ಪುತ್ತೂರು: ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು, ಶ್ರೀ ವಿನಾಯಕ ಭಜನಾ ಮಂದಿರ ಸಂಟ್ಯಾರು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಸಂಪ್ಯ ಹಾಗೂ ಆರ್ಯಾಪು ಗ್ರಾಮ ಪಂಚಾಯತ್ ಇದರ ಜಂಟಿ ಸಹಯೋಗದೊಂದಿಗೆ ಕಾನೂನು ಮಾಹಿತಿ ಕಾರ್ಯಾಗಾರ ಮತ್ತು ಸ್ವಚ್ಛತಾ ಅಭಿಯಾನ ಕಾರ್ಯಕ್ರಮಗಳು ಅ.15ರಂದು ಸಂಟ್ಯಾರು ಸರಸ್ವತಿ ಬಿಲ್ಡಿಂಗ್‌ನಲ್ಲಿ ನಡೆಯಿತು.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಸಂಪ್ಯ ಇದರ ಉಪನಿರೀಕ್ಷಕ ಧನಂಜಯ ಬಿ.ಸಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸರಸ್ವತಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ರಾಜಗೋಪಾಲ ಬಾಲೆಗುಳಿ, ನ್ಯಾಯವಾದಿ ಕೃಷ್ಣಪ್ರಸಾದ್ ನಡ್ಸಾರ್, ಪ್ರಗತಿಪರ ಕೃಷಿಕ ಎ.ಪಿ. ಸದಾಶಿವ ಭಟ್ ಮರಿಕೆ, ಶ್ರೀ ವಿನಾಯಕ ಭಜನಾ ಮಂದಿರದ ಅಧ್ಯಕ್ಷ ಶರತ್ ಆಳ್ವ ಕೂರೇಳು, ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಬಾಲಕೃಷ್ಣ ನಾಯಕ್, ಆರ್ಯಾಪು ಗ್ರಾ.ಪಂ ಉಪಾಧ್ಯಕ್ಷ ಅಶೋಕ್, 4ನೇ ವಾರ್ಡಿನ ಸದಸ್ಯರಾದ ಹರೀಶ್ ನಾಯಕ್ ವಾಗ್ಲೆ, ಯತೀಶ್ ದೇವ ಸಂಟ್ಯಾರ್, ಕಸ್ತೂರಿ ಕೃಷ್ಣಪ್ಪ ಪೂಜಾರಿ ಕೂರೇಲು, ಪವಿತ್ರ ಸಂತೋಷ್ ರೈ ತೊಟ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಊರಿನ ಗಣ್ಯರನ್ನು ಸನ್ಮಾನಿಸಲಾಯಿತು. ಚೇತನ ಮರಿಕೆ ಪ್ರಾರ್ಥಿಸಿದರು. ಹರಿಪ್ರಸಾದ ಶರ್ಮ ಪುಂಡಿಕಾಯಿ ಸ್ವಾಗತಿಸಿದರು. ಸುಬ್ಬು ಸಂಟ್ಯಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.