳಿಗ್ಗೆ ನಿತ್ಯಪೂಜೆ, ಗಣಪತಿ ಹೋಮದೊಂದಿಗೆ ನವರಾತ್ರಿ ಉತ್ಸವಗಳಿಗೆ ಚಾಲನೆ ದೊರೆಯಲಿದೆ. ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ ನಿತ್ಯಪೂಜೆ, ಮಂಗಳಾರತಿ, ಚಂಡಿಕಾಹೋಮ, ಮಧ್ಯಾಹ್ನ ಸರ್ವಾಲಂಕಾರ ಪೂಜೆ, ಸರ್ವಸೇವೆ, ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಶ್ರೀದುರ್ಗಾ ನಮಸ್ಕಾರಪೂಜೆ, ರಂಗಪೂಜೆ, ರಾತ್ರಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.


ಅ.16ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಗಣಪತಿ ಹವನ, ಶ್ರೀ ವನದುರ್ಗಾ ಹವನ, ಅ.19ರಂದು ಲಲಿತಾ ಪಂಚಮಿ, ಅ.22ರಂದು ದುರ್ಗಾಷ್ಟಮಿ, ಅ.23ರಂದು ಮಹಾನವಮಿ, ಆಯುಧ ಪೂಜೆ, ವಾಹನ ಪೂಜೆ, ಅ.24ರಂದು ರಂದು ವಿಜಯದಶಮಿ, ವಿದ್ಯಾರಂಭ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮಗಳು:
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಸಂಜೆ 6ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅ.15ರಂದು ವಿದುಷಿ ವೀಣಾ ರಾಘವೇಂದ್ರ ನೆಹರುನಗರ ಇವರ ಶಿಷ್ಯರಿಂದ ಶಾಸ್ತ್ರೀಯ ಸಂಗೀತ, ಅ.16ರಂದು ಯಕ್ಷಕೂಟ ಬಡೆಕ್ಕಿಲ ಇವರಿಂದ ತಾಳಮದ್ದಳೆ, ಅ.17ರಂದು ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಇವರಿಂದ ಭಜನೆ, ಅ.18ರಂದು ಶ್ರೀರಾಮ ಭಜನಾ ಮಂದಿರ ಕೆದಿಲ ಇವರಿಂದ ಭಜನೆ, ಅ.19ರಂದು ಯಕ್ಷಶ್ರೀ ಹವ್ಯಾಸಿ ಬಳಗ ಪುತ್ತೂರು ಇವರಿಂದ ತಾಳಮದ್ದಳೆ, ಅ.22ರಂದು ಯಕ್ಷ ಜನ್ಸಾಲೆ ಪ್ರತಿಷ್ಠಾನದ ರಾಘವೇಂದ್ರ ಆಚಾರ್ಯ ಜನ್ಸಾಲೆ ನೇತೃತ್ವದಲ್ಲಿ ಸುದರ್ಶನ ವಿಜಯ ಚಂದ್ರಾವಳಿ ವಿಳಾಸ ಯಕ್ಷಗಾನ ಬಯಲಾಟ, ಅ.23ರಂದು ಮಾಣಿಲ ಅರವಿಂದ ಆಚಾರ್ಯ ಬಳಗದವರಿಂದ ಭಜನ್ ಸಂಧ್ಯಾ, ಅ.24ರಂದು ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯರಿಂದ ಭರತನಾಟ್ಯ ನೃತ್ಯ ಪ್ರಣಾಮ್ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here