17 ದಿನಗಳ ಥೆರಪಿ – ಮೊದಲ ದಿನವೇ 150ಕ್ಕೂ ಮಿಕ್ಕಿ ನೋಂದಾವಣೆ
ಪುತ್ತೂರು: ನಗರದ ಹೃದಯ ಭಾಗದಲ್ಲಿರುವ ಮಾಯಿದೆ ದೇವುಸ್ ಚರ್ಚ್, ಚರ್ಚ್ ನ ಆರೋಗ್ಯ ಆಯೋಗ ಮತ್ತು ಕಂಪಾನಿಯಾ ನೆಮ್ಮದಿ ವೆಲ್‌ನೆಸ್ ಸೆಂಟರ್‌ನಿಂದ ಪುತ್ತೂರಿನಲ್ಲಿ ಪ್ರಥಮ ಬಾರಿಗೆ 17 ದಿನಗಳ ಉಚಿತ ಬೃಹತ್ ಫೂಟ್ ಪಲ್ಸ್ ಥೆರಪಿ ಶಿಬಿರವು ಮಾಯಿದೆ ದೇವುಸ್ ಮಿನಿ ಹಾಲ್‌ನಲ್ಲಿ ಅ.15 ರಿಂದ 31ರ ವರೆಗೆ ಪೂರ್ವಾಹ್ನದಿಂದ ಅಪರಾಹ್ನದವರೆಗೆ ನಡೆಯಲಿದ್ದು ಇದರ ಉದ್ಘಾಟನೆ ಕಾರ್ಯಕ್ರಮವು ಅ.15 ರಂದು ನೆರವೇರಿತು.
ಮಾಯಿದೆ ದೇವುಸ್ ಚರ್ಚ್ ನ ಸಹಾಯಕ ಧರ್ಮಗುರು ವಂ|ಲೋಹಿತ್ ಅಜಯ್ ಮಸ್ಕರೇನ್ಹಸ್‌ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮಾನವನ ಆರೋಗ್ಯ ಉತ್ತಮವಿರಬೇಕಾದರೆ ಅಲ್ಲಿ ಮೆದುಳನ್ನು ಶಕ್ತಿಯುತವಾಗಿರಿಸಬೇಕು, ಸಮತೋಲನದ ಆಹಾರ ಸೇವೆನೆ ನಮ್ಮದಾಗಬೇಕು, ಇಡೀ ಶರೀರದ ಆರೋಗ್ಯ ಕಾಪಾಡಿಕೊಳ್ಳುವಂತಾಗಬೇಕು. ಆದ್ದರಿಂದ ಆರೋಗ್ಯದ ಬಗ್ಗೆ ಮುಂಜಾಗ್ರತೆ ಅತೀ ಅಗತ್ಯ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಆರೋಗ್ಯವೇ ಭಾಗ್ಯ. ಎಲ್ಲಾ ಇದ್ದು ಆರೋಗ್ಯ ಇಲ್ಲದಿದ್ದರೆ ಏನು ಪ್ರಯೋಜನ. ಆಧುನಿಕ ಯುಗದ ಒತ್ತಡದ ಜಂಜಾಟದಲ್ಲಿ ಆರೋಗ್ಯದಲ್ಲಿ ಸಮಸ್ಯೆ ಇಲ್ಲದವರು ಯಾರೂ ಇಲ್ಲ. ಜನರಿಗೆ ನೆಮ್ಮದಿ ತರುವಂತಹ ಆರೋಗ್ಯ ನಮ್ಮದಾಗಬೇಕು. ಜನರಲ್ಲಿ ಆರೋಗ್ಯ ಇರಬೇಕಾದರೆ ಅಲ್ಲಿ ಪ್ರಮುಖವಾಗಿ ಮಾನಸಿಕ ಆರೋಗ್ಯ ಪ್ರಮುಖವೆನಿಸಿದ್ದ, ಇಲ್ಲಿನ ಜನರ ಆರೋಗ್ಯದ ಬಗೆಗಿನ ಈ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳುವಂತಾಗಲಿ ಎಂದರು.
ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮಿಟಿಯ ಅಧ್ಯಕ್ಷ ಎಲ್.ಟಿ ರಝಾಕ್ ಹಾಜಿ ಮಾತನಾಡಿ, ಆಧುನಿಕ ಯುಗದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಆವಿಷ್ಕಾರಗೊಂಡು ಆರೋಗ್ಯದ ಮೇಲೆ ಉಪಯುಕ್ತ ಪರಿಣಾಮ ಬೀರುತ್ತದೆ ಮಾತ್ರವಲ್ಲ ಹಲವಾರು ರೋಗಗಳ ಶಮನಗೊಳ್ಳುವಿಕೆಗೆ ಸಹಕಾರಿಯಾಗಿದೆ. ಇಂತಹ ಆರೋಗ್ಯ ಥೆರಪಿ ಶಿಬಿರಗಳ ಪ್ರಯೋಜನವನ್ನು ಜನರು ಹೆಚ್ಚೆಚ್ಚು ಪಡೆದುಕೊಳ್ಳುವಂತಾಗಬೇಕು ಎಂದರು.
ಮಾಯಿದೆ ದೇವುಸ್ ಚರ್ಚ್ನ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಕಾರ್ಯದರ್ಶಿ ಶ್ರೀಮತಿ ಎವ್ಲಿನ್ ಡಿ’ಸೋಜ, ಮಾಯಿದೆ ದೇವುಸ್ ಚರ್ಚ್ ನ 21 ಆಯೋಗಗಳ ಸಂಚಾಲಕ ಜೋನ್ ಡಿ’ಸೋಜ, ಮಾಯಿದೆ ದೇವುಸ್ ಚರ್ಚ್ನ ಆರೋಗ್ಯ ಆಯೋಗಗಳ ಕಾರ್ಯದರ್ಶಿ ಶ್ರೀಮತಿ ಜೆಸಿಂತಾ ಪಿರೇರಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿದರು.
ಫೂಟ್ ಪಲ್ಸ್ ಥೆರಪಿ ಆರೋಗ್ಯದೆಡೆಗೆ ಒಂದು ಹೆಜ್ಜೆ..
ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಲಾಗಿದ್ದು ವೈದ್ಯಕೀಯವಾಗಿ ಪ್ರಾಮಾಣಿಕವಾಗಿದೆ. ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ವಿವಿಧ ಸರಳ ಮತ್ತು ದೀರ್ಘಕಾಲಿನ ಸಮಸ್ಯೆಗಳನ್ನು ಔಷಧಿರಹಿತವಾಗಿ, ಅಡ್ಡ ಪರಿಣಾಮವಿಲ್ಲದೆ ನಿವಾರಿಸಬಹುದಾಗಿದೆ. 30 ನಿಮಿಷ TENS ಮತ್ತು EMS ಥೆರಪಿಯಿಂದ ನಮ್ಮ ದೇಹದಲ್ಲಿ 5ಕಿ.ಮೀ ವಾಕಿಂಗ್ ಮಾಡಿದಷ್ಟು ರಕ್ತ ಸಂಚಾರ ಸಹಕಾರಿಯಾಗುತ್ತದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ದೇಶದಾದ್ಯಂತ 350 ಶಾಖೆಗಳನ್ನು ಹೊಂದಿದ್ದು, 10 ಲಕ್ಷಕ್ಕಿಂತ ಹೆಚ್ಚಿನ ಜನರು ಪರಿಹಾರ ಕಂಡುಕೊಂಡಿದ್ದಾರೆ. ಎದೆಯಲ್ಲಿ ಫೇಸ್ ಮೇಕರ್ ಅಳವಡಿಸಿದವರು, ಎರಡೂ ಕಿಡ್ನಿ ಕಳೆದುಕೊಂಡು ಡಯಾಲಿಸಿಸ್ ಮಾಡುವವರು, ಯಾವುದೇ ಸರ್ಜರಿಯ ಆರು ತಿಂಗಳಿನೊಳಗೆ ಇರುವವರು ಈ ಥೆರಪಿಯನ್ನು ಮಾಡಬಾರದು. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದ್ದು, ಈ ಥೆರಪಿ ಶಿಬಿರಕ್ಕೆ ನಾವು ನೀವು ಸೇರಿ ಆರೋಗ್ಯವಂತರಾಗೋಣ.
-ಕೆ.ಪ್ರಭಾಕರ ಸಾಲ್ಯಾನ್, ನೆಮ್ಮದಿ ವೆಲ್‌ನೆಸ್ ಸೆಂಟರ್, ಕಲ್ಲಾರೆ, ಪುತ್ತೂರು
ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ..
ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ವೆರಿಕೋಸ್ ವೇನ್, ಸ್ನಾಯು ಸೆಳೆತ, ಊತ, ಪಾರ್ಕಿನ್‌ಸನ್, ಸಯಾಟಿಕಾ, ಸರ್ವಿಕಲ್ ಸ್ಪಾಂಡಿಲೈಟಿಸ್, ನಿದ್ರಾಹೀನತೆ, ಥೈರಾಯಿಡ್, ಪಾರ್ಶ್ವವಾಯು, ಬೆನ್ನುನೋವು, ಬೊಜ್ಜು ನಿವಾರಣೆ, ಬಿ.ಪಿ/ಶುಗರ್, ಕುತ್ತಿಗೆ ನೋವು, ಸೊರಿಯಾಸಿಸ್, ಸಕ್ಕರೆ ಕಾಯಿಲೆಯಿಂದ ಬರುವ ಪಾದದ ಉರಿ, ಮಾಂಸಖಂಡಗಳ ಸೆಳೆತದಿಂದ ಮುಕ್ತಿ ಹಾಗೂ ಪರಿಚಲನೆ ಮತ್ತು ಇನ್ನಿತರ ಎಲ್ಲಾ ಕಾಯಿಲೆಗಳಿಗೆ ಪರಿಹಾರ